ಕೊಹ್ಲಿ
ಕ್ರಿಕೆಟ್
ಹಸರಂಗ ಮತ್ತು ಚಮೀರಾ ತಂಡ ಸೇರಿದ್ದರಿಂದ ಆರ್‌ಸಿಬಿಗೆ ಲಾಭ: ಆರ್‌ಸಿಬಿ ನಾಯಕ ಕೊಹ್ಲಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ, ಶ್ರೀಲಂಕಾದ ಆಟಗಾರರಾದ ವಾನಿಂದು ಹಸರಂಗ ಮತ್ತು ದುಷ್ಮಂತ ಚಮೀರಾ ಅವರ ಸೇರ್ಪಡೆಯಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ತಂಡಕ್ಕೆ ಹೆಚ್ಚಿನ ಪ್ರಯೋಜನವಿದೆ ಎಂದು ನಂಬಿದ್ದಾರೆ.
ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ, ಶ್ರೀಲಂಕಾದ ಆಟಗಾರರಾದ ವಾನಿಂದು ಹಸರಂಗ ಮತ್ತು ದುಷ್ಮಂತ ಚಮೀರಾ ಅವರ ಸೇರ್ಪಡೆಯಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ನಲ್ಲಿ ತಂಡಕ್ಕೆ ಹೆಚ್ಚಿನ ಪ್ರಯೋಜನವಿದೆ ಎಂದು ನಂಬಿದ್ದಾರೆ.
ಪ್ಲೇಯಿಂಗ್ ಇಲೆವೆನ್ ನಲ್ಲಿ ಹಸರಂಗ ಅವರ ಆಯ್ಕೆ ಬಹುತೇಕ ಖಚಿತವಾಗಿದ್ದು, ಅವರ ಇತ್ತೀಚಿನ ಫಾರ್ಮ್ ಅನ್ನು ಗಮನಿಸಿದರೆ, ಚಮೀರಾ ಕೂಡ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬಹುದು.
ಹಸರಂಗಾ 25 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 14.65 ರ ಸರಾಸರಿಯಲ್ಲಿ ಮತ್ತು 6.60 ರ ಸರಾಸರಿಯಿಂದ 26 ವಿಕೆಟ್‌ಗಳನ್ನು ಪಡೆದ್ದಾರೆ.
ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ತಮ್ಮ ಬ್ಯಾಟಿಂಗ್ ಬಲವನ್ನು ತೋರಿಸಿದರು ಮತ್ತು ಅವರು ಆರ್‌ಸಿಬಿಗೆ ಉಪಯುಕ್ತ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಎಂದು ಸಾಬೀತುಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ