ಟಿ-20 ವಿಶ್ವಕಪ್: ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು? ಸೋತರೂ ಭಾರತಕ್ಕೆ ದಕ್ಕಿದ್ದು ಎಷ್ಟು?

ದುಬೈನಲ್ಲಿ ಈ ಬಾರಿ ಟಿ-20 ವಿಶ್ವಕಪ್ ಟೂರ್ನಿಗೆ ಅದ್ಧೂರಿ ತೆರೆಬಿದ್ದಿದೆ. ಅಕ್ಟೋಬರ್ 17ರಿಂದ ಒಮಾನ್ ನಲ್ಲಿ ಆರಂಭಗೊಂಡ ಟೂರ್ನಿ ನವೆಂಬರ್ 14ರಂದು ಸಮಾಪ್ತಿಗೊಂಡಿತು.
ಟಿ20 ಫೈನಲ್ಸ್ ನಲ್ಲಿ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ತಂಡ
ಟಿ20 ಫೈನಲ್ಸ್ ನಲ್ಲಿ ಆಸ್ಟ್ರೇಲಿಯಾ-ನ್ಯೂಜಿಲ್ಯಾಂಡ್ ತಂಡ

ದುಬೈ: ದುಬೈನಲ್ಲಿ ಈ ಬಾರಿ ಟಿ-20 ವಿಶ್ವಕಪ್ ಟೂರ್ನಿಗೆ ಅದ್ಧೂರಿ ತೆರೆಬಿದ್ದಿದೆ. ಅಕ್ಟೋಬರ್ 17ರಿಂದ ಒಮಾನ್ ನಲ್ಲಿ ಆರಂಭಗೊಂಡ ಟೂರ್ನಿ ನವೆಂಬರ್ 14ರಂದು ಸಮಾಪ್ತಿಗೊಂಡಿತು.

ಅಚ್ಚರಿಯ ಫಲಿತಾಂಶದೊಂದಿಗೆ ಚೊಚ್ಚಲ ವಿಶ್ವಕಪ್ ಗೆಲ್ಲುವ ಮೂಲಕ ಆರನ್ ಫಿಂಚ್ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆ ಗಳಿಸಿದ್ದಾರೆ. ಈ ಬಾರಿ ಚಾಂಪಿಯನ್ ಪಟ್ಟ ದಕ್ಕಿಸಿಕೊಳ್ಳುವ ಮೂಲಕ ಕಾಂಗ್ರೂ ಪಡೆ ಭರ್ಜರಿ ಪ್ರಶಸ್ತಿ ಬಾಚಿಕೊಂಡಿದೆ. ಹಾಗಾದ್ರೆ ಫೈನಲ್ ನಲ್ಲಿ ಪಾಲ್ಗೊಂಡ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಟೀಮ್ ಗಳು ಬಹುಮಾನ ರೂಪದಲ್ಲಿ ಎಷ್ಟೆಷ್ಟು ಹಣ ಪಡೆದುಕೊಂಡಿವೆ ಅನ್ನೋದು ಈ ಕೆಳಗಿನಂತಿದೆ.

ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕ ಮೊತ್ತ ಎಷ್ಟು?

2021ರ ಟಿ-20 ವಿಶ್ವಕಪ್ ಟೂರ್ನಿಯನ್ನು ಗೆದ್ದಿರುವ ಆಸ್ಟ್ರೇಲಿಯಾ ತಂಡಕ್ಕೆ 11.9 ಕೋಟಿ ರೂಪಾಯಿ ಪಡೆದುಕೊಂಡಿದೆ. ಇದರ ಹೊರತಾಗಿ ಪಂದ್ಯಾವಳಿಯ ಸೂಪರ್ 12ರ ಹಂತದಲ್ಲಿ 4 ಗೆಲುವು ಸಾಧಿಸಿದ್ದಕ್ಕಾಗಿ ಕಾಂಗ್ರೂ ಪಡೆಗೆ 1.2 ಕೋಟಿ ರೂಪಾಯಿ (ಪ್ರತಿ ಸೂಪರ್ 12ರ ಘಟ್ಟದ ಪಂದ್ಯದ ಗೆಲುವಿಗಾಗಿ 30 ಲಕ್ಷ ರೂಪಾಯಿ) ಹೆಚ್ಚುವರಿ ಮೊತ್ತ ಪಡೆದಿದ್ದಾರೆ. ಈ ಎಲ್ಲ ಮೊತ್ತ ಪೇರಿಸಿದಾಗ ಆಸೀಸ್ ತಂಡಕ್ಕೆ ಬರೋಬ್ಬರಿ 13.1 ಕೋಟಿ ರೂಪಾಯಿ ದಕ್ಕಿದೆ.

ನ್ಯೂಜಿಲೆಂಡ್ ತಂಡ ಗೆದ್ದ ಮೊತ್ತ ಎಷ್ಟು?

ಮತ್ತೊಂದೆಡೆ ಸೆಮಿಫೈನಲ್ ಹಂತದಲ್ಲಿ ಅಚ್ಚರಿ ರಿಸಲ್ಟ್ ಕೊಟ್ಟು ಪೈನಲ್ ಗೆ ಏರಿದ್ದ ನ್ಯೂಜಿಲೆಂಡ್ ತಂಡ ಸೋಲು ಕಂಡು ರನ್ನರ್-ಅಪ್ ತಂಡವಾಗಿದೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡ ಬಹುಮಾನ ರೂಪದಲ್ಲಿ 5.95 ಕೋಟಿ ರೂಪಾಯಿ ಗಳಿಸಿದೆ. ಅಲ್ಲದೆ ಸೂಪರ್-12ರ ಘಟ್ಟದಲ್ಲಿ 4 ಪಂದ್ಯಗಳನ್ನು ಗೆದ್ದಿದ್ದಕ್ಕಾಗಿ 1.2 ಕೋಟಿ ರೂಪಾಯಿ ನ್ಯೂಜಿಲೆಂಡ್ ಪಾಲಾಗಿದೆ. ಈ ಎಲ್ಲ ಮೊತ್ತಗಳನ್ನು ಒಟ್ಟುಗೂಡಿಸಿದಾಗ ಕೇನ್ ವಿಲಿಯಮ್ಸನ್ ನೇತೃತ್ವದ ತಂಡ ಈ ಬಾರಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬರೋಬ್ಬರಿ 7.15 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.

ಇನ್ನೂ ಸೆಮಿಫೈನಲ್ ಹಂತದಲ್ಲಿ ಸೋತಿರುವ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳಿಗೆ ತಲಾ 3 ಕೋಟಿ ರೂಪಾಯಿ ಹಾಗೂ ಸೂಪರ್-12ರ ಘಟ್ಟದಲ್ಲಿ ಹೊರಬಿದ್ದಿರುವ ಭಾರತ ತಂಡಕ್ಕೆ 30 ಲಕ್ಷ ರೂಪಾಯಿ ದಕ್ಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com