ಬಿಸಿಸಿಐ ನೆರವಿನೊಂದಿಗೆ ಚಾರ್ಟರ್ ವಿಮಾನದಲ್ಲಿ ಆಟಗಾರರು ತವರಿಗೆ: ಕ್ರಿಕೆಟ್ ಆಸ್ಟ್ರೇಲಿಯಾ

ಐಪಿಎಲ್ ನಲ್ಲಿ ಪಾಲ್ಗೊಂಡಿದ್ದ ಆಸಿಸ್ ಆಟಗಾರರಿಗೆ ಬಿಸಿಸಿಐ ನೆರವು ನೀಡಲಿದ್ದು, ಚಾರ್ಟರ್ ವಿಮಾನದಲ್ಲಿ ಮಾಲ್ಡೀವ್ಸ್ ಅಥವಾ ಶ್ರೀಲಂಕಾ ಮಾರ್ಗವಾಗಿ ಆಟಗಾರರು ಆಸ್ಟ್ರೇಲಿಯಾ ತಲುಪಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ಆಸಿಸ್ ಆಟಗಾರರು (ಸಂಗ್ರಹ ಚಿತ್ರ)
ಆಸಿಸ್ ಆಟಗಾರರು (ಸಂಗ್ರಹ ಚಿತ್ರ)

ನವದೆಹಲಿ: ಐಪಿಎಲ್ ನಲ್ಲಿ ಪಾಲ್ಗೊಂಡಿದ್ದ ಆಸಿಸ್ ಆಟಗಾರರಿಗೆ ಬಿಸಿಸಿಐ ನೆರವು ನೀಡಲಿದ್ದು, ಚಾರ್ಟರ್ ವಿಮಾನದಲ್ಲಿ ಮಾಲ್ಡೀವ್ಸ್ ಅಥವಾ ಶ್ರೀಲಂಕಾ ಮಾರ್ಗವಾಗಿ ಆಟಗಾರರು ಆಸ್ಟ್ರೇಲಿಯಾ ತಲುಪಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನಿರ್ಧಿಷ್ಟಾವಧಿಗೆ ಮುಂದೂಡಿದ ಬಳಿಕ, ಐಪಿಎಲ್ ನಲ್ಲಿ ಆಡಲು ಬಂದಿದ್ದ ವಿದೇಶಿ ಆಟಗಾರರು ತವರಿನತ್ತ ಮುಖ ಮಾಡಿದ್ದಾರೆ. ಆದರೆ ಆಸ್ಚ್ರೇಲಿಯಾ ಸರ್ಕಾರ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿರುವುದರಿಂದ ಆಸ್ಟ್ರೇಲಿಯಾ ಆಟಗಾರರು ಭಾರತದಲ್ಲಿ ಸಿಕ್ಕಿ  ಹಾಕಿಕೊಂಡಿದ್ದು, ಈ ಆಟಗಾರರ ನೆರವಿಗೆ ಬಿಸಿಸಿಐ ಧಾವಿಸಿದೆ. ಮೂಲಗಳ ಪ್ರಕಾರ ಆಸೀಸ್ ಆಟಗಾರರನ್ನು ಶ್ರೀಲಂಕಾ ಅಥವಾ ಮಾಲ್ಡೀವ್ಸ್ ಗೆ ವಿಶೇಷ ವಿಮಾನಗಳ ಮೂಲಕ ಕಳುಹಿಸುವ ಚಿಂತನೆ ನಡೆದಿದೆ.

ಭಾರತದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟಿನಿಂದಾಗಿ ಐಪಿಎಲ್ ಲೀಗ್ ಅನ್ನು ಮಂಗಳವಾರ ಮುಂದೂಡಲಾಗಿತ್ತು. ದೆಹಲಿ ಕ್ಯಾಪಿಟಲ್ಸ್ ತಂಡದ ಇಂಗ್ಲೆಂಡ್ ಸದಸ್ಯರು ತವರಿಗೆ ತೆರಳಲು ದೆಹಲಿಯಿಂದ ಅಹಮದಾಬಾದ್ ಗೆ ಆಗಮಿಸಿದ್ದಾರೆ. ಅಹಮದಾಬಾದ್ ನಿಂದ ಅವರು ಇಂಗ್ಲೆಂಡ್ ತೆರಳುವ ಸಾಧ್ಯತೆ ಇದೆ. 

15 ದಿನ ಕಾಯಬೇಕಾದ ಪರಿಸ್ಥಿತಿ
ಇನ್ನು ಆಸ್ಟ್ರೇಲಿಯಾದ ಆಟಗಾರರು, ತರಬೇತುದಾರರು, ಅಂಪೈರ್‌ಗಳು ಮತ್ತು ಮಾಧ್ಯಮ ಸಿಬ್ಬಂದಿಯನ್ನು ಒಳಗೊಂಡ 38-ಜನರ ತಂಡವು ಭಾರತದಿಂದ ತಮ್ಮ ತವರು ಮುಟ್ಟಲು ಕನಿಷ್ಠ ಮೇ 15ರ ವರೆಗೆ ಕಾಯಬೇಕಾಗುತ್ತದೆ. "ವಿಶೇಷ ವಿಮಾನಗಳ ಮೂಲಕ ಮುಂದಿನ ಎರಡು ಅಥವಾ ಮೂರು ದಿನಗಳಲ್ಲಿ  ಭಾರತದಿಂದ ಬೇರೆ ದೇಶಕ್ಕೆ ಕಳುಹಿಸುವ ಯೋಜನೆ ನಡೆದಿದೆ. ಬಿಸಿಸಿಐ ಆಟಗಾರರನ್ನು ಭಾರತದಿಂದ ಹೊರಗೆ ಸ್ಥಳಾಂತರಿಸುವ ರೂಪು ರೇಷೆ ಸಿದ್ಧ ಪಡಿಸುತ್ತಿದೆ. ಅಲ್ಲಿಂದ ಅವರು ಆಸ್ಟ್ರೇಲಿಯಾಕ್ಕೆ ಹಿಂದಿರುಗಲು ಅನುಕೂಲವಾಗುತ್ತದೆ. ಆಟಗಾರರು ತವರಿಗೆ ಸುರಕ್ಷಿತವಾಗಿ ಬರುವವರೆಗೆ ಕಾಯಲಾಗುತ್ತದೆ" ಎಂದು  ಸಿಎ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ನಿಕ್ ಹಾಕ್ಲಿ ಸಿಡ್ನಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

'ಸದ್ಯ ಬಿಸಿಸಿಐ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಆಟಗಾರರನ್ನು ವಿಶೇಷ ವಿಮಾನದ ಮೂಲಕ ಮಾಲ್ಡೀವ್ಸ್ ಮತ್ತು ಶ್ರೀಲಂಕಾಕ್ಕೆ ತಲುಪಿಸುವ ಯೋಚನೆ ಇದೆ ಎಂದು ಹೇಳಿದ್ದಾರೆ.

ಕೋವಿಡ್-19 ಸೋಂಕು ಕಂಡು ಬಂದಿದ್ದ, ಆಸ್ಟ್ರೇಲಿಯಾದ ಬ್ಯಾಟಿಂಗ್ ತರಬೇತುದಾರ ಚೆನ್ನೈ ಸೂಪರ್ ಕಿಂಗ್ಸ್‌ನ ಮೈಕ್ ಹಸ್ಸಿ ತಮ್ಮ ಕ್ವಾರಂಟೈನ್ ಪೂರ್ಣಗೊಳಿಸಿ ತವರಿಗೆ ಮರಳಲಿದ್ದಾರೆ. ಆಟಗಾರರು ಮತ್ತು ಅಧಿಕಾರಿಗಳಿಗೆ ಬಿಸಿಸಿಐ ಸುರಕ್ಷಿತ ಮಾರ್ಗದ ಭರವಸೆ ನೀಡಿದೆ. ಅಲ್ಲದೆ ನ್ಯೂಜಿಲೆಂಡ್ ಕ್ರಿಕೆಟ್ ತನ್ನ ಎಲ್ಲ ಆಟಗಾರರನ್ನು ಭಾರತದ ಹೋಟೆಲ್‌ಗಳಲ್ಲಿ ಪ್ರತ್ಯೇಕವಾಗಿರಲು ಸೂಚಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com