ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ: ಅನಿಲ್ ಕುಂಬ್ಳೆ ಮರಳುವಿಕೆಗೆ ಬಿಸಿಸಿಐ ಆಸಕ್ತಿ

2017 ರಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಹುದ್ದೆ ವಿಸ್ತರಣೆಯನ್ನು ನಿರಾಕರಿಸಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಮತ್ತೆ ಹುದ್ದೆಯನ್ನು ವಹಿಸಿಕೊಳ್ಳುವಂತೆ ಬಿಸಿಸಿಐ ಬಯಸಿದೆ.
ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ

ಚೆನ್ನೈ: 2017 ರಲ್ಲಿ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಹುದ್ದೆ ವಿಸ್ತರಣೆಯನ್ನು ನಿರಾಕರಿಸಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರು ಮತ್ತೆ ಹುದ್ದೆಯನ್ನು ವಹಿಸಿಕೊಳ್ಳುವಂತೆ ಬಿಸಿಸಿಐ ಬಯಸಿದೆ.

ಟಿ20 ವಿಶ್ವಕಪ್ ನಂತರ ರವಿ ಶಾಸ್ತ್ರಿ ಅವರ ಕೋಚ್ ಅವಧಿ ಮುಕ್ತಾಯವಾಗುತ್ತಿದ್ದು ಈ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಅವರು ಮತ್ತೆ ಹುದ್ದೆ ವಹಿಸಿಕೊಳ್ಳಬೇಕೆಂದು ಮಾತುಗಳು ಕೇಳಿಬರುತ್ತಿದೆ. ಬಿಸಿಸಿಐ ಪದಾಧಿಕಾರಿಗಳು ಕುಂಬ್ಳೆ ಅವರನ್ನು ಮತ್ತೆ ತಂಡಕ್ಕೆ ಮುಖ್ಯ ಕೋಚ್ ಆಗಿ ಕರೆತರುವ ನಿರ್ಧಾರದಲ್ಲಿ ಒಮ್ಮತದಿಂದ ಇದ್ದಾರೆ. 2017 ರಲ್ಲಿ, ಭಾರತ ತಂಡದೊಂದಿಗೆ ಕೆಲಸ ಮಾಡಿ ಯಶಸ್ವಿಯಾಗಿ ಹುದ್ದೆ ಮುಗಿಸಿದ ನಂತರ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕುಂಬ್ಳೆ ಅವರ ಶೈಲಿಯ ತರಬೇತಿಗೆ ಒಲವು ತೋರಿಸಿದ್ದರು. ಆದರೆ ಅನಿಲ್ ಕುಂಬ್ಳೆ ಅವರು ಮುಂದುವರಿಯಲಿಲ್ಲ.

ಅನಿಲ್ ಕುಂಬ್ಳೆ ಅವರ ಮಾರ್ಗದರ್ಶನವು ಭಾರತವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಅನಿಲ್ ಕುಂಬ್ಳೆ ಅವರ ನಾಯಕತ್ವ ತಂಡಕ್ಕೆ ಮತ್ತಷ್ಟು ಬಲವನ್ನು ತಂದೊಡ್ಡಲಿದೆ ಎಂದು ಬಿಸಿಸಿಐ ನಂಬಿದೆ.

ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿಯವರ ಅಧಿಕಾರಾವಧಿ ಮುಗಿಯುತ್ತಿದ್ದಂತೆ, ಬಿಸಿಸಿಐ ಹೊಸ ಮುಖ್ಯ ಕೋಚ್‌ಗಾಗಿ ಕಾಯುತ್ತಿದೆ, ವಿದೇಶದ ಒಂದಿಬ್ಬರು ಆಟಗಾರರನ್ನು ಸಂಪರ್ಕಿಸಿದ್ದು ಅವರು ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದೆರಡು ಸಂದರ್ಭಗಳಲ್ಲಿ ಭಾರತದ ಕೋಚ್ ಹುದ್ದೆಗಾಗಿ ತೀವ್ರ ಆಸಕ್ತಿ ಹೊಂದಿದ್ದ ಜನಪ್ರಿಯ ಆಸ್ಟ್ರೇಲಿಯಾದ ಕೋಚ್ ಬಿಸಿಸಿಐಯನ್ನು ಸಂಪರ್ಕಿಸಿದ್ದರೆ ಬಿಸಿಸಿಐ ನಿರಾಕರಿಸಿದೆ ಎಂದು ತಿಳಿದುಬಂದಿದೆ.

ಬಿಸಿಸಿಐನ ಮೂಲಗಳ ಪ್ರಕಾರ, ಮಂಡಳಿಯು ರಾಹುಲ್ ದ್ರಾವಿಡ್ ಅವರನ್ನು ಸಂಪರ್ಕಿಸಿತು. ಅವರು, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ನಿರ್ದೇಶಕರಾಗಿ ಮುಂದುವರಿಯುವ ಇಚ್ಛೆಯನ್ನು ವ್ಯಕ್ತಪಡಿಸಿರುವುದರಿಂದ ಈಗ ಉಳಿದಿರುವ ವ್ಯಕ್ತಿ ಅನಿಲ್ ಕುಂಬ್ಳೆ ಮಾತ್ರ.

ಭಾರತೀಯ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ನಂತರ, ಕುಂಬ್ಳೆ ಅವರು ಈಗ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ಜೊತೆ ಭಾಗಿಯಾಗಿದ್ದಾರೆ. ಕುಂಬ್ಳೆಯ ಕಾರ್ಯವೈಖರಿಯ ಬಗ್ಗೆ ಕೊಹ್ಲಿ ಈಗಾಗಲೇ ಒಲವು ತೋರಿಸಿದ್ದು, ಭಾರತ ಕ್ರಿಕೆಟ್ ತಂಡದ ಆಟಗಾರರು ಅವರ ಮರಳುವಿಕೆಗೆ ಕಾಯುತ್ತಿದ್ದಾರೆ. 

ಬಿಸಿಸಿಐ ಅವಕಾಶವನ್ನು ನಿರಾಕರಿಸುವುದು, ಒಪ್ಪುವುದು ಇದೀಗ ಅನಿಲ್ ಕುಂಬ್ಳೆ ಅವರಿಗೆ ಬಿಟ್ಟದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com