![ಕೊಹ್ಲಿ](http://media.assettype.com/kannadaprabha%2Fimport%2F2021%2F12%2F3%2Foriginal%2FKohli.jpg?w=480&auto=format%2Ccompress&fit=max)
ಮುಂಬೈ: ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕರಾದ ಮಾಯಾಂಕ್ ಅಗರವಾಲ್ ಅಜೇಯ 52 ಮತ್ತು ಶುಭಮನ್ ಗಿಲ್ 44 ರನ್ ಗಳಿಸಿ ಔಟಾದರು. ಈ ಇಬ್ಬರು 80 ರನ್ ಗಳ ಜೊತೆಯಾಟ ನೀಡಿದ್ದರು.
ಶುಭಮನ್ ಗಿಲ್ ಔಟಾದ ನಂತರ ಬಂದ ಚೇತೇಶ್ವರ ಪೂಜಾರ ಅಜಾಝ್ ಪಟೇಲ್ ಬೌಲಿಂಗ್ ನಲ್ಲಿ ಔಟಾದರು. ಪೂಜಾರ ಬೆನ್ನಲ್ಲೇ ಬಂದ ವಿರಾಟ್ ಕೊಹ್ಲಿ ಸಹ ಅಜಾಝ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯು ಆಗಿ ಔಟಾಗಿ ಪೆಲಿವಿಯನ್ ಸೇರಿದರು.
ಪ್ರಸ್ತುತ ಭಾರತ 40 ಓವರ್ ಗಳ ಮುಕ್ತಾಯಕ್ಕೆ 3 ವಿಕೆಟ್ ನಷ್ಟಕ್ಕೆ 121 ರನ್ ಪೇರಿಸಿದೆ. 58 ರನ್ ಗಳಿಸಿರುವ ಮಾಯಾಂಕ್ ಅಗರವಾಲ್ ಮತ್ತು ಶ್ರೇಯಸ್ ಅಯ್ಯರ್ 11 ರನ್ ಗಳಿಸಿ ಆಡುತ್ತಿದ್ದಾರೆ.
ನ್ಯೂಜಿಲ್ಯಾಂಡ್ ಪರ ಅಜಾಝ್ ಪಟೇಲ್ 3 ವಿಕೆಟ್ ಪಡೆದು ಟೀಂ ಇಂಡಿಯಾ ಆಟಗಾರರಿಗೆ ಮಾರಕವಾಗಿದ್ದಾರೆ.
Advertisement