ಮೈದಾನದಲ್ಲೇ ಪಾಕಿಸ್ತಾನ ತಂಡದ ಮಾಜಿ ನಾಯಕನ ಜೊತೆ ಯುವ ಕ್ರಿಕೆಟಿಗ ಶಾಹೀನ್ ಅಫ್ರಿದಿ ವಾಕ್ಸಮರ!

ಮೈದಾನದಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನ ವಿರುದ್ಧ ವಾಗ್ವಾದ ನಡೆಸುವ ಮೂಲಕ ಪಾಕ್ ಕ್ರಿಕೆಟ್ ತಂಡದ ಯುವ ವೇಗಿ ಶಾಹೀನ್ ಅಫ್ರಿದಿ ಸುದ್ದಿಗೆ ಗ್ರಾಸವಾಗಿದ್ದಾರೆ.
ಶಾಹೀನ್ ಅಫ್ರಿದಿ-ಸರ್ಫರಾಜ್ ಅಹ್ಮದ್ ವಾಕ್ಸಮರ
ಶಾಹೀನ್ ಅಫ್ರಿದಿ-ಸರ್ಫರಾಜ್ ಅಹ್ಮದ್ ವಾಕ್ಸಮರ

ಲಾಹೋರ್: ಮೈದಾನದಲ್ಲೇ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನ ವಿರುದ್ಧ ವಾಗ್ವಾದ ನಡೆಸುವ ಮೂಲಕ ಪಾಕ್ ಕ್ರಿಕೆಟ್ ತಂಡದ ಯುವ ವೇಗಿ ಶಾಹೀನ್ ಅಫ್ರಿದಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಹೌದು.. ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿ ನಡೆದ ಪಂದ್ಯವೊಂದರಲ್ಲಿ ಪಾಕ್ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಮತ್ತು ಶಾಹೀನ್ ಅಫ್ರಿದಿ ಪರಸ್ಪರ ವಾಗ್ವಾದ ನಡೆಸಿದ್ದಾರೆ. ಅಬುದಾಬಿಯಲ್ಲಿ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿ ಲಾಹೋರ್ ಕಲಂದರ್ಸ್ ಮತ್ತು  ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಕ್ವೆಟ್ಟಾ ಗ್ಲಾಡಿಯರ್ಸ್ ತಂಡ ಬ್ಯಾಟಿಂಗ್ ಮಾಡುತ್ತಿತ್ತು. ಇನ್ನಿಂಗ್ಸ್ ನ 19ನೇ ಓವರ್ ನಲ್ಲಿ ಸರ್ಫರಾಜ್ ಅಹ್ಮದ್ ಬ್ಯಾಟಿಂಗ್ ಮಾಡುತ್ತಿದ್ದಾಗ ಬೌಲಿಂಗ್ ಮಾಡುತ್ತಿದ್ದ ಶಾಹೀನ್ ಅಫ್ರಿದಿ ಬೌನ್ಸರ್ ಎಸೆದಿದ್ದಾರೆ.

ಆ ಚೆಂಡು ನೇರವಾಗಿ ಸರ್ಫರಾಜ್ ಅಹ್ಮದ್ ಹೆಲ್ಮೆಟ್ ಗೆ ಬಡಿದು ನೇರವಾಗಿ ಥರ್ಡ್ ಮೆನ್ ನತ್ತ ಸಾಗಿತು. ಈ ವೇಳೆ ಫೀಲ್ಜ್ ಅಂಪೈರ್ ಅದನ್ನು ನೋಬಾಲ್ ಎಂದು ತೀರ್ಪು ನೀಡಿದರು. ಈ ವೇಳೆ ಸರ್ಫರಾಜ್ ಸಿಂಗಲ್ ರನ್ ತೆಗದುಕೊಂಡರು. ಅಂತೆಯೇ ಅಲ್ಲೇ ಇದ್ದ ಯುವ ವೇಗಿ ಶಾಹೀನ್  ಅಫ್ರಿದಿಯನ್ನು ಉಲ್ಲೇಖಿಸಿ ಸರ್ಫರಾಜ್ ಏನೋ ಹೇಳಿದರು. ಇದರಿಂದ ಆಕ್ರೋಶಗೊಂಡ ಶಾಹೀನ್ ಅಫ್ರಿದಿ ಸರ್ಫರಾಜ್ ವಿರುದ್ಧ ವಾಗ್ಯುದ್ಧಕ್ಕೆ ಮುಂದಾದರು. ಕೂಡಲೇ ಮಧ್ಯ ಪ್ರವೇಶಿಸಿದ ಫೀಲ್ಜ್ ಅಂಪೈರ್ ಗಳು ಮತ್ತು ಲಾಹೋರ್ ತಂಡದ ನಾಯಕ ಸೊಹೈಲ್ ಅಖ್ತರ್, ಹಿರಿಯ ಆಟಗಾರ  ಮಹಮದ್ ಹಫೀದ್ ಶಾಹೀನ್ ರನ್ನು ಸಮಾಧಾನಗೊಳಿಸಿದರು.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ಕುರಿತಂತೆ ಸಾಕಷ್ಟು ಮೀಮ್ ಗಳು ಸಹ ಹರಿದಾಡುತ್ತಿವೆ. ನೀವು ತಂಡದ ನಾಯಕರಲ್ಲದಿದ್ದರೆ, ತಂಡದ ಇತರೆ ಆಟಗಾರರ ವರ್ತನೆ ಹೀಗಿರುತ್ತದೆ ಎಂದು ಹಾಸ್ಯ ಮಾಡಲಾಗುತ್ತಿದೆ. ಅಲ್ಲದೆ ತಂಡದ  ಹಿರಿಯರ ವಿರುದ್ಧವೇ ದುರ್ವರ್ತನೆ ತೋರಿದ ಶಾಹೀನ್ ಅಫ್ರಿದಿ ನಡೆ ಸರಿಯಲ್ಲ ಎಂದೂ ಹಲವರು ಟೀಕಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com