'ಕ್ರಿಕೆಟ್ ರೂಲ್ಸ್ ಕಲಿಯುವ ಸಮಯ'; ವಿಶೇಷ ಉಡುಗೊರೆಗಾಗಿ ಕೊಹ್ಲಿಗೆ ಮ್ಯಾಂಚೆಸ್ಟರ್ ಸಿಟಿ ಮ್ಯಾನೇಜರ್ ಧನ್ಯವಾದ!
ಮ್ಯಾಂಚೆಸ್ಟರ್ ಸಿಟಿ ಮ್ಯಾನೇಜರ್ ಪೆಪ್ ಗಾರ್ಡಿಯೊಲಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿ ಅವರಿಂದ 'ವಿಶೇಷ ಉಡುಗೊರೆ' ಪಡೆದು ಧನ್ಯವಾದ ಹೇಳಿದ್ದಾರೆ.
ತರಬೇತುದಾರ ಪೆಪ್ ಗಾರ್ಡಿಯೊಲಾ ಅವರು ಕೊಹ್ಲಿ ಮತ್ತು ಐಪಿಎಲ್ ಫ್ರ್ಯಾಂಚೈಸ್ ಆರ್ಸಿಬಿಯ ದೊಡ್ಡ ಅಭಿಮಾನಿ. ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಸ್ತುತ ಆವೃತ್ತಿಯಲ್ಲಿ ಆರ್ ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ತಾನದಲ್ಲಿದ್ದಾರೆ. ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಬೆಂಗಳೂರಿನ ಅಜೇಯ ಓಟವನ್ನು ಶ್ಲಾಘಿಸುತ್ತಾ, 50 ವರ್ಷದ ಗಾರ್ಡಿಯೊಲಾ ನಾಯಕ ಕೊಹ್ಲಿ ಮತ್ತು ಅವರ ತಂಡದ ಪ್ರಯತ್ನಗಳನ್ನು ಶ್ಲಾಘಿಸಿದರು. ನಾನು ಕ್ರಿಕೆಟ್ ಮತ್ತು ಅದರ ನಿಯಮಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸಮಯ ಬಂದಿದೆ ಎಂದು ಭಾವಿಸುತ್ತೇನೆ ಎಂದು ಟ್ವೀಟಿಸಿದ್ದಾರೆ.
ದೇವದತ್ ಪಡಿಕ್ಕಲ್ ಅಜೇಯ 101 ಮತ್ತು ಕೊಹ್ಲಿ ಅಜೇಯ 72 ಬಾರಿಸಿದ್ದು ರಾಜಸ್ಥಾನ್ ರಾಯಲ್ಸ್ ವಿರುದ್ಧ 10 ವಿಕೆಟ್ ಜಯ ದಾಖಲಿಸಿತು. ಸಾರ್ವಕಾಲಿಕ ಶ್ರೇಷ್ಠ ವ್ಯವಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಗಾರ್ಡಿಯೊಲಾ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್‌ಸಿಬಿ ಜಯಗಳಿಸಿದ ನಂತರ, ಸ್ವತಃ ಆರ್‌ಸಿಬಿ ಜರ್ಸಿಯನ್ನು ಹಿಡಿದಿರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ: 'ಅಂತಿಮವಾಗಿ ಕ್ರಿಕೆಟ್‌ನ ನಿಯಮಗಳನ್ನು ಕಲಿಯುವ ಸಮಯ. ಶರ್ಟ್‌ಗಾಗಿ ನನ್ನ ಸ್ನೇಹಿತ ವಿರಾಟ್ ಕೊಹ್ಲಿಗೆ ಧನ್ಯವಾದಗಳು ಎಂದು ಟ್ವೀಟಿಸಿದ್ದಾರೆ.
ಇದಕ್ಕೆ ರೀಟ್ವೀಟ್ ಮಾಡಿರುವ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸಹ ಧನ್ಯವಾದ ತಿಳಿಸಿದ್ದಾರೆ.
ಕಳೆದ ವರ್ಷ, ಪೂಮಾ ಆಯೋಜಿಸಿದ್ದ ಇನ್‌ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ, ಜಾಗತಿಕ ಕ್ರೀಡಾ ಉಡುಪುಗಳ ಬ್ರ್ಯಾಂಡ್‌ನ ರಾಯಭಾರಿಗಳಾದ ಗಾರ್ಡಿಯೊಲಾ ಮತ್ತು ಕೊಹ್ಲಿ ಫುಟ್‌ಬಾಲ್‌ನ ಮೇಲಿನ ಪ್ರೀತಿಯ ಬಗ್ಗೆ ಮನಮೋಹಕ ಸಂಭಾಷಣೆಯಲ್ಲಿ ತೊಡಗಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ