ಪಂದ್ಯದ ಕೊನೆಯಲ್ಲಿ ಸೋಲಿನ ದಿಕ್ಕನ್ನು ಬದಲಿಸಿದ ಜಡೇಜಾ: ಚೆನ್ನೈಗೆ 3 ವಿಕೆಟ್ ಜಯ, ಧೋನಿಗೆ ಪಡೆಗೆ ಅಗ್ರ ಪಟ್ಟ

ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮೂರು ವಿಕೆಟ್ ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. 
ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

ಅಬುಧಾಬಿ: ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮೂರು ವಿಕೆಟ್ ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. 

ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ಕಲೆ ಹಾಕಿದರೆ, ಚೆನ್ನೈ ಸೂಪರ್ ಕಿಂಗ್ಸ್ ಕೊನೆಯ ಎಸೆತದವರೆಗೂ ಆಡಿ 7 ವಿಕೆಟ್ ಕಳೆದುಕೊಂಡು ಅಗತ್ಯ ರನ್ ಕಲೆ ಹಾಕಿತು. ಚೆನ್ನೈ 10 ಪಂದ್ಯಗಳಿಂದ 8 ಜಯ ಸಾಧಿಸಿದ್ದು, 16 ಅಂಕಗಳೊಂದಿಗೆ ಅಗ್ರ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಕೊನೆಯ 12 ಎಸೆತಗಳಲ್ಲಿ ಚೆನ್ನೈಗೆ ಗೆಲ್ಲಲು 26 ರನ್ ಬೇಕಿತ್ತು. ಈ ವೇಳೆ ಮೈದಾನಕ್ಕೆ ಬಂದ ಜಡೇಜಾ 10 ಮತ್ತು 9ನೇ ಎಸೆತದಲ್ಲಿ ಎರಡು ಸಿಕ್ಸರ್ ಬಾರಿಸಿದರು. ಕೊನೆಯ ಎರಡು ಎಸೆತದಲ್ಲೂ ಬೌಂಡರಿ ಬಾರಿಸಿದ್ದು ಈ ಮೂಲಕ 19ನೇ ಓವರ್ ನಲ್ಲಿ 22 ರನ್ ಪೇರಿಸಲು ಸಾಧ್ಯವಾಯಿತು. ಇದರೊಂದಿಗೆ ಚೆನ್ನೈ ತಂಡ ಗೆಲುವಿಗೆ ಕಾರಣವಾಯಿತು.

ಕೋಲ್ಕತ್ತಾ ಪರ ರಾಹುಲ್ ತ್ರಿಪಾಠಿ 45, ನಿತೀಶ್ ರಾಣಾ 37, ರಸೂಲ್ 26 ಮತ್ತು ದಿನೇಶ್ ಕಾರ್ತಿಕ್ 26 ರನ್ ಬಾರಿಸಿದ್ದರು. 

ಚೆನ್ನೈ ಪರ ರುತುರಾಜ್ ಗಾಯಕ್ವಾಡ್ 40, ಡುಪ್ಲೆಸಿಸ್ 43, ಮೋಯಿನ್ ಅಲಿ 32 ಮತ್ತು ರವೀಂದ್ರ ಜಡೇಜಾ 22 ರನ್ ಬಾರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com