ಮೈದಾನದಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಇಬ್ಬರು ಮಹಿಳಾ ಕ್ರಿಕೆಟ್ಟಿಗರು..!

ಬೌನ್ಸರ್ ತಗುಲುವುದರಿಂದ, ಇಲ್ಲವೇ ಡೈವ್‌ ಹೊಡೆಯುವುದರೊಂದ ಆಟಗಾರರು ಮೈದಾನದಲ್ಲಿ ಕೆಳಗೆ ಬೀಳುವುದು ಸಾಮಾನ್ಯ. ಆದರೆ, ಹಠಾತ್ ಪ್ರಜ್ಞೆ ಕಳೆದುಕೊಂಡು ಮೈದಾನದಲ್ಲಿಯೇ ಕುಸಿದು ಬೀಳುವುದು ಅಪರೂಪ. ಕೇವಲ ಹತ್ತು ನಿಮಿಷಗಳ ಅಧಿಯಲ್ಲಿ ಒಂದೇ ತಂಡದ ಇಬ್ಬರು ಕ್ರಿಕೆಟಿಗರು ಕುಸಿದು ಬಿದ್ದರೆ ಕಳವಳ ಖಂಡಿತ.
ಘಟನೆಯ ದೃಶ್ಯ
ಘಟನೆಯ ದೃಶ್ಯ
Updated on: 

ಆಂಟಿಗುವಾ : ಬೌನ್ಸರ್ ತಗುಲುವುದರಿಂದ, ಇಲ್ಲವೇ ಡೈವ್‌ ಹೊಡೆಯುವುದರೊಂದ ಆಟಗಾರರು ಮೈದಾನದಲ್ಲಿ ಕೆಳಗೆ ಬೀಳುವುದು ಸಾಮಾನ್ಯ. ಆದರೆ, ಹಠಾತ್ ಪ್ರಜ್ಞೆ ಕಳೆದುಕೊಂಡು ಮೈದಾನದಲ್ಲಿಯೇ ಕುಸಿದು ಬೀಳುವುದು ಅಪರೂಪ. ಕೇವಲ ಹತ್ತು ನಿಮಿಷಗಳ ಅಧಿಯಲ್ಲಿ ಒಂದೇ ತಂಡದ ಇಬ್ಬರು ಕ್ರಿಕೆಟಿಗರು ಕುಸಿದು ಬಿದ್ದರೆ ಕಳವಳ ಖಂಡಿತ. ವೆಸ್ಟ್ ಇಂಡೀಸ್, ಪಾಕಿಸ್ತಾನ ಮಹಿಳಾ ಕ್ರಿಕೆಟ್‌ ಪಂದ್ಯದಲ್ಲಿ ಈ ರೀತಿಯ ಘಟನೆ ನಡೆದಿದ್ದರಿಂದ ಎಲ್ಲರೂ ಒಮ್ಮಗೆ ಭಯ ಭೀತರಾದರು.

ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳು ಎರಡನೇ ಟಿ 20 ಯಲ್ಲಿ ಮುಖಾಮುಖಿಯಾಗಿದ್ದವು ಮೊದಲು ಆತಿಥೇಯ ತಂಡ ಬ್ಯಾಟಿಂಗ್ ಮಾಡಿತು. ನಂತರ ಪಾಕಿಸ್ತಾನ ಆಡುತ್ತಿದ್ದಾಗ ಕೆರಿಬಿಯನ್ ಕ್ರಿಕೆಟಿಗರಾದ ಚಿನೆಲ್ಲಿ ಹೆನ್ರಿ, ಚೆಡಿನ್ ನೇಷನ್ ಹತ್ತು ನಿಮಿಷಗಳ ಅವಧಿಯಲ್ಲಿ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದರು. ಕೂಡಲೇ ಎಚ್ಚೆತ್ತುಕೊಂಡ ಸಹಾಯಕ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಈಗ ಈ ವೀಡಿಯೊಗಳು ವೈರಲ್ ಆಗಿವೆ.

ಪ್ರಸ್ತುತ ಅವರಿಬ್ಬರೂ ಪ್ರಜ್ಞೆ ಮರಳಿ ಬಂದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ. ಆದರೆ ಅವರೇಕೆ ಮೈದಾನದಲ್ಲಿ ಕುಸಿದು ಬಿದ್ದರು ಎಂಬುದು ಈಗಲೂ ರಹಸ್ಯವಾಗಿಯೇ ಇಳಿದಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಪಂದ್ಯ ಪುನರಾರಂಭವಾಯಿತು ಮಳೆಯೊಂದಿಗೆ ವಿಂಡೀಸ್ ಡೆಕ್‌ ವರ್ತ್‌ ಲೂಯಿಸ್ ನಿಯಮದಂತೆ ಗೆದ್ದಿತು. ಮೈದಾನದಲ್ಲಿ ಕುಸಿದು ಬಿದ್ದ ಚೆನೆಲ್ಲಿ ಹಾಗೂ ಚೆಡಿನ್ ಅವರ ಆರೋಗ್ಯಕ್ಕಾಗಿ ಪಾಕಿಸ್ತಾನ ನಾಯಕಿ ಜೇವಿಯರ್ ಖಾನ್ ಪ್ರಾರ್ಥಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com