ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಹರ್ಲೀನ್ ಡಿಯೋಲ್ ಶುಕ್ರವಾರ ರಾತ್ರಿ ಮೈದಾನದಲ್ಲಿ ಮಹೋನ್ನತ ಪ್ರಯತ್ನದ ನಂತರ ಹಿಡಿದ ಕ್ಯಾಚ್ ಒಂದು ಸಾಕಷ್ಟು ವೈರಲ್ ಆಗಿದೆ. ಇಂಗ್ಲೆಂಡ್ ನ ಅಮಿ ಜೋನ್ಸ್ ಅವರನ್ನು ಔಟ್ ಮಾಡಲು ಈ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಅಲ್ಲದೆ ಈ ಮೂಲಕ ಇಂಗ್ಲೆಂಡ್ ಆಟಗಾರ್ತು ಅರ್ಧಶತಕ ಬಾರಿಸುವುದನ್ನು ತಪ್ಪಿಸಿದ್ದಾರೆ.
ಭಾರತ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಅನ್ನು ನಾರ್ಥಾಂಪ್ಟನ್ ನಲ್ಲಿ ಆಡಲಾಗುತ್ತಿತ್ತು. ಪಂದ್ಯದಲ್ಲಿ ಭಾರತ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 19 ನೇ ಓವರ್‌ನಲ್ಲಿ ಇಂಗ್ಲೆಂಡ್ ಈಗಾಗಲೇ 4 ವಿಕೆಟ್‌ಗೆ 166 ರನ್ ಗಳಿಸಿತ್ತು, ಅಮಿ ಜೋನ್ಸ್ 26 ಎಸೆತಗಳಲ್ಲಿ 43 ರನ್ ಗಳಿಸಿ ಭಾರತದ ಶಿಖಾ ಪಾಂಡೆ ಅವರಿಗೆ ಶಾಕ್ ನೀಡಿದ್ದರು. ಆ ಸಮಯದಲ್ಲಿ ಹರ್ಲೀನ್ ಬೌಂಡರಿ ಲೈನ್ ಗೆ ಅಡ್ಡವಾಗಿ ಹಾರಿ, ಚೆಂಡನ್ನು ಒಳಗೆ ಎಸೆದರು ಮತ್ತು ಮಹಿಳಾ ಕ್ರಿಕೆಟ್‌ನಲ್ಲಿ ತೆಗೆದುಕೊಂಡ ಅತ್ಯುತ್ತಮ ಕ್ಯಾಚ್‌ಗಳಲ್ಲಿ ಒಂದೆಂದು ಇದನ್ನು ಪರಿಗಣಿಸಲಾಗಿದೆ.
ಮೈದಾನದಲ್ಲಿ ಅಂತಹ ಅದ್ಭುತದ ಹೊರತಾಗಿಯೂ, ಇಂಗ್ಲೆಂಡ್ ವಿರುದ್ಧದ ಮಳೆಗಾಲದ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್ 20 ಓವರ್‌ಗಳಲ್ಲಿ 177/7 ರನ್ ಗಳಿಸಿದ ನಂತರ, ಭಾರತವು 8.4 ಓವರ್‌ಗಳಲ್ಲಿ 54/3 ಅನ್ನು ತಲುಪಲು ಸಾಧ್ಯವಾಯಿತು. ಆದರೆ ಹರ್ಲೀನ್ ಅವರ ಅದ್ಭುತ ಕ್ಯಾಚ್ ಭಾರತೀಯ ಅಭಿಮಾನಿಗಳಿಗೆ ಒಂದು ಅದ್ಭುತ ನೆನಪಾಗಿ ಉಳಿದಿದೆ.
Out of 10, how much would you rate this epic catch by Harleen Deol?
Advertisement