ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಕೊಹ್ಲಿ
ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಕೊಹ್ಲಿ

ಆ್ಯಶಸ್ ನಲ್ಲಿ ಭರ್ಜರಿ ಪ್ರದರ್ಶನ: ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ  ಆಸಿಸ್ ನ ಲ್ಯಾಬುಸ್ಚಾಗ್ನೆ ಅಗ್ರ ಸ್ಥಾನಕ್ಕೆ, 7ಕ್ಕೆ ಕುಸಿದ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾದ ದೈತ್ಯ ಬ್ಯಾಟ್ಸ್ ಮನ್ ಮಾರ್ನಸ್ ಲ್ಯಾಬುಸ್ಚಾಗ್ನೆ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೇರಿದ್ದಾರೆ.

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿರುವ ಆಸ್ಟ್ರೇಲಿಯಾದ ದೈತ್ಯ ಬ್ಯಾಟ್ಸ್ ಮನ್ ಮಾರ್ನಸ್ ಲ್ಯಾಬುಸ್ಚಾಗ್ನೆ ಮೊದಲ ಬಾರಿಗೆ ಅಗ್ರ ಸ್ಥಾನಕ್ಕೇರಿದ್ದಾರೆ.

ಈಗಾಗಲೇ ಮೊದಲೆರಡು ಪಂದ್ಯಗಳಲ್ಲಿ ಆಸ್ಚ್ರೇಲಿಯಾ ತಂಡ ಗೆಲುವು ಸಾಧಿಸಿ ಟೂರ್ನಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದ್ದು, ಮುಂದಿನ ಮೂರನೇ ಪಂದ್ಯ ಇದೇ ಡಿಸೆಂಬರ್ 26ರಿಂದ ಆರಂಭವಾಗಲಿದೆ. ಈ ಪಂದ್ಯ ಆರಂಭಕ್ಕೂ ಮುನ್ನವೇ ಆಸಿಸ್ ಪಡೆಗೆ ಮತ್ತೊಂದು ಸಿಹಿ ಸುದ್ದಿ ದೊರೆತಿದ್ದು, ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಮಾರ್ನಸ್ ಲ್ಯಾಬುಸ್ಚಾಗ್ನೆ ಐಸಿಸಿ ಟೆಸ್ಟ್ ಬ್ಯಾಟರ್ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲೆರಡು ಪಂದ್ಯಗಳಿಂದ ಲ್ಯಾಬುಸ್ಚಾಗ್ನೆ 228 (ಮೊದಲ ಟೆಸ್ಟ್ 74, 2ನೇ ಟೆಸ್ಟ್ 103, 51 ರನ್ )ರನ್ ಗಳಿಸಿದ್ದರು. ಈ ಆದ್ಭುತ ಪ್ರದರ್ಶನದಿಂದಾಗಿಯೇ ಲ್ಯಾಬುಸ್ಚಾಗ್ನೆ ಟೆಸ್ಟ್ ರ್ಯಾಂಕಿಂಗ್ ನಲ್ಲಿ 912 ಶ್ರೇಯಾಂಕಗಳೊಂದಿಗೆ ಅಗ್ರ ಸ್ಥಾನಕ್ಕೇರಿದ್ದಾರೆ.

7ನೇ ಸ್ಥಾನಕ್ಕೆ ಕುಸಿದ ಕೊಹ್ಲಿ
ಇನ್ನು 6ನೇ ಸ್ಥಾನದಲ್ಲಿದ್ದ ಭಾರತ ತಂಡದ ವಿರಾಟ್ ಕೊಹ್ಲಿ 756 ಶ್ರೇಯಾಂಕಗಳೊಂದಿಗೆ 7ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ಹಿಂದೆ ಅಗ್ರ ಸ್ಥಾನದಲ್ಲಿದ್ದ ಇಂಗ್ಲೆಂಡ್ ನ ಜೋ ರೂಟ್  2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ 884 ಶ್ರೇಯಾಂಕಗಳೊಂದಿಗೆ 3, ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸ ನ್ 879 ಶ್ರೇಯಾಂಕಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ.

ಭಾರತದ ರೋಹಿತ್ ಶರ್ಮಾ 797 ಶ್ರೇಯಾಂಕಗಳೊಂದಿಗೆ 5 ಮತ್ತು, 775 ಶ್ರೇಯಾಂಕ ಹೊಂದಿರುವ ಡೇವಿಡ್ ವಾರ್ನರ್ 6ನೇ ಸ್ಥಾನದಲ್ಲಿದ್ದಾರೆ. 

ಉಳಿದಂತೆ ಟೆಸ್ಟ್ ಬೌಲರ್ ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅಗ್ರಸ್ಥಾನಿಯಾಗಿದ್ದು, ಭಾರತದ ಆರ್ ಅಶ್ವಿನ್ 2ನೇ ಸ್ಥಾನದಲ್ಲಿದ್ದಾರೆ. ಆಲ್ರೌಂಡರ್ ಗಳ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ನ ಜೇಸನ್ ಹೋಲ್ಟರ್ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿ ಭಾರತದ ಆರ್ ಅಶ್ವಿನ್ ಇದ್ದಾರೆ.
 

X

Advertisement

X
Kannada Prabha
www.kannadaprabha.com