ಕಾನ್ಪುರದಲ್ಲಿ ಟೀಂ ಇಂಡಿಯಾ ಅಭ್ಯಾಸ: ಬಯೋಬಬಲ್ ನಿಯಮ ಮುರಿದು ಪಿಚ್ ಪರಿಶೀಲಿಸಿದ ದ್ರಾವಿಡ್, ನಾಯಕ ರಹಾನೆ!

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ಹುಮ್ಮಸ್ಸಿನಲ್ಲಿದೆ. ಈ ಮಧ್ಯೆ ನವೆಂಬರ್ 25ರಂದು ಕಿವೀಸ್ ತಂಡದ ವಿರುದ್ಧ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ. 
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್

ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ಹುಮ್ಮಸ್ಸಿನಲ್ಲಿದೆ. ಈ ಮಧ್ಯೆ ನವೆಂಬರ್ 25ರಂದು ಕಿವೀಸ್ ತಂಡದ ವಿರುದ್ಧ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ. 

ಈ ಹಿನ್ನೆಲೆಯಲ್ಲಿ ಕಾನ್ಪುರದ ಗ್ರೀನ್ ಪಾರ್ಕ್ ಗೆ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ಅಜಿಂಕ್ಯ ರಹಾನೆ ಭೇಟಿ ನೀಡಿ, ಮೈದಾನ ಹಾಗೂ ಪಿಚ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.

ಈ ವೇಳೆ, ಕ್ಯುರೇಟರ್ ಎಲ್. ಪ್ರಶಾಂತ್ ರಾವ್ ಅವರನ್ನು ಭೇಟಿ ಮಾಡಿ ಗ್ರೌಂಡ್ ಬಗ್ಗೆ ಮಾಹಿತಿ ಪಡೆದುಕೊಂಡರು. ಅಲ್ಲದೆ, ಸುಮಾರು 15 ನಿಮಿಷಗಳ ಕಾಲ ಹೊಸ ಡ್ರೆಸ್ಸಿಂಗ್ ಕೊಠಡಿಯಲ್ಲಿ ಇದ್ದ ಮಿಸ್ಟರ್ ಪರ್ಫೆಕ್ಷನಿಸ್ಟ್, ಅಭ್ಯಾಸದ ಪಿಚ್ ಗಳನ್ನು ಸಹ ಪರಿಶೀಲನೆ ನಡೆಸಿದ್ದರು. ಅಭ್ಯಾಸದ ಪಿಚ್ ಗಳ ಗುಣಮಟ್ಟ ಸ್ವಲ್ಪ ಅತೃಪ್ತಿ ಹೊಂದಿದ ರಾಹುಲ್ ದ್ರಾವಿಡ್, ಅವುಗಳನ್ನು ಸುಧಾರಿಸಲು ಮನವಿ ಮಾಡಿದ್ದರು. ಇಂದು ಮಧ್ಯಾಹ್ನ 2 ಗಂಟೆಯಿಂದ ಭಾರತ ತಂಡದ ಆಟಗಾರರು ಕಾನ್ಪುರದಲ್ಲಿ ಅಭ್ಯಾಸ ನಡೆಸಲಿದ್ದಾರೆ.

ಇನ್ನು ಬಿಸಿಸಿಐಯ ಕಟ್ಟುನಿಟ್ಟಿನ ಆದೇಶದನ್ವಯ ಯಾವುದೇ ಆಟಗಾರ ಬಯೋ ಸರ್ಕಲ್ ನಿಯಮವನ್ನು ದಾಟದಂತೆ ಆದೇಶಿಸಿದೆ. ಆದರೆ, ನಾಯಕ ಅಜಿಂಕ್ಯ ರಹಾನೆ, ತರಬೇತುದಾರ ರಾಹುಲ್ ದ್ರಾವಿಡ್ ಆ ಸೂಚನೆಗಳನ್ನು ಪರಿಗಣಿಸದೇ ಗ್ರೌಂಡ್ ಪರಿಶೀಲನೆ ಮಾಡಿದ್ದಾರೆ. ಈ ಹಿಂದೆ ಐಪಿಎಲ್ ಸಮಯದ ಕೋಲ್ಕತ್ತಾ ನೈಟ್ ರೈಡರ್ಸ್ ನ ಕೆಲವು ಆಟಗಾರರು ಬಯೋ ಬಬಲ್ ಸರ್ಕಲ್ ನಿಯಮವನ್ನು ಮುರಿದಿದ್ದರು. ಇದಾದ ಬಳಿಕ ಕೆಕೆಆರ್ ತಂಡದ ಐವರು ಆಟಗಾರರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಈ ಸಂದರ್ಭದಲ್ಲಿ ಬಿಸಿಸಿಐ ಆ ಐವರು ಆಟಗಾರರಿಗೆ ದಂಡವನ್ನೂ ಸಹ ವಿಧಿಸಿತ್ತು.

ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಕ್ಯಾಪ್ಟನ್ ಅಜಿಂಕ್ಯ ರಹಾನೆ ಈಗಾಗಲೇ ಕಾನ್ಪುರದಲ್ಲಿ ಐಸೋಲೇಟ್ ಆಗಿದ್ದರು. ಆದ್ರೆ, ಕೋಚ್ ರಾಹುಲ್ ದ್ರಾವಿಡ್ ಕಾನ್ಪುರಗೆ ನಿನ್ನೆ ಆಗಮಿಸಿದ ನಂತ್ರ ಅವರೊಂದಿಗೆ ಹೊಟೇಲ್ ನಿಂದ ನೇರವಾಗಿ ಗ್ರೀನ್ ಪಾರ್ಕ್ ಮೈದಾನಕ್ಕೆ ಆಗಮಿಸಿದ್ದರು. ಅಲ್ಲದೆ, ಮುಖ್ಯ ತರಬೇತುದಾರರೊಂದಿಗೆ ಪಿಚ್ ಪರಿಶೀಲನೆಯಲ್ಲಿ ಭಾಗಿಯಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com