ದುಬೈ: ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ನಲ್ಲಿದೆ. ಒಂದೆಡೆ ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಹಾಗೂ ಇನ್ನೊಂದೆಡೆ ನಿನ್ನೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬರ್ತ್ ಡೇ. ಎರಡೂ ಒಂದೇ ದಿನ ಆಗಿರೋದ್ರಿಂದ ಬ್ಲ್ಯೂ ಬಾಯ್ಸ್ ಡ್ರೆಸ್ಸಿಂಗ್ ರೂಮ್ ಸಖತ್ ಸುದ್ದಿಯಲ್ಲಿತ್ತು.
ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಹೀನಾಯ ಸೋಲಿನಿಂದ ಕೊಹ್ಲಿ ಪಡೆ ಕ್ರಿಕೆಟ್ ಅಭಿಮಾನಿಗಳ ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ, ಅಫ್ಘಾನಿಸ್ತಾನ ಹಾಗೂ ಸ್ಕಾಟ್ಲೆಂಡ್ ವಿರುದ್ಧ ಸತತ ಎರಡು ಗೆಲುವುಗಳ ನಂತರ ಭಾರತದ ಸೆಮಿಫೈನಲ್ ಗೆ ಏರುವ ಕನಸು ಚಿಗುರೊಡಿದೆ.
ಸ್ಕಾಟ್ಲೆಂಡ್ ವಿರುದ್ಧ ಪಂದ್ಯ ಗೆಲುವಿನ ನಂತ್ರ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಜನ್ಮ ದಿನವನ್ನು ಕೊಹ್ಲಿ ಬ್ರಿಗೆಡ್ ಅದ್ಧೂರಿಯಾಗಿ ಆಚರಿಸಿತು. ಬರ್ತ್ ಡೇ ಬಾಯ್ ವಿರಾಟ್ ಅವರ ಜನ್ಮ ದಿನದಲ್ಲಿ ಕ್ರಿಕೆಟ್ ತಂಡದ ಎಲ್ಲ ಆಟಗಾರರು ಭಾಗವಹಿಸಿದ್ದರು.
ಈ ವೇಳೆ ವಿರಾಟ್ ಕೊಹ್ಲಿ ಮುಖಕ್ಕೆ, ಇತರ ಆಟಗಾರರು ಕೇಕ್ ಬಳದಿದ್ದಾರೆ. ಇದರಿಂದ ಕೊಹ್ಲಿ ಮುಖ ಹಾಗೂ ತಲೆಯ ಮೇಲೆ ಬರ್ತ್ ಡೇ ಕೇಕ್ ಮೆತ್ತಿಕೊಂಡಿತ್ತು. ಕೊಹ್ಲಿ ಬರ್ತ್ ಡೇ ಪಾರ್ಟಿಯ ವೈರಲ್ ವಿಡಿಯೋದಲ್ಲಿ ರಿಷಪ್ ಪಂತ್, ವರುಣ್ ಚಕ್ರವರ್ತಿ, ಇಶಾನ್ ಕಿಶಾನ್ ಕಾಣಿಸಿಕೊಂಡಿದ್ದಾರೆ.
Advertisement