ನವದೆಹಲಿ: ಕೊರೋನಾ ಎರಡನೇ ಅಲೆ ಹಿನ್ನಲೆಯಲ್ಲಿ ಭಾರತದಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಇದರ ನಡುವೆ ಐಪಿಎಲ್ ಟೂರ್ನಿ ಸಹ ನಡೆಯುತ್ತಿದೆ. ಹೀಗಾಗಿ ಐಪಿಎಲ್ ನಲ್ಲಿ ಭಾಗಿಯಾಗಿರುವ ವಿದೇಶಿ ಆಟಗಾರರಿಗೆ ಬಿಸಿಸಿಐ ಸುರಕ್ಷಿತವಾಗಿ ಸ್ವದೇಶಕ್ಕೆ ಕಳುಹಿಸುವ ಭರವಸೆ ನೀಡಿದೆ.
ಅದಾಗಲೇ ಮೂವರು ವಿದೇಶಿ ಕ್ರಿಕೆಟಿಗರು ಐಪಿಎಲ್ ಗೆ ಗುಡ್ ಬೈ ಹೇಳಿ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಿಸಿಸಿಐ ವಿದೇಶಿ ಆಟಗಾರರಿಗೆ ಸ್ಥೈರ್ಯ ತುಂಬಿದೆ.
ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ತಮ್ಮ ತಮ್ಮ ದೇಶಕ್ಕೆ ಮರಳಲು ಆಟಗಾರರಿಗೆ ಏನೇನು ಸೌಲಭ್ಯ ನೀಡಬೇಕೋ ಅದೆಲ್ಲವನ್ನೂ ನಾವು ಒದಗಿಸುತ್ತೇನೆ. ಸ್ವದೇಶಕ್ಕೆ ಮರಳಲು ಬೇಕಾದ ವ್ಯವಸ್ಥೆ ಎಲ್ಲವನ್ನೂ ಮಾಡಿಕೊಡುತ್ತೇನೆ ಎಂದು ಬಿಸಿಸಿಐ ತಿಳಿಸಿದೆ.
ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಬಹುತೇಕ ಕ್ರಿಕೆಟಿಗರು ಟೂರ್ನಿಯ ಮುಕ್ತಾಯದ ಬಳಿಕ ಮನೆಗೆ ಮರಳುವುದು ಹೇಗೆ ಎಂದು ಚಿಂತೆಗೀಡಾಗಿದ್ದೀರಿ ಎಂದು ತಿಳಿದಿದೆ. ಆದರೆ ಈ ಬಗ್ಗೆ ನೀವು ಆತಂಕ ಪಡುವ ಅಗತ್ಯವಿಲ್ಲ. ಸದ್ಯದ ಪರಿಸ್ಥಿತಿಯ ಬಗ್ಗೆ ಬಿಸಿಸಿಐ ಕೂಡ ಗಮನವಿರಿಸಿದೆ. ನೀವು ಸ್ವದೇಶಕ್ಕೆ ಮರಳಲು ಅಗತ್ಯ ವ್ಯವಸ್ಥೆಯನ್ನು ಸರ್ಕಾರದೊಂದಿಗೆ ವಿಚಾರ ಮಾಡಿದೆ ಎಂದು ಬಿಸಿಸಿಐ ಹೇಳಿದೆ.
Advertisement