ಸಿರಾಜ್ ತುಟಿಯ ಮೇಲೆ ಬೆರಳಿಟ್ಟು ಸಂಭ್ರಮ ಆಚರಿಸುತ್ತಿರುವುದೇಕೆ: ಖಡಕ್ ಸಂದೇಶ ರವಾನಿಸಿದ್ದು ಯಾರಿಗೆ?

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಪ್ರತಿ ಬಾರಿ ವಿಕೆಟ್ ಕಿತ್ತಾಗಲು ತುಟಿಯ ಮೇಲೆ ಬೆರಳಿಟ್ಟು ಸಂಭ್ರಮ ಆಚರಿಸುತ್ತಾರೆ. ಇದು ಯಾಕೆ ಅಂತ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ. 
ಮೊಹಮ್ಮದ್ ಸಿರಾಜ್
ಮೊಹಮ್ಮದ್ ಸಿರಾಜ್

ಲಂಡನ್: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ತಂಡದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇನ್ನು ಪ್ರತಿ ಬಾರಿ ವಿಕೆಟ್ ಕಿತ್ತಾಗಲು ತುಟಿಯ ಮೇಲೆ ಬೆರಳಿಟ್ಟು ಸಂಭ್ರಮ ಆಚರಿಸುತ್ತಾರೆ. ಇದು ಯಾಕೆ ಅಂತ ಮೊಹಮ್ಮದ್ ಸಿರಾಜ್ ಹೇಳಿದ್ದಾರೆ. 

ಲಾರ್ಡ್ಸ್ ಮೈದಾನದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಬೌಲರ್‌ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇನ್ನು ಎರಡನೇ ಟೆಸ್ಟ್‌ನಲ್ಲಿ ಪ್ರತಿಯೊಂದು ಇಂಗ್ಲೆಂಡ್ ವಿಕೆಟ್ ಪಡೆದ ನಂತರ ಸಿರಾಜ್ ತುಟಿಯ ಮೇಲೆ ಬೆರಳಿಟ್ಟು ಸಂಭ್ರಮವನ್ನು ಆಚರಿಸಿದ್ದರು. ಈ ಬಗ್ಗೆ ಕೇಳಿದಾಗ ಸಿರಾಜ್ ಹೀಗೆಂದರು.

ಸಿರಾಜ್ ತುಟಿಯ ಮೇಲೆ ಬೆರಳಿಟ್ಟು ಸಂಭ್ರಮಿಸುವುದರ ಹಿಂದನ ಕಥೆ ಏನು?
ನನ್ನ ಈ ರೀತಿಯ ಆಚರಣೆ ನನ್ನನ್ನು ದ್ವೇಷಿಸುವವರಿಗಾಗಿ(ವಿಮರ್ಶಕರು) ಏಕೆಂದರೆ ಅವರು ನನ್ನ ಬಗ್ಗೆ ಬಹಳಷ್ಟು ಮಾತುಗಳನ್ನು ಹೇಳುತ್ತಿದ್ದರು. ನನ್ನಿಂದ ಅದನ್ನು ಮಾಡಲು ಸಾಧ್ಯವಿಲ್ಲ. ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಟೀಕಿಸುತ್ತಿದ್ದರು. 

ಹೀಗಾಗಿ ನಾನು ನನ್ನ ಬೌಲಿಂಗ್ ಅನ್ನು ಮಾತ್ರ ಮಾತನಾಡಲು ಬಿಡುತ್ತೇನೆ. ಆದ್ದರಿಂದ ಇದು ನನ್ನ ಹೊಸ ಶೈಲಿಯ ಆಚರಣೆಯಾಗಿದೆ ಎಂದು ಮೂರನೇ ದಿನದ ಆಟದ ನಂತರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಸಿರಾಜ್ ಹೇಳಿದರು.

ಲಂಡನ್ ನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ ನ 364ರನ್ ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ 391ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ 27 ರನ್ ಗಳ ಮುನ್ನಡೆ ಸಾಧಿಸಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com