62 ರನ್ ಗಳಿಗೆ ಆಲೌಟ್: ನಾಲ್ಕು ಕಳಪೆ ದಾಖಲೆ ಬರೆದ ನ್ಯೂಜಿಲೆಂಡ್!

ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಕೇವಲ 62ರನ್ ಗಳಿಗೆ ಆಲೌಟ್ ಆಗಿರುವ ನ್ಯೂಜಿಲೆಂಡ್ ಹೆಸರಿನಲ್ಲಿ ನಾಲ್ಕು ಕಳಪೆ ದಾಖಲೆ ನಿರ್ಮಾಣವಾಗಿದೆ.
ಭಾರತ ವರ್ಸಸ್ ನ್ಯೂಜಿಲೆಂಡ್
ಭಾರತ ವರ್ಸಸ್ ನ್ಯೂಜಿಲೆಂಡ್

ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಕೇವಲ 62ರನ್ ಗಳಿಗೆ ಆಲೌಟ್ ಆಗಿರುವ ನ್ಯೂಜಿಲೆಂಡ್ ಹೆಸರಿನಲ್ಲಿ ನಾಲ್ಕು ಕಳಪೆ ದಾಖಲೆ ನಿರ್ಮಾಣವಾಗಿದೆ.

ಹೌದು.. ಭಾರತ ನೀಡಿದ 325ರನ್ ಗಳ ಮೊದಲ ಇನ್ನಿಂಗ್ಸ್ ಗುರಿಗೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಬ್ಯಾಟರ್ ಗಳು ಪೆವಿಲಿಯನ್ ಪರೇಡ್ ನಡೆಸಿ, ಕೇವಲ 62ರನ್ ಗಳಿಗೆ ಆಲೌಟ್ ಆಗಿದ್ದಾರೆ. ಆ ಮೂಲಕ ನ್ಯೂಜಿಲೆಂಡ್ ತನ್ನ ಹೆಸರಿಗೆ ನಾಲ್ಕು ಕಳಪೆ ದಾಖಲನ್ನು ಹಾಕಿಕೊಂಡಿದೆ.

ಭಾರತದಲ್ಲಿ ಕನಿಷ್ಠ ಸ್ಕೋರ್
ಇನ್ನು ಇದು ಭಾರತದಲ್ಲಿ ನ್ಯೂಜಿಲೆಂಡ್ ತಂಡ ಟೆಸ್ಟ್ ಪಂದ್ಯವೊಂದರ ಇನ್ನಿಂಗ್ಸ್ ವೊಂದರಲ್ಲಿ ಗಳಿಸಿದ ಅತ್ಯಂತ ಕನಿಷ್ಟ ಸ್ಕೋರ್ ಆಗಿದ್ದು, ಈ ಹಿಂದೆ 1987ರಲ್ಲಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಗಳಿಸಿದ್ದ 75 ರನ್ ಗಳು ಕನಿಷ್ಠ ಸ್ಕೋರ್ ಆಗಿತ್ತು. ಬಳಿಕ 2008ರಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 75ರನ್ ಗಳಿಗೆ ಆಲೌಟ್ ಆಗಿತ್ತು. ಇದು ಭಾರತದಲ್ಲಿ ದಾಖಲಾದ 2ನೇ ಕನಿಷ್ಛ ಮೊತ್ತವಾಗಿತ್ತು. 2015ರಲ್ಲಿ ನಾಗ್ಪುರದಲ್ಲಿ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 79ರನ್ ಗಳಿಗೆ ಆಲೌಟ್ ಆಗಿತ್ತು. ಇದು ತಂಡವೊಂದರ ಮೂರನೇ ಕನಿಷ್ಠ ಮೊತ್ತವಾಗಿತ್ತು. ಆದರೆ ಈ ಮೂರು ದಾಖಲೆಗಳನ್ನು ಇದೀಗ ನ್ಯೂಜಿಲೆಂಡ್ ತಂಡ ಹಿಂದಿಕ್ಕಿದೆ.

ಭಾರತದ ವಿರುದ್ಧ ಕನಿಷ್ಠ ಸ್ಕೋರ್
ಅಂತೆಯೇ ಇಂದು ನ್ಯೂಜಿಲೆಂಡ್ ತಂಡ ಕಲೆಹಾಕಿದ 62ರನ್ ಗಳ ಸ್ಕೋರ್ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡ ಕಲೆಹಾಕಿದ ಕನಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2015ರಲ್ಲಿ ನಾಗ್ಪುರ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕಲೆ ಹಾಕಿದ್ದ 79ರನ್ ಗಳು ಭಾರತದ ವಿರುದ್ಧ ದಾಖಲಾದ ಅನ್ಯ ತಂಡವೊಂದರ ಕನಿಷ್ಠ ಸ್ಕೋರ್ ಆಗಿತ್ತು. ಬಳಿಕ ಇದೇ ವರ್ಷ ಅಂದರೆ 2021ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ತಂಡ ಅಹ್ಮದಾಬಾದ್ ಟೆಸ್ಟ್ ನಲ್ಲಿ 81ರನ್ ಗಳಿಗೆ ಆಲೌಟ್ ಆಗಿತ್ತು. ಇದು ಅನ್ಯ ತಂಡವೊಂದು ಭಾರತ ವಿರುದ್ಧ ಕಲೆಹಾಕಿದ 2ನೇ ಕಡಿಮೆ ಸ್ಕೋರ್ ಎಂದು ದಾಖಲಾಗಿತ್ತು. ಇದೀಗ ಈ ಪಟ್ಟಿಯಲ್ಲೂ ನ್ಯೂಜಿಲೆಂಡ್ ತಂಡ ತನ್ನ ಕಳಪೆ ಆಟದಿಂದ ಅಗ್ರ ಸ್ಥಾನಕ್ಕೇರಿದೆ...!!!

ಭಾರತದ ವಿರುದ್ಧ ಕಿವೀಸ್ ಕನಿಷ್ಠ ಸ್ಕೋರ್
ಅಂತೆಯೇ ಇಂದು ನ್ಯೂಜಿಲೆಂಡ್ ತಂಡದ ಪ್ರದರ್ಶನ ಭಾರತದ ವಿರುದ್ಧ ದಾಖಲಾದ ಅತ್ಯಂತ ಕಳಪೆ ಪ್ರದರ್ಶನವಾಗಿದ್ದು, ಈ ಹಿಂದೆ 2002ರಲ್ಲಿ ಹ್ಯಾಮಿಲ್ಟನ್ ನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ ಪಡೆ 94ರನ್ ಗಳಿಗೆ ಆಲೌಟ್ ಆಗಿತ್ತು. ಇದು ಈ ವರೆಗಿನ ಕಿವೀಸ್ ಪಡೆಯ ಭಾರತದ ವಿರುದ್ಧದ ಕಳಪೆಯಾಟವಾಗಿತ್ತು. 1981ರಲ್ಲಿ ವೆಲ್ಲಿಂಗ್ಟನ್ ನಲ್ಲಿ ಇದೇ ಭಾರತದ ವಿರುದ್ಧ ನ್ಯೂಜಿಲೆಂಡ್ ತಂಡ 100ರನ್ ಗೆ ಆಲೌಟ್ ಆಗಿತ್ತು. ಬಳಿಕ 1968ರಲ್ಲಿ ಆಕ್ಲೆಂಡ್ ನಲ್ಲಿ 101ರನ್ ಗೆ ಆಲೌಟ್ ಆಗಿತ್ತು. 

ವಾಂಖೆಡೆಯಲ್ಲಿ ಕನಿಷ್ಠ ಸ್ಕೋರ್
ಇನ್ನು ಕಿವೀಸ್ ಪಡೆಯ ಕಲೆ ಹಾಕಿದ 62ರನ್ ವಾಂಖೆಡೆ ಕ್ರೀಡಾಂಗಣದಲ್ಲಿ ತಂಡವೊಂದು ಟೆಸ್ಟ್ ಪಂದ್ಯದ ಇನ್ನಿಂಗ್ಸ್ ವೊಂದರಲ್ಲಿ ಕಲೆಹಾಕಿದ ಕನಿಷ್ಠ ರನ್ ಗಳಿಕೆಯಾಗಿದೆ. ಈ ಹಿಂದೆ 2004ರಲ್ಲಿ ಆಸ್ಚ್ರೇಲಿಯಾ ತಂಡ ಭಾರತದ ವಿರುದ್ಧ 93ರನ್ ಗಳಿಗೆ ಆಲೌಟ್ ಆಗಿತ್ತು. ಇದು ವಾಂಖೆಡೆಯಲ್ಲಿ ದಾಖಲಾದ ತಂಡವೊಂದರ ಕಡಿಮೆ ಸ್ಕೋರ್ ಆಗಿತ್ತು. ಬಳಿಕ 2006ರಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 100ರನ್ ಗೆ ಆಲೌಟ್ ಆಗಿತ್ತು. ಇದಕ್ಕೂ ಮೊದಲು 1981ರಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡವನ್ನು 102 ರನ್ ಗಳಿಗೆ ಆಲೌಟ್ ಮಾಡಿತ್ತು. 2004ರಲ್ಲಿ ಭಾರತ ತಂಡ ಆಸ್ಚ್ರೇಲಿಯಾ ವಿರುದ್ಧ ಇದೇ ಮೈದಾನದಲ್ಲಿ 104ರನ್ ಗಳಿಗೆ ಆಲೌಟ್ ಆಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com