ಟಿ20 ವಿಶ್ವಕಪ್: ನ್ಯೂಜಿಲ್ಯಾಂಡ್ ವಿರುದ್ಧ ಮುಗ್ಗರಿಸಿದ ಅಫ್ಘಾನ್; ಸೆಮಿಫೈನಲ್ ಪ್ರವೇಶಿಸುವ ಭಾರತದ ಆಸೆಗೆ ಕೊಳ್ಳಿ!
ಅಬುಧಾಬಿಯಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ನ್ಯೂಜಿಲ್ಯಾಂಡ್ 8 ವಿಕೆಟ್ ಗಳ ಜಯ ಗಳಿಸಿದೆ.
Published: 07th November 2021 06:53 PM | Last Updated: 08th November 2021 01:39 PM | A+A A-

ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ
ಅಬುಧಾಬಿ: ಅಬುಧಾಬಿಯಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ವಿರುದ್ಧ ನ್ಯೂಜಿಲ್ಯಾಂಡ್ 8 ವಿಕೆಟ್ ಗಳ ಜಯ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನ್ ತಂಡ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಪೇರಿಸಿತು. 125 ರನ್ ಗಳ ಗುರಿಯನ್ನು ನ್ಯೂಜಿಲ್ಯಾಂಡ್ ತಂಡ ಕೇವಲ 18.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ತಲುಪಿ ತ್ವರಿತಗತಿಯಲ್ಲಿ ಅಫ್ಘನ್ ತಂಡದ ವಿರುದ್ಧ ಗೆಲುವನ್ನು ತನ್ನದಾಗಿಸಿಕೊಂಡಿತ್ತು.
ಟೀಂ ಇಂಡಿಯಾ ಸೆಮಿಫೈನಲ್ ಪ್ರವೇಶದ ದೃಷ್ಟಿಯಿಂದ ಈ ಪಂದ್ಯ ಭಾರತೀಯ ಕ್ರೀಡಾಭಿಮಾನಿಗಳಿಗೆ ಮಹತ್ವ ಪಡೆದುಕೊಂಡಿತ್ತು. ಈ ಪಂದ್ಯದಲ್ಲಿ ಅಫ್ಘಾನ್ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಗೆಲುವು ಸಾಧಿಸಿದ್ದರೆ ಭಾರತದ ಸೆಮಿಫೈನಲ್ ಪ್ರವೇಶದ ಕನಸು ಜೀವಂತವಾಗಿರುತ್ತಿತ್ತು. ಆದರೆ ಅಫ್ಘಾನ್ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಸೋಲು ಕಂಡಿರುವ ಪರಿಣಾಮ ಭಾರತದ ಆಸೆ ಭಗ್ನಗೊಂಡಿದೆ. ಇದೇ ವೇಳೆ ನ್ಯೂಜಿಲ್ಯಾಂಡ್ ಸೆಮಿಫೈನಲ್ಸ್ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದೆ.
ಅಫ್ಘಾನ್ ಪರ ಗುಲ್ಬದೀನ್ ನೈಬ್ 15, ನಿಜಿಬುಲ್ 73 ಮತ್ತು ನಾಯಕ ಮೊಹಮ್ಮದ್ ನಬಿ 14 ರನ್ ಗಳಿಸಿದ್ದರು.
ನ್ಯೂಜಿಲ್ಯಾಂಡ್ ಪರ ಮಾರ್ಟಿನ್ ಗಪ್ಟಿಲ್ 23 ಎಸೆತಗಳಲ್ಲಿ 28 ರನ್ ಗಳಿಸಿದರು, ಡೇರಿಲ್ ಮಿಚೆಲ್ 12 ಎಸೆತಗಳಲ್ಲಿ 17 ರನ್ ಗಳಿಸಿ ಪೆವಿಲಿಯನ್ ನತ್ತ ನಡೆದರು. ಕೇನ್ ವಿಲಿಯಮ್ಸನ್ ( 42 ಎಸೆತಗಳಲ್ಲಿ 40 ರನ್) ಡೆವೊನ್ ಕಾನ್ವೆ 32 ಎಸೆತಗಳಲ್ಲಿ 36 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.