ವಿರಾಟ್ ನಾಯಕತ್ವದಲ್ಲಿ ಭಾರತ ಸೋಲಿಸುವುದು ಕಷ್ಟ: 7 ವರ್ಷಗಳಲ್ಲಿ ಕೇವಲ 2 ಸೋಲು, 23 ಪಂದ್ಯಗಳಲ್ಲಿ ಗೆಲುವು!

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಎರಡನೇ ಟೆಸ್ಟ್ ಪಂದ್ಯ ನಾಳೆ ಅಂದರೆ ಡಿಸೆಂಬರ್ 3 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿದೆ. ಎರಡನೇ ಟೆಸ್ಟ್ ಪಂದ್ಯ ನಾಳೆ ಅಂದರೆ ಡಿಸೆಂಬರ್ 3 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭವಾಗಲಿದೆ.

2ನೇ ಟೆಸ್ಟ್ ಪಂದ್ಯದ ವಿಶೇಷ ಅಂದ್ರೆ, ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ವಾಪಸ್ ಆಗುತ್ತಿರುವುದು. ಭಾರತದ ನೆಲದಲ್ಲಿ ನಡೆದಿರುವ 30 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇವರ ನೇತೃತ್ವದಲ್ಲಿ ಆಡಿದ 30 ಟೆಸ್ಟ್ ಪಂದ್ಯಗಳ ಪೈಕಿ 23 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅದೇ ಸಮಯದಲ್ಲಿ, 5 ಪಂದ್ಯಗಳು ಡ್ರಾಗೊಂಡಿವೆ. ಕೊಹ್ಲಿ ಕ್ಯಾಪ್ಟನ್ ಶಿಪ್ ನಲ್ಲಿ ಟೀಂ ಇಂಡಿಯಾ ಕೇವಲ 2 ಬಾರಿ ಮಾತ್ರ ಸೋಲು ಕಂಡಿದೆ.

2014ರಲ್ಲಿ ಕೊಹ್ಲಿ ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ತಂಡ ತವರಿನಲ್ಲಿ ಅದ್ಭುತ ಪ್ರದರ್ಶನ ನೀಡಿದೆ. ಭಾರತದ ನೆಲದಲ್ಲಿ ಟೀಂ ಇಂಡಿಯಾವನ್ನು ಸೋಲಿಸುವುದು ವಿದೇಶಿ ತಂಡಗಳಿಗೆ ಕನಸಿನ ಮಾತಾಗಿ ಪರಿಣಮಿಸಿದೆ. ಭಾರತ ಸೋಲು ಕಂಡಿರುವ ಎರಡು ಪಂದ್ಯಗಳು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಮಾತ್ರ.

ವಿರಾಟ್ ಇಲ್ಲಿಯವರೆಗೆ 65 ಟೆಸ್ಟ್ ಪಂದ್ಯಗಳಿಗೆ ನಾಯಕತ್ವ:

2014 ರಿಂದ ಇಲ್ಲಿಯವರೆಗೆ ವಿರಾಟ್ ಭಾರತಕ್ಕಾಗಿ 65 ಟೆಸ್ಟ್ ಪಂದ್ಯಗಳಿಗೆ ನಾಯಕರಾಗಿದ್ದಾರೆ. ಈ ಅವಧಿಯಲ್ಲಿ ತಂಡವು 38 ಪಂದ್ಯಗಳನ್ನು ಗೆದ್ದುಕೊಂಡಿದ್ದು, 16 ಪಂದ್ಯಗಳಲ್ಲಿ ಸೋತಿದೆ. 11 ಮ್ಯಾಚ್ ಗಳು ಡ್ರಾ ಆಗಿವೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುವ ಹಂತದಲ್ಲಿತ್ತು. ಆದ್ರೆ, ಕೊನೆ ಹಂತದಲ್ಲಿ ಬೌಲಿಂಗ್ ಅಷ್ಟೊಂದು ಪ್ರಭಾವ ಬೀರದ ಕಾರಣ ಡ್ರಾ ಮಾಡಿಕೊಂಡಿತು. ಡಿಸೆಂಬರ್ 3 ರಿಂದ ಕಿವೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಪುನರಾಗಮನ ಮಾಡುತ್ತಿದ್ದಾರೆ. ಈ ಪಂದ್ಯದಲ್ಲಿ ಟೀಂ ಇಂಡಿಯಾ ಹೊಸ ಶಕ್ತಿಯೊಂದಿಗೆ ಮೈದಾನಕ್ಕಿಳಿಯಲಿದೆ. ಅದೇ ಸಮಯದಲ್ಲಿ, ಇದು ರಾಹುಲ್ ದ್ರಾವಿಡ್ ಅವರ ಕೋಚಿಂಗ್‌ನಲ್ಲಿ ಕೊಹ್ಲಿಯ ಮೊದಲ ಪಂದ್ಯವಾಗಿದೆ.

ನಾಯಕನಾದ ಮೇಲೆ ಬದಲಾಯಿತು ವಿರಾಟ್ ಬ್ಯಾಟಿಂಗ್ ಶೈಲಿ:

ಟೀಮ್ ಇಂಡಿಯಾದ ನಾಯಕನಾಗುವ ಮೊದಲು ವಿರಾಟ್ ಭಾರತಕ್ಕಾಗಿ 31 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ, ಅವರ ಬ್ಯಾಟ್‌ನಿಂದ 2,098 ರನ್‌ಗಳು ಹರಿದುಬಂದಿವೆ. ಅಲ್ಲದೆ, ಅವರ ಸರಾಸರಿ 41.13 ಆಗಿತ್ತು. 2011 ರಿಂದ 2014 ರವರೆಗೆ ಟೆಸ್ಟ್ ಪಂದ್ಯಗಳಲ್ಲಿ 7 ಶತಕಗಳನ್ನು ವಿರಾಟ್ ಗಳಿಸಿದ್ದಾರೆ.

ಅದೇ ಸಮಯದಲ್ಲಿ, ನಾಯಕನಾದ ನಂತರ ಕೊಹ್ಲಿ 65 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಅವರ ಬ್ಯಾಟಿಂಗ್ ಸರಾಸರಿ 56.10 ಆಗಿದೆ. ನಾಯಕನಾಗಿ 5,667 ರನ್ ಗಳನ್ನು ವಿರಾಟ್ ಕೊಹ್ಲಿ ಗಳಿಸಿದ್ದು, ಅವರ ಬ್ಯಾಟ್‌ನಿಂದ 20 ಶತಕಗಳನ್ನು ಗಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com