ಹೊಸ ಐಪಿಎಲ್ ತಂಡಕ್ಕೆ ರಣವೀರ್, ದೀಪಿಕಾ ಜೋಡಿ ಬಿಡ್!
ಮುಂಬೈ: 2022ರ ಐಪಿಎಲ್ ತಂಡ ಖರೀದಿ ಮಾಡಲು ಮತ್ತೊಂದು ಬಾಲಿವುಡ್ ಜೋಡಿ ತುದಿಗಾಲಲ್ಲಿ ನಿಂತಿದ್ದು, ಬಿಟೌನ್ ನ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಜೋಡಿ ಮುಂಬರುವ 2022ರ ಐಪಿಎಲ್ ಗ್ರೌಂಡ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಐಪಿಎಲ್ ಫ್ರಾಂಚೈಸಿ ಕುರಿತು ಈವರೆಗೆ ದೀಪಿಕಾ ಹಾಗೂ ರಣವೀರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಆದರೆ, ಮೂಲಗಳ ಪ್ರಕಾರ ಮುಂಬರುವ ಐಪಿಎಲ್ ನಲ್ಲಿ ಟೀಮ್ ವೊಂದನ್ನು ಖರೀದಿಗಾಗಿ ಬಿಡ್ ಮಾಡಲು ಈ ಜೋಡಿ ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಐಪಿಎಲ್ ನಲ್ಲಿ ಬಿಟೌನ್ ಮಂದಿ ಫ್ರಾಂಚೈಸಿ ಆಗೋದು ಹೊಸದೇನಲ್ಲ. ಈಗಾಗಲೇ ಶಾರುಖ್ ಖಾನ್, ಪ್ರೀತಿ ಜಿಂಟಾ, ಜೂಹಿ ಚಾವ್ಲಾ, ಶಿಲ್ಪಾ ಶೆಟ್ಟಿ ಕ್ರಿಕೆಟ್ ತಂಡಗಳನ್ನು ಖರೀದಿ ಮಾಡಿದ್ದಾರೆ. ಈಗಾಗಲೇ ನೂತನ 2 ತಂಡಗಳ ಫ್ರಾಂಚೈಸಿಗಾಗಿ ಬಿಡ್ ಮಾಡಲು ಮುಹೂರ್ತ ನಿಗದಿಯಾಗಿದೆ.
ಅಕ್ಟೋಬರ್ 25 ರಿಂದ ಬಿಡ್ಡಿಂಗ್?
2022ರ ಐಪಿಎಲ್ ಟೂರ್ನಿಗಾಗಿ 2 ತಂಡಗಳು ಹೊಸದಾಗಿ ಸೇರ್ಪಡೆಯಾಗಲಿವೆ ಅಂತಾ ಈಗಾಗಲೇ ಬಿಸಿಸಿಐ ತಿಳಿಸಿದೆ. ಆದ್ದರಿಂದ ಮುಂಬರುವ ಐಪಿಎಲ್ ಟೂರ್ನಿಗಾಗಿ ಎರಡು ಫ್ರಾಂಚೈಸಿಗಳ ಆಯ್ಕೆಗಾಗಿ ಬಿಡ್ಡಿಂಗ್ ನಡೆಯಲಿದೆ. ಅಕ್ಟೋಬರ್ 25ರಿಂದ ಬಿಡ್ಡಿಂಗ್ ನಡೆಯುವ ಸಾಧ್ಯತೆ ಇದೆ. ಅತೀ ಹೆಚ್ಚು ಬಿಡ್ಡರ್ಸ್ ಗೆ ತಂಡದ ಫ್ರಾಂಚೈಸಿ ಹಕ್ಕು ನೀಡಲಾಗುತ್ತದೆ. ಈ ಮೂಲಕ ಐಪಿಎಲ್ ತಂಡಗಳ ಸಂಖ್ಯೆ 2022ಕ್ಕೆ 8 ರಿಂದ 10ಕ್ಕೆ ಏರಿಕೆಯಾಗಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ