ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ: ರೋಹಿತ್ ಶರ್ಮಾ ಔಟ್, ಮೊದಲ ಪಂದ್ಯ ಕೊಹ್ಲಿಗೆ ವಿಶ್ರಾಂತಿ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಇಡೀ ಟೆಸ್ಚ್ ಸರಣಿಯಿಂದ ತಂಡದ ಸ್ಫೋಟಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಅವರನ್ನು ಕೈ ಬಿಡಲಾಗಿದೆ. ಅಂಂತೆಯೇ ಮೊದಲ ಪಂದ್ಯದಿಂದ ನಾಯಕ ಕೊಹ್ಲಿ ವಿಶ್ರಾಂತಿ ಪಡೆದು, 2ನೇ ಪಂದ್ಯಕ್ಕೆ ತಂಡ ಸೇರಿಕೊಳ್ಳಲ್ಲಿದ್ದಾರೆ ಎನ್ನಲಾಗಿದೆ.
Published: 12th November 2021 01:19 PM | Last Updated: 12th November 2021 02:34 PM | A+A A-

ಟೀಂ ಇಂಡಿಯಾ
ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಇಡೀ ಟೆಸ್ಚ್ ಸರಣಿಯಿಂದ ತಂಡದ ಸ್ಫೋಟಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಅವರನ್ನು ಕೈ ಬಿಡಲಾಗಿದೆ. ಅಂತೆಯೇ ಮೊದಲ ಪಂದ್ಯದಿಂದ ನಾಯಕ ಕೊಹ್ಲಿ ವಿಶ್ರಾಂತಿ ಪಡೆದು, 2ನೇ ಪಂದ್ಯಕ್ಕೆ ತಂಡ ಸೇರಿಕೊಳ್ಳಲ್ಲಿದ್ದಾರೆ ಎನ್ನಲಾಗಿದೆ.
#TeamIndia squad for NZ Tests:
— BCCI (@BCCI) November 12, 2021
A Rahane (C), C Pujara (VC), KL Rahul, M Agarwal, S Gill, S Iyer, W Saha (WK), KS Bharat (WK), R Jadeja, R Ashwin, A Patel, J Yadav, I Sharma, U Yadav, Md Siraj, P Krishna
*Virat Kohli will join the squad for the 2nd Test and will lead the team. pic.twitter.com/FqU7xdHpjQ
ಈ ಕುರಿತು ಬಿಸಿಸಿಐ ಮಾಹಿತಿ ನೀಡಿದ್ದು, ನ್ಯೂಜಿಲೆಂಡ್ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಅವರ ಹೆಸರನ್ನು ಕೈಬಿಡಲಾಗಿದೆ. ಅಂತೆಯೇ ಮೊದಲ ಟೆಸ್ಟ್ ಪಂದ್ಯದಿಂದ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದು, ಅವರು 2ನೇ ಪಂದ್ಯದ ಹೊತ್ತಿಗೆ ತಂಡ ಸೇರಿಕೊಳ್ಳಲ್ಲಿದ್ದಾರೆ. ಹೀಗಾಗಿ ಮೊದಲ ಪಂದ್ಯದಲ್ಲಿ ಅಂಜಿಕ್ಯಾ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಟಿ20 ಸೆಮಿಫೈನಲ್: ಪಾಕ್ ವಿರುದ್ಧ 5 ವಿಕೆಟ್ ಜಯಗಳಿಸಿದ ಆಸಿಸ್ ಫೈನಲ್ಸ್ ಗೆ
ಇನ್ನು ಟೆಸ್ಟ್ ತಂಡಕ್ಕೆ ಮಯಾಂಕ್ ಅಗರ್ವಾಲ್, ವೃದ್ಧಿಮಾನ್ ಸಾಹಾ ವಾಪಸಾಗಿದ್ದು, ಇದಲ್ಲದೆ ಕೆಎಸ್ ಭರತ್, ಅಕ್ಸರ್ ಪಟೇಲ್, ಮಹಮದ್ ಸಿರಾಜ್ ಕೂಡ ತಂಡ ಸೇರಿಕೊಂಡಿದ್ದಾರೆ.
ಉಳಿದಂತೆ ಬಿಸಿಸಿಐ ಪ್ರಕಟಿಸಿರುವ ತಂಡ ಇಂತಿದೆ
ಅಜಿಂಕ್ಯ ರಹಾನೆ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ (ಉಪನಾಯಕ), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್-ಕೀಪರ್), ಕೆಎಸ್ ಭರತ್ (ವಿಕೆಟ್-ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಅಕ್ಸರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮಹಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ
ಇದನ್ನೂ ಓದಿ: ಟಿ20 ವಿಶ್ವಕಪ್: ಪಾಕ್ ಮಣಿಸಿ, ರನ್ ಚೇಸಿಂಗ್ ನಲ್ಲೂ ದಾಖಲೆ ಬರೆದ ಆಸಿಸ್
ಇದೇ ನವೆಂಬರ್ 25ರಿಂದ ಕಾನ್ಪುರದಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಡಿಸೆಂಬರ್ 3ರಂದು ಮುಂಬೈನಲ್ಲಿ 2ನೇ ಟೆಸ್ಟ್ ಪಂದ್ಯ ನಡೆಯಲಿದೆ.