ಮೊದಲ ಟೆಸ್ಟ್: ಎನ್‌ಗಿಡಿ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ; ಕೆಎಲ್ ರಾಹುಲ್ ಏಕಾಂಗಿ ಹೋರಾಟ; 327 ರನ್ ಗಳಿಗೆ ಆಲೌಟ್

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 327 ರನ್ ಗಳಿಗೆ ಆಲೌಟ್ ಆಗಿದೆ. 
ಕೆಎಲ್ ರಾಹುಲ್
ಕೆಎಲ್ ರಾಹುಲ್

ಸೆಂಚೂರಿಯನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 327 ರನ್ ಗಳಿಗೆ ಆಲೌಟ್ ಆಗಿದೆ. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಕೆಎಲ್ ರಾಹುಲ್ ಮತ್ತು ಮಾಯಾಂಕ್ ಅಗರವಾಲ್ ಉತ್ತಮ ಆರಂಭಿಕ ನೀಡಿದರು. ಮಾಯಾಂಕ್ 60 ರನ್ ಗಳಿಸಿ ಔಟಾದರು. ನಂತರ ಬಂದ ಚೇತೇಶ್ವರ ಪೂಜಾರ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. 

ಇನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರು. 35 ರನ್ ಗಳಿಸಿ ಕೊಹ್ಲಿ ಔಟಾದರೆ ಅಜಿಂಕ್ಯ ರಹಾನೆ 48 ರನ್ ಬಾರಿಸಿದರು. ಇದಾದ ನಂತರ ಬಂದ ಬ್ಯಾಟರ್ ಗಳು ಎರಡಂಕಿ ದಾಟುವಲ್ಲಿ ವಿಫಲರಾಗಿ ಪೆಲಿವಿಯನ್ ಸೇರಿದರು. 

ರಿಷಬ್ ಪಂತ್ 8, ಅಶ್ವಿನ್ 4, ಶಾರ್ದೂಲ್ 4, ಮೊಹಮ್ಮದ್ ಶಮಿ 8 ರನ್ ಗಳಿಸಿ ಔಟಾದರು. ಇನ್ನು ಕೊನೆಯಲ್ಲಿ ಬುಮ್ರಾ 14 ಸೇರಿದ್ದು ತಂಡ 300ರ ಗಡಿ ದಾಟಲು ಸಾಧ್ಯವಾಯಿತು. 

ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ 6 ವಿಕೆಟ್ ಪಡೆದಿದ್ದರೆ, ಕಾಗಿಸೋ ರಬಾಡ 3 ವಿಕೆಟ್ ಹಾಗೂ ಮಾರ್ಕೊ ಜಾನ್ಸೆನ್ 1 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com