ಟಿ20 ವಿಶ್ವಕಪ್: ಕೊಹ್ಲಿ ಕುಟುಂಬಕ್ಕೆ ಬೆದರಿಕೆ ಹಾಕಿರುವುದು ಸರಿಯಲ್ಲ: ಇಂಜಮಾಮ್ ಉಲ್ ಹಕ್

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕುಟುಂಬಕ್ಕೆ ಬೆದರಿಕೆ ಹಾಕಿರುವುದು ಸರಿಯಲ್ಲ ಎಂದು ಪಾಕಿಸ್ತಾನ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.
ಇಂಜಮಾಮ್ ಉಲ್ ಹಕ್
ಇಂಜಮಾಮ್ ಉಲ್ ಹಕ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕುಟುಂಬಕ್ಕೆ ಬೆದರಿಕೆ ಹಾಕಿರುವುದು ಸರಿಯಲ್ಲ ಎಂದು ಪಾಕಿಸ್ತಾನ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೇಳಿದ್ದಾರೆ.

ಭಾನುವಾರ ನಡೆದ ಐಸಿಸಿ ಟಿ- 20 ವಿಶ್ವಕಪ್ 2021 ರಲ್ಲಿ ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ವಿರುದ್ಧ ಭಾರತ 8 ವಿಕೆಟ್‌ಗಳ ಸೋಲು ಅನುಭವಿಸಿದ ಹಿನ್ನೆಲೆ ನಾಯಕ ವಿರಾಟ್​ ಕೊಹ್ಲಿ ಕುಟುಂಬಕ್ಕೆ ಕೆಲವು ಕಿಡಿಗೇಡಿಗಳು ಬೆದರಿಕೆಯೊಡ್ಡುತ್ತಿದ್ದಾರೆ. ಈ ಸುದ್ದಿ ಕೇಳಿ ತುಂಬಾ ಬೇಸರವಾಗುತ್ತಿದೆ ಎಂದು ಪಾಕಿಸ್ತಾನದ ಮಾಜಿ ಕೋಚ್ ಇಂಜಮಾಮ್-ಉಲ್-ಹಕ್​ ಹೇಳಿದ್ದಾರೆ.

ಪಾಕಿಸ್ತಾನದ ವಿರುದ್ಧ ಕೂಡ ಟೀಂ ಇಂಡಿಯಾ ಸೋತಿತ್ತು. ಹಾಗಾಗಿ ಕ್ರಿಕೆಟ್​ ಅಭಿಮಾನಿಗಳು ನ್ಯೂಜಿಲೆಂಡ್​​ ವಿರುದ್ಧ ಗೆಲ್ಲುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದರು. ಆದ್ರೆ ಈ ಪಂದ್ಯದಲ್ಲಿಯೂ ಕೂಡ ನಿರಾಶೆಯಾಗಿದೆ. ಭಾರತ ತಂಡದ ಈ ಕಳಪೆ ಪ್ರದರ್ಶನದ ವಿರುದ್ಧ ಅಭಿಮಾನಿಗಳು ಸಿಡಿದೆದ್ದಿದ್ದು, ಇದು ಅತಿರೇಖಕ್ಕೆ ತಿರುಗಿ ಕುಟುಂಬದವರನ್ನು ನಿಂದಿಸುವವರೆಗೆ ಬಂದಿದೆ.

ನಾಯಕ ಕೊಹ್ಲಿ ಕುಟುಂಬಕ್ಕೆ ಬೆದರಿಕೆ ಹಾಕುತ್ತಿರುವ ವ್ಯಕ್ತಿಗಳನ್ನು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಕಟುವಾಗಿ ಟೀಕಿಸಿದ್ದಾರೆ. ಭಾರತದ ಸೋಲಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡ ಇಂಜಮಾಮ್, ಭಾರತದ ಸೋಲನ್ನು ಮತ್ತು ಆಟಗಾರರ ಪ್ರದರ್ಶನವನ್ನು ಟೀಕಿಸಲು ಪ್ರತಿಯೊಬ್ಬರಿಗೂ ಹಕ್ಕಿದೆ. ಈ ಗೆರೆಯನ್ನು ಯಾರೂ ದಾಟಬಾರದು. ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ನಂತರ ಕೊಹ್ಲಿ ಮಗಳಿಗೆ ಬೆದರಿಕೆ ಹಾಕುವವರನ್ನು ನೋಡಿ ನನಗೆ ತುಂಬಾ ನೋವಾಗಿದೆ ಎಂದು ಇಂಜಮಾಮ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com