ವಿರಾಟ್ ಕೊಹ್ಲಿಯ ಆಕ್ರಮಣಶೀಲ ಮನಸ್ಥಿತಿ ಮಿತಿಯಲ್ಲಿರಬೇಕು: ಭಾರತದ ಮಾಜಿ ಕ್ರಿಕೆಟಿಗ ಫರೋಖ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ನಾನು ಮೆಚ್ಚುತ್ತೇನೆ ಆದರೆ ಅವರ ಆಕ್ರಮಣಶೀಲ ಮನಸ್ಥಿತಿ ಮಿತಿಯಲ್ಲಿರಬೇಕು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಫರೋಖ್ ಇಂಜಿನಿಯರ್ ಹೇಳಿದ್ದಾರೆ. 
ಕೊಹ್ಲಿ
ಕೊಹ್ಲಿ

ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ನಾನು ಮೆಚ್ಚುತ್ತೇನೆ ಆದರೆ ಅವರ ಆಕ್ರಮಣಶೀಲ ಮನಸ್ಥಿತಿ ಮಿತಿಯಲ್ಲಿರಬೇಕು ಎಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಫರೋಖ್ ಇಂಜಿನಿಯರ್ ಹೇಳಿದ್ದಾರೆ. 

ಲಾರ್ಡ್ಸ್ ನಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 151 ರನ್ ಗಳ ಜಯ ಸಾಧಿಸಿತ್ತು. ಈ ವೇಳೆ ಕೊಹ್ಲಿ ಜೇಮ್ಸ್ ಆಂಡರ್ಸನ್ ಜೊತೆ ಮಾತಿನ ಜಗಳ ನಡೆಸಿದ್ದರು. ಇನ್ನು 272 ರನ್ ಗಳ ಗುರಿಯನ್ನು ಹೊಂದಿದ ಇಂಗ್ಲೆಂಡ್ ಅಂತಿಮ ದಿನ 120 ರನ್ ಗಳಿಗೆ ಆಲೌಟಾಯಿತು.

ಪಂದ್ಯ ಗೆದ್ದಿದ್ದಕ್ಕಾಗಿ ನಾನು ವಿರಾಟ್ ಅನ್ನು ಮೆಚ್ಚುತ್ತೇನೆ. ಆತ ಆಕ್ರಮಣಕಾರಿ ನಾಯಕ. ಇದು ಒಳ್ಳೆಯದು. ಖಂಡಿತವಾಗಿಯೂ ಅದು ಮಿತಿಯಲ್ಲಿರಬೇಕು. ಇಲ್ಲದಿದ್ದರೆ ಅಂಪೈರ್ ಅಥವಾ ಮ್ಯಾಚ್ ರೆಫರಿ ಮಧ್ಯಪ್ರವೇಶಿಸಬಹುದು ಎಂದು ಸ್ಪೋರ್ಟ್ಸ್ ಟಕ್ ಜೊತೆಗಿನ ಸಂದರ್ಶನದಲ್ಲಿ ಎಂಜಿನಿಯರ್ ಹೇಳಿದರು.

83 ವರ್ಷದ ಇಂಜಿನಿಯರ್, ಬುಮ್ರಾ ಮತ್ತು ಮೊಹಮ್ಮದ್ ಶಮಿ ಇಬ್ಬರೂ ಅದ್ಭುತ ಬ್ಯಾಟಿಂಗ್ ಮಾಡಿ ಇಂಗ್ಲೆಂಡ್ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ 89 ರನ್ ಗಳ ಅಜೇಯ ರನ್ ಕಲೆ ಹಾಕಿದ್ದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com