'T20WorldCup ಬೆನ್ನಲ್ಲೇ ಮತ್ತೊಂದು ಸರಣಿ ಸುಲಭವಲ್ಲ': ಕಿವೀಸ್ ಬೆನ್ನು ತಟ್ಟಿದ 'ಕ್ರಿಕೆಟ್ ಜೆಂಟಲ್ ಮ್ಯಾನ್' ರಾಹುಲ್ ದ್ರಾವಿಡ್

T20WorldCup ಬೆನ್ನಲ್ಲೇ ಮತ್ತೊಂದು ಸರಣಿ ಸುಲಭವಲ್ಲ ಎಂದು ಹೇಳುವ ಮೂಲಕ ಭಾರತದ ವಿರುದ್ಧ ಟಿ20 ಸರಣಿ ಸೋತ ನ್ಯೂಜಿಲೆಂಡ್ (New Zealand) ತಂಡಕ್ಕೆ ಭಾರತೀಯ ಕ್ರಿಕೆಟ್ ನ ಸವ್ಯಸಾಚಿ ಆಟಗಾರ ಹಾಗೂ ಟೀಂ ಇಂಡಿಯಾ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ (Rahul Dravid) ನೈತಿಕ ಬೆಂಬಲ (Moral support) ನೀಡಿದ್ದಾರೆ. 
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
Updated on

ಕೋಲ್ಕತಾ: T20WorldCup ಬೆನ್ನಲ್ಲೇ ಮತ್ತೊಂದು ಸರಣಿ ಸುಲಭವಲ್ಲ ಎಂದು ಹೇಳುವ ಮೂಲಕ ಭಾರತದ ವಿರುದ್ಧ ಟಿ20 ಸರಣಿ ಸೋತ ನ್ಯೂಜಿಲೆಂಡ್ (New Zealand) ತಂಡಕ್ಕೆ ಭಾರತೀಯ ಕ್ರಿಕೆಟ್ ನ ಸವ್ಯಸಾಚಿ ಆಟಗಾರ ಹಾಗೂ ಟೀಂ ಇಂಡಿಯಾ ಪ್ರಧಾನ ಕೋಚ್ ರಾಹುಲ್ ದ್ರಾವಿಡ್ (Rahul Dravid) ನೈತಿಕ ಬೆಂಬಲ (Moral support) ನೀಡಿದ್ದಾರೆ. 

ಐಸಿಸಿ ಟಿ20 ವಿಶ್ವಕಪ್ (ICC T20I World Cup) ಮುಕ್ತಾಯದ ಬೆನ್ನಲ್ಲೇ ಶುರುವಾದ ಭಾರತ-ನ್ಯೂಜಿಲೆಂಡ್ (India vs New Zealand) ನಡುವಣ ಟಿ20 ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಆ ಮೂಲಕ ಟಿ20 ವಿಶ್ವಕಪ್ ನಲ್ಲಿ ಸೋಲಿಸಿದ್ದ ನ್ಯೂಜಿಲೆಂಡ್ ತಂಡದ ವಿರುದ್ಧ ತನ್ನ ಸೇಡು ತೀರಿಸಿಕೊಂಡಿದೆ. ಅದಾಗ್ಯೂ ವೈಟ್ ವಾಶ್ ಆದ ನ್ಯೂಜಿಲೆಂಡ್ ತಂಡಕ್ಕೆ ಬೆಂಬಲದ ಮಾತುಗಳನ್ನಾಡುವ ಮೂಲಕ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು 'ಜೆಂಟಲ್ ಮ್ಯಾನ್ ಗೇಮ್'(Gentleman Game)ನ ಸಾರವನ್ನು ಕ್ರಿಕೆಟ್ ಜಗತ್ತಿಗೆ ಸಾರಿದ್ದಾರೆ.

'ಪಂದ್ಯ ಮುಗಿದ ಬಳಿಕ ಮಾತನಾಡಿದ ದ್ರಾವಿಡ್, ಟಿ20 ವಿಶ್ವಕಪ್ ಫೈನಲ್ ಮುಗಿಸಿದ ತಕ್ಷಣ ಟಿ20 ಸರಣಿ ಆಡುವುದು ಎದುರಾಳಿ ತಂಡಕ್ಕೆ ಕಷ್ಟಕರವಾಗಿತ್ತು. ಸರಣಿ ಕ್ಲೀನ್ ಸ್ವೀಪ್ ಕುರಿತು ನಾವು ದೊಡ್ಡ ಸಂಭ್ರಮ ಮಾಡುವ ಅಗತ್ಯವಿಲ್ಲ, ನಮ್ಮ ಕಾಲು ನೆಲದ ಮೇಲೇ ಇರಲಿ. ಸರಣಿ ಗೆಲುವು ಸಾಧಿಸಿದ್ದು ಒಳ್ಳೆಯ ಸಂಗತಿ. ಪ್ರತಿಯೊಬ್ಬ ಆಟಗಾರ ಕೂಡ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಉತ್ತಮ ಆರಂಭ ಪಡೆದುಕೊಂಡಿದ್ದೇವೆ. ಆದರೆ ನಾವು ವಾಸ್ತವದ ಬಗ್ಗೆ ಅರಿತುಕೊಳ್ಳಬೇಕು. ಯಾಕೆಂದರೆ ಟಿ20 ವಿಶ್ವಕಪ್ ಮುಗಿಸಿದ ಮೂರೇ ದಿನಗಳಲ್ಲಿ ಇಲ್ಲಿಗೆ ಬಂದು ಮತ್ತೊಂದು ಸರಣಿ ಆಡುವುದು ಸುಲಭವಲ್ಲ. ನ್ಯೂಜಿಲೆಂಡ್ ಆಟಗಾರರ ಶ್ರಮ ನಿಜಕ್ಕೂ ಪ್ರಶಂಶಿಸಬೇಕು. ಈ ಸರಣಿಯಿಂದ ನಾವು ಕೆಲವು ವಿಚಾರಗಳನ್ನು ಕಲಿತಿದ್ದೇವೆ. ಮುಂದೆ ಸಾಗಬೇಕಷ್ಟೆ ಎಂದು ದ್ರಾವಿಡ್ ಹೇಳಿದ್ದಾರೆ.

ಯುವ ಆಟಗಾರರಿಗೆ ಅವಕಾಶ
ಅಂತೆಯೇ 'ಮುಂದಿನ 10 ತಿಂಗಳಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಲಿದ್ದೇವೆ. ಯುವ ಆಟಗಾರರ ಪ್ರದರ್ಶನ ನೋಡಲು ಖುಷಿಯಾಗುತ್ತದೆ. ಕಳೆದ ಕೆಲವು ತಿಂಗಳುಗಳಿಂದ ಕ್ರಿಕೆಟ್ ಆಡದ ಆಟಗಾರರಿಗೆ ನಾವು ಅವಕಾಶ ನೀಡುವತ್ತ ಗಮನ ಹರಿಸುತ್ತಿದ್ದೇವೆ. ಅವರನ್ನು ಮುಂದಿನ ದಿನಕ್ಕೆ ಸಜ್ಜು ಮಾಡುವ ಕೆಲಸ ಪ್ರಗತಿಯಲ್ಲಿದೆ. ಮುಂದಿನ ವರ್ಷದ ಟಿ20 ವಿಶ್ವಕಪ್ ವರೆಗೂ ನಮಗೆ ಸಮಯವಿದೆ. ಈಗಿರುವ ತಂಡದಲ್ಲಿರುವ ಕೇವಲ 3-4 ಆಟಗಾರರು ಮಾತ್ರ ಮುಂದಿನ ಟೆಸ್ಟ್​ ಸರಣಿಗೆ ತೆರಳುತ್ತಾರೆ ಎಂದು ದ್ರಾವಿಡ್ ಹೇಳಿದ್ದಾರೆ.

ನಿನ್ನೆ ಕೋಲ್ಕತಾದ ಈಡನ್ ಗಾರ್ಡನ್ಸ್​ನಲ್ಲಿ ನಡೆದ ಮೂರನೇ ಟಿ20 ಪಂದ್ಯವನ್ನು ಭಾರತ 73 ರನ್​ಗಳ ಭಾರೀ ಅಂತರಿಂದ ಗೆಲುವು ಸಾಧಿಸಿತು. ಇದರೊಂದಿಗೆ ಟಿ20 ಸರಣಿಯನ್ನ ಭಾರತ 3-0 ಯಿಂದ ಗೆದ್ದುಕೊಂಡಿತು. ಗೆಲ್ಲಲು 185 ರನ್ ಗುರಿ ಪಡೆದ ನ್ಯೂಜಿಲೆಂಡ್ ತಂಡ ಕೇವಲ 111 ರನ್​ಗೆ ಆಲೌಟ್ ಆಯಿತು. 3 ವಿಕೆಟ್ ಕಿತ್ತ ಅಕ್ಷರ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರೆ, ನಾಯಕ ರೋಹಿತ್ ಶರ್ಮಾ ಸರಣಿಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com