ಬಾಂಗ್ಲಾ ಆಲ್ರೌಂಡರ್ ಮೊಹಮದುಲ್ಲಾ ಟೆಸ್ಟ್ ಕ್ರಿಕೆಟ್ ಗೆ ದಿಢೀರ್ ವಿದಾಯ!

ಬಾಂಗ್ಲಾದೇಶ ಕ್ರಿಕೆಟ್ ತಂಡ ಹಿರಿಯ ಆಟಗಾರ ಮೊಹಮದುಲ್ಲಾ ಟೆಸ್ಟ್ ಕ್ರಿಕೆಟ್ ಗೆ ದಿಢಿರನೇ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದಾರೆ. 
ಬಾಂಗ್ಲಾ ಆಲ್ರೌಂಡರ್ ಮೊಹಮದುಲ್ಲಾ
ಬಾಂಗ್ಲಾ ಆಲ್ರೌಂಡರ್ ಮೊಹಮದುಲ್ಲಾ

ಹರಾರೆ: ಬಾಂಗ್ಲಾದೇಶ ಕ್ರಿಕೆಟ್ ತಂಡ ಹಿರಿಯ ಆಟಗಾರ ಮೊಹಮದುಲ್ಲಾ ಟೆಸ್ಟ್ ಕ್ರಿಕೆಟ್ ಗೆ ದಿಢಿರನೇ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದಾರೆ. 

ಹರಾರೆಯಲ್ಲಿ ಸ್ಪೋರ್ಟ್ ಕ್ಲಬ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿದ ಬೆನ್ನಲ್ಲೇ ಮೊಹಮದುಲ್ಲಾ ವಿದಾಯ ಘೋಷಣೆ ಮಾಡಿದ್ದಾರೆ. 

ಬಾಂಗ್ಲಾ ತಂಡವು ಜಿಂಬಾಬ್ವೆ ವಿರುದ್ಧ ಸೆಣಸುತ್ತಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶ ತಂಡ 468 ರನ್ ಗಳಿಸಿದೆ. ಅದರಲ್ಲೂ ಮೊಹಮದುಲ್ಲಾ ಅಜೇಯ 150 ರನ್ ಗಳಿಸಿದ್ದರು. ಇದು ಅವರ ಜೀವನಶ್ರೇಷ್ಠ ಗಳಿಕೆಯಾಗಿದೆ. ಈ ಇನ್ನಿಂಗ್ಸ್ ಬಳಿಕ ಮೊಹಮದುಲ್ಲಾ ತನ್ನ ಸಹ ಆಟಗಾರರ ಬಳಿ ವಿದಾಯದ ಬಗ್ಗೆ  ಹೇಳಿಕೊಂಡಿದ್ದಾರೆ. 

ಈ ಬಗ್ಗೆ ಬಿಸಿಬಿ ವಕ್ತಾರರು ಖಚಿತಪಡಿಸಿದ್ದು, ಅವರು ಆಟಗಾರರ ಬಳಿ ಈ ರೀತಿ ಹೇಳಿಕೊಂಡಿದ್ದು ಹೌದು. ಆದರೆ ಇದುವರೆಗೆ ಅಧಿಕೃತವಾಗಿ ಬಿಸಿಬಿ ( ಬಾಂಗ್ಲಾ ಕ್ರಿಕೆಟ್ ಬೋರ್ಡ್) ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದಿದ್ದಾರೆ.

ಇನ್ನು ಬಾಂಗ್ಲಾದೇಶದ ಪರ ಮಹಮದುಲ್ಲಾ 49 ಟೆಸ್ಟ್ ಪಂದ್ಯಗಳಲ್ಲಿ 31 ರನ್ ಸರಾಸರಿಯಲ್ಲಿ ನಾಲ್ಕು ಅರ್ಧಶತಕಗಳು ಸೇರಿದಂತೆ 2764 ರನ್ ಗಳಿಸಿದ್ದಾರೆ.

35 ರ ಹರೆಯದ ಮಹಮ್ಮದುಲ್ಲಾ 2009 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಚೊಚ್ಚಲ ಪಂದ್ಯವನ್ನಾಡಿದ್ದರು. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ನಲ್ಲಿ ವಿಫಲರಾದರೂ ಚೊಚ್ಚಲ ಪಂದ್ಯದಲ್ಲಿಯೇ ಬಾಂಗ್ಲಾದೇಶದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿ ದಾಖಲೆ ನಿರ್ಮಿಸಿದರು, ಆ ಪಂದ್ಯದಲ್ಲಿ ಅವರು 8  ವಿಕೆಟ್‌ಗಳನ್ನು ಪಡೆದರು, ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಒಳಗೊಂಡಂತೆ ಬಾಂಗ್ಲಾದೇಶವು ವಿದೇಶದಲ್ಲಿ ತಮ್ಮ ಮೊದಲ ಜಯವನ್ನು ಮುಟ್ಟಲು ಸಹಾಯ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com