ಜನಾಂಗೀಯ ನಿಂದನೆ ಆರೋಪ: ಬಿಬಿಸಿ ಶೋನಿಂದ ಮೈಕೆಲ್ ವಾನ್ ಗೆ ಗೇಟ್ ಪಾಸ್ 

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ವಿರುದ್ಧ ಇಬ್ಬರು ಆಟಗಾರರು ಜನಾಂಗೀಯ ನಿಂದನೆ ಆರೋಪಗಳನ್ನು ಹೊರಿಸಿದ ನಂತರ ಬಿಬಿಸಿ ಶೋನಿಂದ ಕೈಬಿಡಲಾಗಿದೆ.
Michael Vaughan
Michael Vaughan

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ವಿರುದ್ಧ ಇಬ್ಬರು ಆಟಗಾರರು ಜನಾಂಗೀಯ ನಿಂದನೆ ಆರೋಪಗಳನ್ನು ಹೊರಿಸಿದ ನಂತರ ಬಿಬಿಸಿ ಶೋನಿಂದ ಕೈಬಿಡಲಾಗಿದೆ. ಬಿಬಿಸಿ 5 ಲೈವ್‌ನ 'ದಿ ಟಫರ್ಸ್ ಮತ್ತು ವಾಘನ್ ಕ್ರಿಕೆಟ್ ಶೋ' ನಲ್ಲಿ 12 ವರ್ಷಗಳಿಂದ ಟೆಸ್ಟ್ ಪಂದ್ಯದ ವಿಶೇಷ ವಿಶ್ಲೇಷಕರಾಗಿ ವಾನ್ ಕೆಲಸ ಮಾಡುತ್ತಿದ್ದರು.

2009 ರಲ್ಲಿ ಯಾರ್ಕ್‌ಷೈರ್ ಪಂದ್ಯದ ಮೊದಲು ವಾನ್ ತನ್ನ ಮತ್ತು ಇತರ ಆಟಗಾರರ ಬಗ್ಗೆ ಜನಾಂಗೀಯ ಹೇಳಿಕೆ ನೀಡಿದ್ದರು  ಎಂದು ಅಜೀಮ್ ರಫೀಕ್ ಜನಾಂಗೀಯ ನಿಂದನೆ ಆರೋಪ ಮಾಡಿದ ನಂತರ ಸೋಮವಾರದಿಂದ ಅವರು ಶೋನಲ್ಲಿ ಕಾಣಿಸಿಕೊಳ್ಳುತ್ತಿಲ್ಲ.  ಡೈಲಿ ಟೆಲಿಗ್ರಾಪ್ ನ ಅಂಕಣದಲ್ಲಿ, ತಮ್ಮ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿರುವ ನಿರಾಕರಿಸಿರುವ ವಾನ್, ಇದರಲ್ಲಿ ತನ್ನ ಹೆಸರನ್ನು ತೆರವುಗೊಳಿಸಲು ಹೋರಾಟ ಮಾಡುವ ಪ್ರತಿಜ್ಞೆ ಮಾಡಿದ್ದಾರೆ. 

1991 ರಿಂದ 2009 ರಲ್ಲಿ ನಿವೃತ್ತಿಯಾಗುವವರೆಗೂ ಕೌಂಟಿಯನ್ನು ಪ್ರತಿನಿಧಿಸಿದ್ದ ವಾನ್, ಇದರ ಬಗ್ಗೆ ನೀವು ತುಂಬ ಮಂದಿ ಇದ್ದೀರಿ, ಇದರ ಬಗ್ಗೆ ನಾವು ಏನಾದರೂ ಮಾಡಬೇಕಾಗಿದೆ ಎಂದು ರಫೀಕ್ ಸೇರಿದಂತೆ ಏಷ್ಯನ್ ಗುಂಪಿನ ಮಹಿಳೆಯರಿಗೆ ಮೈಕೆಲ್ ವಾನ್ ಹೇಳಿದ್ದಾರೆ. 

2009 ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ವಿರುದ್ಧದ ಪಂದ್ಯದಲ್ಲಿ ಯಾರ್ಕ್‌ಷೈರ್ ಫೀಲ್ಡಿಂಗ್ ತೆಗೆದುಕೊಳ್ಳುತ್ತಿದ್ದಾಗ, ರಫೀಕ್ ಅವರ ಚೊಚ್ಚಲ ಸೀಸನ್ ನಲ್ಲಿ ಆರೋಪದ ಘಟನೆ ಸಂಭವಿಸಿದೆ. "ನಾನು ಆ ಮಾತುಗಳನ್ನು ಹೇಳಿದ್ದೇನೆ ಎಂದು ನಾನು ಸಂಪೂರ್ಣವಾಗಿ ಮತ್ತು ಸ್ಪಷ್ಟವಾಗಿ ನಿರಾಕರಿಸುತ್ತೇನೆ. ನನಗೆ ಮುಚ್ಚಿಡಲು ಏನೂ ಇಲ್ಲ ಎಂದು ವಾನ್ ಅಂಕಣದಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com