ಟಿ-20 ವಿಶ್ವಕಪ್: ವಿರಾಟ್ ಕೊಹ್ಲಿ- ರವಿ ಶಾಸ್ತ್ರಿ ಜೋಡಿಯ ಯುಗಾಂತ್ಯ!
ಟಿ-20 ವಿಶ್ವಕಪ್ ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಟೀಮ್ ಇಂಡಿಯಾ ಪಂದ್ಯವಾಡಲಿದೆ. ನ್ಯೂಜಿಲೆಂಡ್ ವಿರುದ್ಧದ ಭಾನುವಾರದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲುವ ಮೂಲಕ ಟೂರ್ನಿಯಲ್ಲಿ ಭಾರತದ ಸೆಮಿಫೈನಲ್ ಹಾದಿ ಕೊನೆಗೊಂಡಿತು.
Published: 08th November 2021 02:26 PM | Last Updated: 08th November 2021 02:26 PM | A+A A-

ವಿರಾಟ್ ಕೊಹ್ಲಿ ಮತ್ತು ರವಿ ಶಾಸ್ತ್ರಿ
ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಜೋಡಿಯ ಯುಗ ಇಂದು ಅಂತ್ಯವಾಗಲಿದೆ.
ಟಿ-20 ವಿಶ್ವಕಪ್ ನ ಕೊನೆಯ ಲೀಗ್ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಟೀಮ್ ಇಂಡಿಯಾ ಪಂದ್ಯವಾಡಲಿದೆ. ನ್ಯೂಜಿಲೆಂಡ್ ವಿರುದ್ಧದ ಭಾನುವಾರದ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಸೋಲುವ ಮೂಲಕ ಟೂರ್ನಿಯಲ್ಲಿ ಭಾರತದ ಸೆಮಿಫೈನಲ್ ಹಾದಿ ಕೊನೆಗೊಂಡಿತು.
ಇವತ್ತಿನ ಪಂದ್ಯ ವಿಶ್ವಕಪ್ ಟಿ-20 ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹೀಗಾಗಿ, ಟಿ-20 ವಿಶ್ವಕಪ್ ನಲ್ಲಿ ಕೊಹ್ಲಿ ಬ್ರಿಗೇಡ್ ನ ಹೋರಾಟ ಕೊನೆಗೊಂಡಿದೆ. ಈ ಅತಿದೊಡ್ಡ ಟೂರ್ನಿ ಆರಂಭಕ್ಕೂ ಮುನ್ನವೇ ವಿರಾಟ್ ಕೊಹ್ಲಿ ಟಿ-20 ಫ್ಲ್ಯಾಟ್ ಫಾರ್ಮ್ ಗೆ ವಿದಾಯ ಹೇಳಿದ್ದರಲ್ಲದೆ, ಇದು ಕೊನೆ ಟೂರ್ನಿ ಎಂದು ಘೋಷಣೆ ಮಾಡಿದ್ದರು. ಇನ್ನೊಂದೆಡೆ ಮುಖ್ಯ ತರಬೇತುದಾರರಾಗಿರುವ ರವಿಶಾಸ್ತ್ರಿ, ಭಾರತ ತಂಡದ ಎಲ್ಲ ಸ್ವರೂಪದ ಕ್ರಿಕೆಟ್ ಕೋಚ್ ಹುದ್ದೆಗೆ ವಿದಾಯ ಹೇಳಲಿದ್ದಾರೆ.
2017ರಿಂದ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿ, ಭಾರತ ತಂಡವನ್ನು ಮುನ್ನಡೆಸಿಕೊಂಡು ಬಂದಿದ್ದರು. ಆದರೆ, ಕ್ಯಾಪ್ಟನ್ ಕೊಹ್ಲಿ ಹಾಗೂ ರವಿ ಶಾಸ್ತ್ರಿ ದಿಗ್ಗಜ ಜೋಡಿಯ ಬೇಸರದ ಸಂಗತಿ ಏನೆಂದರೆ ಐಸಿಸಿಯ ಯಾವುದೇ ಪ್ರಮುಖ ಇವೆಂಟ್ ಗಳಲ್ಲಿ ತಂಡವನ್ನು ಗೆಲ್ಲಿಸಿಕೊಳ್ಳದಿರುವುದು ಭಾರತೀಯ ಅಭಿಮಾನಿಗಳ ನೋವಿಗೆ ಕಾರಣವಾಗಿದೆ.
ನಮೀಬಿಯಾ ತಂಡ ಟೆಸ್ಟ್ ಮಾನ್ಯತೆ ಹೊಂದದಿದ್ದರೂ 2021ರ ಟಿ-20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಅರ್ಹತಾ ಸುತ್ತಿನ ಮೂಲಕ ಸೂಪರ್-12ರ ಘಟ್ಟವನ್ನು ನಮಿಬಿಯಾ ತಲುಪಿ ಐಸಿಸಿ ಈವೆಂಟ್ ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇನ್ನೂ ಈ ಪಂದ್ಯ ಔಪಚಾರಿಕವಾಗಿರುವುದರಿಂದ ಭಾರತ ತಂಡದಲ್ಲಿ ಬೆಂಚು ಕಾಯ್ದಿರುವ ಆಟಗಾರರಿಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ. ಅಲ್ಲದೆ, ಕೆಲ ಹಿರಿಯ ಆಟಗಾರರು ರೆಸ್ಟ್ ಪಡೆಯಬಹುದಾಗಿದೆ. ಇದೆಲ್ಲವನ್ನು ಪಂದ್ಯ ಆರಂಭಕ್ಕೂ ಮುನ್ನ ನಾಯಕ ವಿರಾಟ್ ಕೊಹ್ಲಿ ನಿರ್ಧಾರ ಮಾಡಲಿದ್ದಾರೆ.