ಲಾರ್ಡ್ಸ್ 2ನೇ ಟೆಸ್ಟ್: ಜೇಮ್ಸ್ ಆಂಡರ್ಸನ್ ವಿರುದ್ಧ ಕೊಹ್ಲಿ ಬಳಸಿದ ಭಾಷೆಗೆ ಸ್ಟುವರ್ಟ್ ಬ್ರಾಡ್ ಪ್ರತಿಕ್ರಿಯಿಸಿದ್ದು ಹೀಗೆ!
ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಹಾಗೂ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಚಕಮಕಿ ನಡೆದಿದೆ
Published: 16th August 2021 02:11 PM | Last Updated: 16th August 2021 02:42 PM | A+A A-

ಕೊಹ್ಲಿ, ಜೇಮ್ಸ್ ಆಂಡರ್ಸನ್
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಸಂದರ್ಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಯ್ಲಿ ಹಾಗೂ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ನಡುವೆ ಮಾತಿನ ಚಕಮಕಿ ನಡೆದಿದೆ. ಲಾರ್ಡ್ಸ್ ಕ್ರಿಡಾಂಗಣ ನಿನ್ನ ಮನೆಯ ಹಿತ್ತಲಲ್ಲ ಎಂದು ಆಂಡರ್ಸನ್ ಗೆ ಕೊಹ್ಲಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಆಟಗಾರ ಸ್ಟುವರ್ಟ್ ಬ್ರಾಡ್ ಕೊಹ್ಲಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಾರ್ಡ್ಸ್ ಕ್ರೀಡಾಂಗಣ ನಿಜಕ್ಕೂ ಜೇಮ್ಸ್ ಆಂಡರ್ಸನ್ ಅವರ ಹಿತ್ತಲು ಆಗಿದೆ. ಬೆಂಕಿಯನ್ನು ಪ್ರೀತಿಸಿ ಆದರೆ, ಆ ಭಾಷೆಯಿಂದ ಅವರಿಗೆ ತೊಂದರೆಯಾಗುತ್ತದೆ ಎಂದು ಬ್ರಾಡ್ ಟ್ವೀಟ್ ಮಾಡಿದ್ದಾರೆ.
The Lord’s honours board suggests it’s as close to Jimmy’s backyard as Jimmy’s actual backyard. Love the fire but that language will have him in trouble
— Stuart Broad (@StuartBroad8) August 15, 2021
ಭಾನುವಾರ ನಡೆದ ಪಂದ್ಯದ ವೇಳೆಯಲ್ಲಿ ಕೊಹ್ಲಿ 20 ರನ್ ಗಳಿಸಿದಾಗ ಸ್ಯಾಮ್ ಕ್ಯೂರಾನ್ ಗೆ ಬಲಿಯಾಗಿದ್ದರು. ಆ ಸಂದರ್ಭದಲ್ಲಿ ಭಾರತ ಮೂರು ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿತ್ತು. ತದನಂತರ ಚೇತೇಶ್ವರ ಪೂಜಾರ್ ಮತ್ತು ಅಜೆಂಕ್ಯಾ ರಹಾನೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 100 ರನ್ ಗಳಿಗೆ ತರುವ ಮೂಲಕ ಟೀಂ ಇಂಡಿಯಾವನ್ನು ತೊಂದರೆಯಿಂದ ಪಾರು ಮಾಡಿದರು.
ತದನಂತರ ಪೂಜಾರ 45, ರಹಾನೆ 61 ರನ್ ಗಳಿಸಿ ಔಟಾದರು. ನಂತರ ರವೀಂದ್ರಾ ಜಡೇಜಾ ಮೂರು ರನ್ ಗಳಿಸಿ ನಿರ್ಗಮಿಸಿದರು. ಟೀಂ ಇಂಡಿಯಾ ನಾಲ್ಕು ವಿಕೆಟ್ ಗಳೊಂದಿಗೆ 154 ರನ್ ಗಳ ಮುನ್ನಡೆ ಕಾಯ್ದುಕೊಂಡಿದೆ.