ಐಪಿಎಲ್-2021: ಆರ್ ಸಿಬಿ ವಿರುದ್ಧ ಕೋಲ್ಕತಾಗೆ 9 ವಿಕೆಟ್ ಗಳ ಭರ್ಜರಿ ಜಯ

ನಿರೀಕ್ಷೆಯಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ತಂಡ ಭರ್ಜರಿ ಜಯ ಸಾಧಿಸಿದೆ.
ಕೆಕೆಆರ್ ಗೆ ಗೆಲುವು
ಕೆಕೆಆರ್ ಗೆ ಗೆಲುವು

ಅಬುದಾಬಿ: ಭರವಸೆಯ ಬೌಲರ್ ಗಳಾದ ವರುಣ್ ಚಕ್ರವರ್ತಿ (13ಕ್ಕೆ 3) ಹಾಗೂ ಆಂಡ್ರಿ ರಸೆಲ್ (9ಕ್ಕೆ 3) ಇವರುಗಳ ಸೊಗಸಾದ ದಾಳಿಯ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ 31ನೇ ಪಂದ್ಯದಲ್ಲಿ 9 ವಿಕೆಟ್ ಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿತು.

ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್ ಗಳಲ್ಲಿ 92 ರನ್ ಗಳಿಗೆ ಆಲೌಟ್ ಆಯಿತು. ಕೋಲ್ಕತ್ತಾ ನೈಟ್ ರೈಡರ್ಸ್ 10 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 94 ರನ್ ಬಾರಿಸಿ ಗುರಿಯನ್ನು ಮುಟ್ಟಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಧಾರಕ್ಕೆ ಪೂರಕವಾಗಿ ಬ್ಯಾಟ್ಸ್ ಮನ್ ಗಳು ಬ್ಯಾಟ್ ಮಾಡಲಿಲ್ಲ. ತಂಡದ ಸ್ಟಾರ್ ಬ್ಯಾಟ್ ಮನ್ ಗಳು ಆರಂಭದಲ್ಲಿ ಎಡವಿದರು. ವಿರಾಟ್ ಕೊಹ್ಲಿ ಒಂದೇ ತಂಡದ ಪರ 200 ಪಂದ್ಯಗಳನ್ನು ಆಡಿದ ದಾಖಲೆ ನಿರ್ಮಿಸಿದರು.

ನಾಯಕ ವಿರಾಟ್ ಕೊಹ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವ ಯತ್ನದಲ್ಲಿ ಮುನ್ನುಗುತ್ತಿದ್ದಾಗ ಪಂದ್ಯದ ಎರಡನೇ ಓವರ್ ಎಸೆದ ಕನ್ನಡಿಗ ಪ್ರಸಿದ್ಧ ಕೃಷ್ಣ ತೋಡಿದ ಖೆಡ್ಡಾಗೆ ಬಲಿಯಾದರು.

ಪವರ್ ಪ್ಲೇನ ಕೊನೆಯ ಎಸೆತದಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ದೇವದತ್ ಪಡೀಕ್ಕಲ್ 22 ರನ್ ಗಳಿಸಿ ಮುನ್ನಗುತ್ತಿದ್ದಾಗ ಅಪರ್ ಕಟ್ ಹೊಡೆಯಲು ಹೋಗಿ ಔಟ್ ಆದರು. ಶ್ರೀಕರ್ ಭರತ್ (16) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು.

ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರರಾದ ಗ್ಲೇನ್ ಮ್ಯಾಕ್ಸ್ ವೆಲ್ (10), ಎಬಿಡಿ ವಿಲಿಯರ್ಸ್ (0), ಸಚಿನ್ ಬೇಬಿ (7), ಬೆಂಗಳೂರು ತಂಡದ ಪರ ಮೊದಲ ಪಂದ್ಯ ಆಡಿದ ವನಿಂದು ಹಸರಂಗಾ (0) ನಿರಾಸೆ ಮೂಡಿಸಿದರು. ಆಲ್ ರೌಂಡರ್ ಕೈಲ್ ಜೇಮಿನ್ಸನ್ ೪ ರನ್ ಗಳಿಗೆ ಆಟ ಮುಗಿಸಿದರು.

ಹರ್ಷಲ್ ಪಟೇಲ್ (12), ಮೊಹಮ್ಮದ್ ಸಿರಾಜ್ (8), ಯಜುವೇಂದ್ರ ಚಹಾಲ್ (ಅಜೇಯ 2) ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲಾರದರು.

ಕೋಲ್ಕತ್ತಾ ಪರ ವರುಣ್ ಚಕ್ರವರ್ತಿ ಹಾಗೂ ಆಂಡ್ರಿ ರಸೆಲ್ ತಲಾ ಮೂರು ವಿಕೆಟ್ ಪಡೆದರು.

ಗುರಿಯನ್ನು ಹಿಂಬಾಲಿಸಿದ ಕೆಕೆಆರ್ ತಂಡದ ಆರಂಭಿಕರಾದ ಶುಭಮನ್ ಹಾಗೂ ವೆಂಕಟೇಶ್ ಅವರು ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಸಾಧಾರಣ ಮೊತ್ತವನ್ನು ಹಿಂಬಾಲಿಸುವಾಗ ಆಡುವ ರೀತಿ ಆಡಿದ ಜೋಡಿ ಪವರ್ ಪ್ಲೇನಲ್ಲಿ ರನ್ ಗುಡ್ಡೆ ಹಾಕಿತು. ಬೆಂಗಳೂರು ತಂಡದ ಬೌಲರ್ ಗಳನ್ನು ಕಾಡಿದ ಆರಂಭಿಕರು ಉತ್ತಮ ಕಾಣಿಕೆ ನೀಡಿದರು. ಶುಭಮನ್ 48 ರನ್ ಬಾರಿಸಿ ಮುನ್ನುಗುತ್ತಿದ್ದಾಗ ಚಹಾಲ್ ಎಸೆತದಲ್ಲಿ ಸಿರಾಜ್ ಗೆ ಕ್ಯಾಚ್ ನೀಡಿದರು. ಮೊದಲ ವಿಕೆಟ್ ಗೆ ಈ ಜೋಡಿ 9.1 ಓವರ್ ಗಳಲ್ಲಿ 82 ರನ್ ಗಳ ಜೊತೆಯಾಟದ ಕಾಣಿಕೆ ನೀಡಿ ಅಬ್ಬರಿಸಿತು.

ಇನ್ನೋರ್ವ ಆಟಗಾರ ವೆಂಕಟೇಶ್ ಅಯ್ಯರ್ 27 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನಿಂದ 41 ರನ್ ಬಾರಿಸಿ ಅಜೇಯರಾಗುಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com