T20 World Cup: ಐಪಿಎಲ್ ನಿಂದ ತುಂಬಾನೇ ಲಾಭ ಆಗಿದೆ- ಕಿವೀಸ್ ನಾಯಕ ಕೇನ್ ವಿಲಿಯಮ್ಸನ್

ಇಂಡಿಯನ್ ಪ್ರಿಮಿಯರ್ ಲೀಗ್ ನಿಂದ ನಮಗೆ ತುಂಬಾನೇ ಲಾಭ ಆಗಿದೆ ಅಂತಾ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ. ಐಪಿಎಲ್ ನಿಂದಾಗಿ ಭಾರತೀಯ ಕ್ರಿಕೆಟ್ ತಂಡ ಟಿ-20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೇನ್ ವಿಲಿಯಮ್ಸನ್ ಈ ಹೇಳಿಕೆ ಹೊರಬಿದ್ದಿದೆ. 
ಕೇನ್ ವಿಲಿಯಮ್ಸನ್
ಕೇನ್ ವಿಲಿಯಮ್ಸನ್

ಅಬುಧಾಬಿ: ಇಂಡಿಯನ್ ಪ್ರಿಮಿಯರ್ ಲೀಗ್ ನಿಂದ ನಮಗೆ ತುಂಬಾನೇ ಲಾಭ ಆಗಿದೆ ಅಂತಾ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ. ಐಪಿಎಲ್ ನಿಂದಾಗಿ ಭಾರತೀಯ ಕ್ರಿಕೆಟ್ ತಂಡ ಟಿ-20 ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಎಂಬ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಕೇನ್ ವಿಲಿಯಮ್ಸನ್ ಈ ಹೇಳಿಕೆ ಹೊರಬಿದ್ದಿದೆ. 

ಸೆಮಿಪೈನಲ್ ಹಂತಕ್ಕೆ ದಾಪುಗಾಲು ಹಾಕಿರುವ ನ್ಯೂಜಿಲೆಂಡ್, ಇಂದು ಇಂಗ್ಲೆಂಡ್ ವಿರುದ್ಧ ಮಹತ್ವದ ಪಂದ್ಯ ಆಡಲಿದೆ. ಇದಕ್ಕೂ ಮುನ್ನ ಪ್ರತಿಕ್ರಿಯೆ ನೀಡಿರುವ ಕೇನ್ ವಿಲಿಯಮ್ಸನ್, ವರ್ಲ್ಡ್ ಕಪ್ ಪ್ರಾರಂಭಕ್ಕೂ ಮುನ್ನ ಸರಿಯಾದ ವೇಳೆಯಲ್ಲಿ ಐಪಿಎಲ್ ನ್ನು ಆಯೋಜನೆ ಮಾಡಲಾಗಿತ್ತು. 

ಐಪಿಎಲ್ ಆಗಲಿ.. ಇಲ್ಲವೇ ಬೇರೆ ಯಾವುದೇ ಪ್ರಾಂಚೈಸಿಯಲ್ಲಿ ಆಡುವುದರಿಂದ ತುಂಬಾನೇ ಲಾಭ ದೊರೆಯುತ್ತದೆ. ಇದರಿಂದ ಮುಂಬರುವ ಪಂದ್ಯಾವಳಿಗಳಲ್ಲಿ ಮಾನಸಿಕ ಸಾಮರ್ಥ್ಯ ಹೆಚ್ಚಿಸಿ ಉತ್ತಮ ಫಲಿತಾಂಶ ಪಡೆದುಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಅಂತಾ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

ಈ ಬಾರಿಯ ಐಪಿಎಲ್ ಬದಲಾವಣೆಗಳಿಂದ ಕೂಡಿತ್ತು. ಯುಎಇಯ ವಿಭಿನ್ನ ಪಿಚ್ ಗಳಲ್ಲಿ ಆಡಿದ್ದರಿಂದ ನಮಗೆ ತುಂಬಾನೇ ಪ್ರಯೋಜನಕಾರಿಯಾಯಿತು. ಟೂರ್ನಿಯಲ್ಲಿ ಯಾವುದೇ ತಂಡ ಯಾರನ್ನು ಬೇಕಾದ್ರು ಸೋಲಿಸಬಹುದು ಎಂಬುದು ನಮಗೆ ತಿಳಿದಿತ್ತು ಅಂತಾ ಐಪಿಎಲ್ ಪ್ರಯೋಜನ ಕುರಿತು ಕೇನ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಪಡೆ ಟಿ-20 ವಿಶ್ವಕಪ್ ನಿಂದ ಹೊರಬಿದ್ದಾಗಿನಿಂದ ಐಪಿಎಲ್ ಟೂರ್ನಿ ಆಯೋಜನೆ ಬಗ್ಗೆ ಭಾರತದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗುತ್ತಿವೆ. ಭಾರತ ತಂಡದ ಆಟಗಾರರು ಹಣಕ್ಕಾಗಿ ಐಪಿಎಲ್ ಗೆ ಹಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ ಅಂತಾ ವಾದಗಳು ಸಹ ನಡೆದಿವೆ. ಕ್ರಿಕೆಟ್ ನ ದಂತಕಥೆ ಕಪಿಲ್ ದೇವ್, ಭಾರತ ತಂಡದ ಮಾಜಿ ಕೋಚ್ ಆಗಿರುವ ರವಿಶಾಸ್ತ್ರಿ, ಐಪಿಎಲ್ ಹಾಗೂ ಟಿ-20 ವಿಶ್ವಕಪ್ ಟೂರ್ನಿಯ ಮಧ್ಯೆ ಆಟಗಾರರಿಗೆ ಹೆಚ್ಚಿನ ಬಿಡುವು ದೊರೆಯಬೇಕಾಗಿತ್ತು ಅಂತಾ ಪ್ರತಿಕ್ರಿಯೆ ಕೊಟ್ಟಿದ್ದರು. ಇನ್ನು ಸೋಷಿಯಲ್ ಮೀಡಿಯಾದಲ್ಲಿ #BanIPL ಟ್ರೆಂಡ್ ಶುರು ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com