ಡಬ್ಲ್ಯುಟಿಸಿ ಫೈನಲ್ ಪಂದ್ಯ ಡ್ರಾ ಆದರೆ ವಿಜೇತರನ್ನು ಘೋಷಿಸಲು ಐಸಿಸಿ ಮಾರ್ಗ ಕಂಡುಕೊಳ್ಳಬೇಕು: ಸುನಿಲ್ ಗವಾಸ್ಕರ್

ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯವಾದರೆ ಐಸಿಸಿ ವಿಜೇತರು ಯಾರೆಂದು ಘೋಷಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಸುನೀಲ್ ಗವಾಸ್ಕರ್
ಸುನೀಲ್ ಗವಾಸ್ಕರ್

ಸೌತಾಂಪ್ಟನ್: ಟೀಂ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಡ್ರಾನಲ್ಲಿ ಅಂತ್ಯವಾದರೆ ಐಸಿಸಿ ವಿಜೇತರು ಯಾರೆಂದು ಘೋಷಿಸಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಪಂದ್ಯದ ಮೊದಲ ಹಾಗೂ ನಾಲ್ಕನೇ ದಿನದಾಟ ಮಳೆಯಿಂದಾಗಿ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇನ್ನುಳಿದ ದಿನಗಳು ಮಂದ ಬೆಳಕಿನಿಂದಾಗಿ ಆಟಕ್ಕೆ ಅಡ್ಡಿಯಾಗುತ್ತಿತ್ತು. ಹೀಗಾಗಿ ಪಂದ್ಯದಲ್ಲಿ ಫಲಿತಾಂಶ ಬರುವುದು ಖಂಡಿತ ಸಾಧ್ಯವಿಲ್ಲ. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ ವಿಜೇತರನ್ನು ಘೋಷಿಸಲು ಮಾರ್ಗವೊಂದನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ. 
 
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಡ್ರಾನಲ್ಲಿ ಅಂತ್ಯವಾದರೆ ವಿಜೇತರನ್ನು ಆಯ್ಕೆ ಮಾಡಲು ಒಂದು ಸೂತ್ರವಿರಬೇಕು. ಐಸಿಸಿ ಕ್ರಿಕೆಟ್ ಸಮಿತಿ ಯೋಚಿಸಿ ನಂತರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಗವಾಸ್ಕರ್ 'ಆಜ್ ತಕ್'ಗೆ ತಿಳಿಸಿದರು.

ಡ್ರಾ ಅಥವಾ ಟೈನಲ್ಲಿ ಅಂತ್ಯವಾದರೆ ಭಾರತ ಮತ್ತು ನ್ಯೂಜಿಲೆಂಡ್ ಟ್ರೋಫಿಯನ್ನು ಹಂಚಿಕೊಳ್ಳುತ್ತವೆ ಎಂದು ಐಸಿಸಿ ಕಳೆದ ತಿಂಗಳು ಸ್ಪಷ್ಟಪಡಿಸಿದ್ದರಿಂದ ಈ ಆವೃತ್ತಿಯಲ್ಲಿ ನಿಯಮಗಳಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆಯಿಲ್ಲ. ಹೀಗಿನ ಸಂದರ್ಭ ನೋಡಿದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಡ್ರಾನಲ್ಲಿ ಅಂತ್ಯವಾಗಿ ಟ್ರೋಫಿಯನ್ನು ಹಂಚಿಕೊಳ್ಳಲಾಗುವುದು ಎಂದು ತೋರುತ್ತದೆ. ಫೈನಲ್‌ನಲ್ಲಿ ಟ್ರೋಫಿಯನ್ನು ಹಂಚಿಕೊಳ್ಳುವುದು ಇದೇ ಮೊದಲು ಎಂದು ಗವಾಸ್ಕರ್ ಹೇಳಿದರು.

ನ್ಯೂಜಿಲ್ಯಾಂಡ್ ಮತ್ತು ಟೀಂ ಇಂಡಿಯಾ ನಡುವಿನ ಪಂದ್ಯದಲ್ಲಿ ಮೊದಲು ಇನ್ನಿಂಗ್ಸ್ ಆರಂಭಿಸಿದ್ದ ಟೀಂ ಇಂಡಿಯಾ 217 ರನ್ ಗಳಿಗೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲ್ಯಾಂಡ್ 2 ವಿಕೆಟ್ ನಷ್ಟಕ್ಕೆ 101 ರನ್ ಬಾರಿಸಿದೆ. ಮೂರನೇ ದಿನದಾಟಕ್ಕೆ ನ್ಯೂಜಿಲ್ಯಾಂಡ್ 101 ರನ್ ಬಾರಿಸಿತ್ತು. ನಾಲ್ಕನೇ ದಿನದಾಟ ಆರಂಭಕ್ಕೂ ಮುನ್ನವೇ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. 

ನ್ಯೂಜಿಲ್ಯಾಂಡ್ ಪರ ಟಾಮ್ ಲ್ಯಾಥಮ್ 30 ಮತ್ತು ಡಿವೋನ್ ಕೊನ್ವಾಯ್ 54 ರನ್ ಬಾರಿಸಿದ್ದಾರೆ. ಕೇನ್ ವಿಲಿಯಮ್ಸನ್ ಅಜೇಯ 12 ರನ್ ಮತ್ತು ರಾಸ್ ಟೇಲರ್ ಅಜೇಯರಾಗಿದ್ದು ಐದನೇ ದಿನದಾಟ ಪ್ರಾರಂಭಿಸಲಿದ್ದಾರೆ. ಇನ್ನು ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 34, ಶುಭ್ಮನ್ ಗಿಲ್ 28, ವಿರಾಟ್ ಕೊಹ್ಲಿ 44, ಅಂಜಿಕ್ಯ ರಹಾನೆ 49 ಮತ್ತು ರವಿಚಂದ್ರನ್ ಅಶ್ವಿನ್ 22 ರನ್ ಬಾರಿಸಿದ್ದಾರೆ. ನ್ಯೂಜಿಲ್ಯಾಂಡ್ ಪರ ಬೌಲಿಂಗ್ ನಲ್ಲಿ ಕೇಲ್ ಜೇಮಿಸನ್ 5, ವಾಗ್ನರ್ ಮತ್ತು ಟ್ರಿಂಟ್ ಬೌಲ್ಟ್ ತಲಾ 2 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com