ಭಾರತ ವರ್ಸಸ್ ಇಂಗ್ಲೆಂಡ್: ಬೆರಳಿನ ಗಾಯದಿಂದಾಗಿ ಸರಣಿಯಿಂದ ಹೊರಗುಳಿದ ವಾಷಿಂಗ್ಟನ್ ಸುಂದರ್

ಬ್ರಿಟನ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಶಿಬಿರದಲ್ಲಿ ಗಾಯದ ಪಟ್ಟಿ ಬೆಳೆಯುತ್ತಲಿದೆ. ಕಾಲಿನ ಗಾಯದಿಂದಾಗಿ ಆರಂಭಿಕ ಬ್ಯಾಟ್ಸ್ ಮನ್ ಶುಬ್ಮನ್ ಗಿಲ್ ಸ್ವದೇಶಕ್ಕೆ ಮರಳಿದ ಬೆನ್ನಲ್ಲೇ ಇದೀಗ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.
ವಾಷಿಂಗ್ಟನ್ ಸುಂದರ್
ವಾಷಿಂಗ್ಟನ್ ಸುಂದರ್

ಚೆನ್ನೈ: ಬ್ರಿಟನ್ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಶಿಬಿರದಲ್ಲಿ ಗಾಯದ ಪಟ್ಟಿ ಬೆಳೆಯುತ್ತಲಿದೆ. ಕಾಲಿನ ಗಾಯದಿಂದಾಗಿ ಆರಂಭಿಕ ಬ್ಯಾಟ್ಸ್ ಮನ್ ಶುಬ್ಮನ್ ಗಿಲ್ ಸ್ವದೇಶಕ್ಕೆ ಮರಳಿದ ಬೆನ್ನಲ್ಲೇ ಇದೀಗ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

ಬೆರಳಿನ ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ವಾಷಿಂಗ್ಟನ್ ಸುಂದರ್ ಕೂಡ  ಹೊರಗುಳಿದಿದ್ದಾರೆ. ಇನ್ನು ವೇಗಿ ಅವೇಶ್ ಖಾನ್ ಕೂಡ ಬೆರಳಿನ ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದು, ಭಾರತದ ಪ್ರಸ್ತುತ ತಂಡದ ಸಾಮರ್ಥ್ಯವು 24ರಿಂದ 21ಕ್ಕೆ ಇಳಿದಿದೆ.

ಕೌಂಟಿ ಸೆಲೆಕ್ಟ್ ಇಲೆವೆನ್ ವಿರುದ್ಧದ ಅಭ್ಯಾಸ ಪಂದ್ಯದ ಮೂರನೇ ದಿನ ವಾಷಿಂಗ್ಟನ್ ಸುಂದರ್ ಗಾಯಗೊಂಡಿದ್ದು, ಅವೇಶ್ ಜೊತೆಗೆ ವಾರಾಂತ್ಯದಲ್ಲಿ ಸ್ವದೇಶಕ್ಕೆ ಮರಳುತ್ತಾರೆ ಎಂದು ತಿಳಿದುಬಂದಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ವಾಷಿಂಗ್ಟನ್ ಗೆ ಬೆರಳಿನ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಗೆ ವಿಶ್ರಾಂತಿ ಪಡೆಯಲು ಸೂಚಿಸಲಾಯಿತು. ಎರಡು ವಾರಗಳ ವಿರಾಮದ ನಂತರ ತಂಡಕ್ಕೆ ಸೇರ್ಪಡೆಯಾದ ನಂತರ, ತರಬೇತಿ ಅವಧಿಯಲ್ಲಿ ಅವರು ಸ್ವಲ್ಪ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರಿಗೆ ಒಂದು ತಿಂಗಳ ವಿಶ್ರಾಂತಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ 21 ಆಟಗಾರರು ಲಭ್ಯವಿದ್ದರೂ, ಬ್ಯಾಟಿಂಗ್ ಘಟಕವು ವೀಕ್ ಆಗಿದೆ. ವಾಸ್ತವವಾಗಿ, ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ಪಂದ್ಯವನ್ನು ಆಡುತ್ತಿಲ್ಲ. ಕಾರಣ ಅವರಿಗೆ ಬೆನ್ನು ನೋವು. ಇನ್ನು ಉಪನಾಯಕ ಅಜಿಂಕ್ಯ ರಹಾನೆ ಕೂಡ ಮಂಡಿರಜ್ಜು ಗಾಯದಿಂದಾಗಿ ಕಣಕ್ಕಿಳಿಯಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com