ವಿಶ್ವ ದಾಖಲೆಯ ಹೊಸ್ತಿಲಲ್ಲಿ ನಾಯಕ ವಿರಾಟ್ ಕೊಹ್ಲಿ!

ಶುಕ್ರವಾರದಿಂದ ಸೌತಾಂಪ್ಟನ್ ಅಂಗಳದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿದ್ದು, ವಿರಾಟ್ ಕೊಹ್ಲಿ ದಾಖಲೆಯ ಕನಸು ಕಾಣುತ್ತಿದ್ದಾರೆ.
ವಿರಾಟ್ ಕೊಹ್ಲಿ, ರಿಕ್ಕಿ ಪಾಂಟಿಂಗ್
ವಿರಾಟ್ ಕೊಹ್ಲಿ, ರಿಕ್ಕಿ ಪಾಂಟಿಂಗ್
Updated on

ಲಂಡನ್: ಶುಕ್ರವಾರದಿಂದ ಸೌತಾಂಪ್ಟನ್ ಅಂಗಳದಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಭಾರತ, ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿದ್ದು, ವಿರಾಟ್ ಕೊಹ್ಲಿ ದಾಖಲೆಯ ಕನಸು ಕಾಣುತ್ತಿದ್ದಾರೆ.

ಹಲವು ದಾಖಲೆಗಳಿಗೆ ತಮ್ಮ ಹೆಸರು ನಮೂದಿಸಿರುವ ವಿರಾಟ್, ಮತ್ತೊಂದು ದಾಖಲೆಯ ಮೈಲುಗಲ್ಲು ತಲುಪುವ ಹೊಸ್ತಿಲಲ್ಲಿ ನಿಂತಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸಿದರೆ, ನಾಯಕನಾಗಿ ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಆಟಗಾರನಾಗುತ್ತಾರೆ. ಈ ಸಂದರ್ಭದಲ್ಲಿ, ಅವರು ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಲಿದ್ದಾರೆ. ಪಾಂಟಿಂಗ್ ಮತ್ತು ಕೊಹ್ಲಿ ಇಬ್ಬರೂ ನಾಯಕನಾಗಿ 41 ಶತಕಗಳನ್ನು ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ ಇದುವರೆಗೆ 200 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ, 41 ಶತಕ ಮತ್ತು 54 ಅರ್ಧಶತಕಗಳನ್ನು ಒಳಗೊಂಡಂತೆ ಕೊಹ್ಲಿ 62.33 ಸರಾಸರಿಯಲ್ಲಿ 12343 ರನ್ ಸಿಡಿಸಿದ್ದಾರೆ. ದಿಗ್ಗಜ ಆಟಗಾರ ರಿಕ್ಕಿ ಪಾಂಟಿಂಗ್ 324 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು. ಈ ಸಮಯದಲ್ಲಿ ಅವರು 45.54 ಸರಾಸರಿಯಲ್ಲಿ 15440 ರನ್ ಬಾರಿಸಿದ್ದರು. ಅಲ್ಲದೆ, ನಾಯಕನಾಗಿ, ಪಾಂಟಿಂಗ್ 41 ಶತಕಗಳು ಮತ್ತು 88 ಅರ್ಧಶತಕಗಳನ್ನು ಹೊಂದಿದ್ದಾರೆ.

ವಿರಾಟ್ ಕೊಹ್ಲಿಗೆ ಫೈನಲ್‌ನಲ್ಲಿ ಶತಕ ಬಾರಿಸುವ ಮೂಲಕ ಪಾಂಟಿಂಗ್‌ ಹಿಂದಿಕ್ಕುವ ಅವಕಾಶವಿದೆ. ವಾಸ್ತವವಾಗಿ, ಪಾಂಟಿಂಗ್ ಪ್ರಸ್ತುತ 71 ನೇ ಶತಕಗಳೊಂದಿಗೆ ಅಂತಾರ್‍ಟ್ರಾಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಎರಡನೇ ಸ್ಥಾನದಲ್ಲಿದ್ದಾರೆ. ಅದೇ ಸಮಯದಲ್ಲಿ, ವಿರಾಟ್ ಕೊಹ್ಲಿ ಪ್ರಸ್ತುತ 70 ಶತಕಗಳನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ ಟೆಸ್ಟ್ ಪಂದ್ಯಗಳಲ್ಲಿ 27 ಮತ್ತು ಏಕದಿನ ಪಂದ್ಯಗಳಲ್ಲಿ 43 ಶತಕ ಗಳಿಸಿದ್ದಾರೆ.

ವಿಶ್ವ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಭಾರತದ ಖ್ಯಾತ ಬ್ಯಾಟ್ಸ್ ಮನ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು ನೂರು ಶತಕ ಬಾರಿಸಿದ್ದಾರೆ. ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ ನಲ್ಲಿ 51 ಬಾರಿ ಮುರಂಕಿ ದಾಟಿದ್ದು, ಏಕದಿನ ಕ್ರಿಕೆಟ್ ನಲ್ಲಿ 49 ಶತಕ ಸಿಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com