ಐಪಿಎಲ್ 2021 ಉಳಿದ ಪಂದ್ಯಗಳು ಯುಎಇಗೆ ಶಿಫ್ಟ್: ಬಿಸಿಸಿಐ ಪ್ರಕಟಣೆ

ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ  ಇಂಡಿಯನ್ ಪ್ರೀಮಿಯರ್ ಲೀಗ್ 2021 ಸೀಸನ್ ನ ಉಳಿದ ಪಂದ್ಯಗಳನ್ನು ಆಡಲು ತೀರ್ಮಾನಿಸಿದ್ದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ.

Published: 29th May 2021 02:23 PM  |   Last Updated: 29th May 2021 02:34 PM   |  A+A-


ಸಂಗ್ರಹ ಚಿತ್ರ

Posted By : Raghavendra Adiga
Source : ANI

ಕೋಲ್ಕತ್ತಾ: ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2021 ಸೀಸನ್ ನ ಉಳಿದ ಪಂದ್ಯಗಳನ್ನು ಆಡಲು ತೀರ್ಮಾನಿಸಿದ್ದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ಪ್ರಕಟಿಸಿದೆ.

ವರ್ಚುವಲ್ ಆಗಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ (ಎಸ್‌ಜಿಎಂ) ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸದಸ್ಯರು ಐಪಿಎಲ್ ಅನ್ನು ಪುನರಾರಂಭಿಸಲು ಸರ್ವಾನುಮತದಿಂದ ಒಪ್ಪಿಕೊಂಡರು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. "ಐಸಿಸಿ ಟಿ20 ವಿಶ್ವಕಪ್ 2021 ನ ಆತಿಥ್ಯ ಕುರಿತು ನಿರ್ಧರಿಸಲು ಐಸಿಸಿ ನಿಂದ ಇನ್ನಷ್ಟು ಕಾಲಾವಕಾಶ ಕೋರಲು ಬಿಸಿಸಿಐ ಎಸ್‌ಜಿಎಂ ಒಪ್ಪಿಗೆ ಸೂಚಿಸಿತು" ಎಂದು ಶಾ ಹೇಳಿದರು.

ಕೊರೋನಾ ವೈರಸ್ ಎರಡನೇ ಅಲೆ ದೇಶಾದ್ಯಂತ ಉಲ್ಬಣಗೊಳ್ಳಲು ಪ್ರಾರಂಭಿಸಿದ ಕಾರಣ ಮತ್ತು ಐಪಿಎಲ್‌ನ ಪ್ರಸಕ್ತ ಋತುವನ್ನು ಅರ್ಧಕ್ಕೇ ಸ್ಥಗಿತಗೊಳಿಸಲಾಗಿದೆ ಮತ್ತು ತಂಡಗಳು ಸಹ ಸೋಂಕಿಗೆ ಒಳಗಾಗಿದೆ. ಹಿಂದಿನ ಋತುವಿ ನಲ್ಲಿ ಎಲ್ಲಾ ಪಂದ್ಯಗಳೂ ಯುಎಇಯಲ್ಲಿ ನಡೆಸಲಾಗಿತ್ತು.

ಸೆಪ್ಟೆಂಬರ್-ಅಕ್ಟೋಬರ್ ಸಮಯವನ್ನು ಗಮನದಲ್ಲಿಟ್ಟುಕೊಂಡು ಆಯಾ ಮಂಡಳಿಗಳೊಂದಿಗೆ ವಿದೇಶಿ ಆಟಗಾರರ ಲಭ್ಯತೆಯನ್ನು ಕುರಿತು ಬಿಸಿಸಿಐ ಚರ್ಚೆ ನಡೆಸಲಿದೆ ಎಂದು ತೀರ್ಮಾನವಾಗಿದೆ. ಸಭೆಯ ಬೆಳವಣಿಗೆಗಳ ಬಗ್ಗೆ ತಿಳಿದಿರುವ ಮೂಲವೊಂದು ಎಎನ್‌ಐಯೊಂದಿಗೆ ಮಾತನಾಡಿ  ಲೀಗ್‌ನ 14 ನೇ ಆವೃತ್ತಿಯನ್ನು ಪೂರ್ಣಗೊಳಿಸಲು 25 ದಿನಗಳ ಅವಕಾಶವನ್ನು  ಹೊಂದುವ ಉದ್ದೇಶದಿಂದ ಯುಎಇಯಲ್ಲಿ ಐಪಿಎಲ್ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದೆ ಎಂದು ಹೇಳಿದರು.

"ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಯೊಂದಿಗೆ ಮಾತುಕತೆ ನಡೆದಿವೆ ಮತ್ತು ಉಳಿದ ಐಪಿಎಲ್ ಪಂದ್ಯಗಳನ್ನು ದುಬೈ, ಶಾರ್ಜಾ ಮತ್ತು ಅಬುಧಾಬಿಯಲ್ಲಿ ನಡೆಸಲು  ಅವರು ಸಂತೋಷಪಡುತ್ತಾರೆ. ಬಿಸಿಸಿಐ ಈಗ ವಿದೇಶಿ ಮಂಡಳಿಗಳೊಂದಿಗೆ ಮಾತನಾಡಿ ಲಭ್ಯತೆಯ ಬಗ್ಗೆ ನಿರ್ಧರಿಸುತ್ತದೆ ವಿದೇಶಿ ಆಟಗಾರರು. ಆಸ್ಟ್ರೇಲಿಯಾದ ಆಟಗಾರರು ಲಭ್ಯವಿದ್ದರೂ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಆಟಗಾರರ ಲಭ್ಯತೆಯ ಬಗ್ಗೆ ಕೆಲವು ಪ್ರಶ್ನೆಗಳಿವೆ, ಅವು ಹೇಗೆ ತೀರ್ಮಾನವಾಗಲಿದೆಎಂಬುದನ್ನು ನಾವು ಕಾದು ನೋಡಬೇಕು. ನಾವು 25 ದಿನಗಳ ಅವಕಾಶವನ್ನು ಕೇಳಿದ್ದೇವೆ. ಅದು ಸಿಕ್ಕಲಿದೆ." ಮೂಲ ಹೇಳಿದೆ.

ಸರ್ಕಾರದಿಂದ ತೆರಿಗೆ ವಿನಾಯಿತಿಗೆ ಸಂಬಂಧಿಸಿದಂತೆ, ಮಂಡಳಿಯು ಸಕಾರಾತ್ಮಕ ಮಾತುಕತೆಯ ವಿಶ್ವಾಸ ಹೊಂದಿದೆ. "ನಾವು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಮತ್ತು ಮಾತುಕತೆ ಭಾರತದಲ್ಲಿ ಪಂದ್ಯಾವಳಿ ನಡೆಸಲು ನಿರ್ಣಾಯಕವಾಗಿದೆ" ಎಂದು ಮೂಲಗಳು ತಿಳಿಸಿವೆ.


Stay up to date on all the latest ಕ್ರಿಕೆಟ್ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp