700 ವಿಕೆಟ್ ಪಡೆದರೂ ಏಕೆ ಕೈಬಿಡಲಾಯಿತು; ಇದಕ್ಕೆ ಇಂದಿಗೂ ನನ್ನ ಬಳಿ ಉತ್ತರವಿಲ್ಲ': ಕರಾಳ ಸತ್ಯ ಬಿಚ್ಚಿಟ್ಟ ಹರ್ಭಜನ್ ಸಿಂಗ್

ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ 23 ವರ್ಷಗಳ ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದು ಇದೀಗ ಟೀಂ ಇಂಡಿಯಾದ ದುಖಃದ ಕಥೆಯನ್ನು ಬಿಚ್ಚಿಟ್ಟಿದ್ದಾರೆ. 
ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್

ನವದೆಹಲಿ: ಟೀಂ ಇಂಡಿಯಾದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ 23 ವರ್ಷಗಳ ತಮ್ಮ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದು ಇದೀಗ ಟೀಂ ಇಂಡಿಯಾದ ದುಖಃದ ಕಥೆಯನ್ನು ಬಿಚ್ಚಿಟ್ಟಿದ್ದಾರೆ. 

ಟೆಸ್ಟ್ 400 ವಿಕೆಟ್ ಪಡೆದಿರುವ ಓರ್ವ ಆಟಗಾರನನ್ನು ತಂಡದಿಂದ ದಿಢೀರ್ ಅಂತ ತೆಗೆದುಹಾಕುತ್ತಾರೆ. ಹೀಗೆ ಸ್ಥಾನ ಕಳೆದುಕೊಂಡ ಆ ಆಟಗಾರನಿಗೆ ಮತ್ತೆ ಅವಕಾಶ ಸಿಗುವುದಿಲ್ಲ ಹಾಗೂ ತಂಡದಿಂದ ಯಾಕೆ ತೆಗೆದುಹಾಕಲಾಯಿತು ಎಂಬುದಕ್ಕೆ ಉತ್ತರವನ್ನು ಕೂಡ ಸಿಗುವುದಿಲ್ಲ. ಅಲ್ಲದೆ ಈ ಕುರಿತು ನಾನು ಅನೇಕರ ಬಳಿ ಕಾರಣವನ್ನು ಕೇಳಿದೆ ಆದರೆ ಯಾರೂ ಕೂಡ ನನಗೆ ಪ್ರತ್ಯುತ್ತರವನ್ನು ನೀಡಲೇ ಇಲ್ಲ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. 

ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಕೂಡ ತಮ್ಮನ್ನು ತಂಡದಿಂದ ಕೈ ಬಿಟ್ಟರು. ಅದಕ್ಕೆ ನಿರ್ದಿಷ್ಠ ಕಾರಣವನ್ನು ಯಾರೂ ನೀಡಲಿಲ್ಲ ಎಂದು ತಮಗಾದ ಅವಮಾನ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. 2016ರ ನಂತರ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಹರ್ಭಜನ್ ಸಿಂಗ್ ವಿಫಲರಾಗಿದ್ದರು. ಅವಕಾಶ ಸಿಗದ್ದಕ್ಕೆ ಬೇಸರ ವಕ್ತಪಡಿಸಿರುವ ಅವರು ತನಗೆ ಮತ್ತೆ ಅವಕಾಶಗಳನ್ನು ನೀಡಿದ್ದರೆ ನಿವೃತ್ತಿ ಸಮಯಕ್ಕೆ 500ರಿಂದ 550 ಟೆಸ್ಟ್ ವಿಕೆಟ್ ಗಳನ್ನು ಪಡೆದಿರುತ್ತಿದ್ದೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಗಳ ಪಟ್ಟಿಯಲ್ಲಿ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ಕುಂಬ್ಳೆ ಒಟ್ಟಾರೆ 953 ವಿಕೆಟ್ ಪಡೆದಿದ್ದರೆ 707 ವಿಕೆಟ್ ಪಡೆದುಕೊಂಡಿರುವ ಹರ್ಭಜನ್ ಸಿಂಗ್ ಎರಡನೇ ಸ್ಥಾನದಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com