ಮೊದಲ ಟೆಸ್ಟ್, ಮೊದಲ ಇನ್ನಿಂಗ್ಸ್, 3ನೇ ದಿನ: 296 ರನ್ ಗೆ ನ್ಯೂಜಿಲೆಂಡ್ ಆಲೌಟ್, ಭಾರತಕ್ಕೆ 49 ರನ್ ಮುನ್ನಡೆ

ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ 296ರನ್ ಗಳಿಗೆ ಆಲೌಟ್ ಆಗಿದ್ದು, ಆ ಮೂಲಕ ಟೀಂ ಇಂಡಿಯಾ 49ರನ್ ಗಳ ಮುನ್ನಡೆ ಸಾಧಿಸಿದೆ.
ಅಕ್ಷರ್ ಪಟೇಲ್
ಅಕ್ಷರ್ ಪಟೇಲ್

ಕಾನ್ಪುರ: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡ 296ರನ್ ಗಳಿಗೆ ಆಲೌಟ್ ಆಗಿದ್ದು, ಆ ಮೂಲಕ ಟೀಂ ಇಂಡಿಯಾ 49ರನ್ ಗಳ ಮುನ್ನಡೆ ಸಾಧಿಸಿದೆ.

ಭಾರತ ತಂಡ ನೀಡಿದ 345ರನ್ ಗಳ ಮೊದಲ ಇನ್ನಿಂಗ್ಸ್ ಗೆ ಉತ್ತರವಾಗಿ ಬ್ಯಾಟಿಂಗ್ ಇಳಿದ ಕಿವೀಸ್ ಪಡೆಗೆ ಟಾಮ್ ಲಾಥಮ್ ಮತ್ತು ವಿಲ್ ಯಂಗ್ ಜೋಡಿ ಭರ್ಜರಿ ಆರಂಭ ನೀಡಿತು. ಈ ಜೋಡಿ ಬರೊಬ್ಬರಿ 151ರನ್ ಗಳ ಜೊತೆಯಾಟವಾಡಿ ಭಾರತದ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿತ್ತು. ಈ ವೇಳೆ ದಾಳಿಗಿಳಿದ ಅಶ್ವಿನ್ 89ರನ್ ಗಳಿಸಿದ್ದ ವಿಲ್ ಯಂಗ್ ರನ್ನು ಔಟ್ ಮಾಡಿದರು. ಬಳಿಕ ನಾಯಕ ವಿಲಿಯಮ್ಸನ್ ಔಟಾದರೆ, ಶತಕದಂಚಿನಲ್ಲಿ ಲಾಥಮ್ (95ರನ್) ಔಟ್ ಆದರು.

ಈ ವೇಳೆ ಭಾರತದ ಅಕ್ಸರ್ ಪಟೇಲ್ ಪಾರಮ್ಯ ಮೆರೆದು ಕಿವೀಸ್ ದಾಂಡಿಗರು ಪೆವಿಲಿಯನ್ ಪರೇಡ್ ಮಾಡುವಂತೆ ಮಾಡಿದರು. ಲಾಥಮ್ ವಿಕೆಟ್ ಪತನವಾಗುತ್ತಲೇ ಕಿವೀಸ್ ಪಡೆಯ ಪೆವಿಲಿಯನ್ ಪರೇಡ್ ಆರಂಭವಾಯಿತು. ಟೇಲರ್ 11, ಹೆನ್ರಿ ನಿಕೋಲಸ್ 2, ರಚಿನ್ ರವಿಂದ್ರ 13, ಟಾಮ್ ಬ್ಲಂಡೆಲ್ 13, ಜೇಮೀಸನ್ 23 ರನ್ ಗಳಿಸಿ ಕಿವೀಸ್ ಮೊತ್ತವನ್ನು ಹಿಗ್ಗಿಸಿದರು.  ಅಂತಿಮವಾಗಿ ಸೋಮ್ ವಿಲ್ಲ (6ರನ್) ಅಶ್ವಿನ್ ಬೌಲಿಂಗ್ ನಲ್ಲಿ ಔಟ್ ಆಗುವುದರೊಂದಿಗೆ ಕಿವೀಸ್ ಇನ್ನಿಂಗ್ಸ್ ಗೆ ತೆರೆ ಬಿತ್ತು. 

ಭಾರತದ ಪರ ಆಕ್ಸರ್ ಪಟೇಲ್ 6 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದರೆ, ಅಶ್ವಿನ್ 3, ರವೀಂದ್ರ ಜಡೇಜಾ ಮತ್ತು ಉಮೇಶ್ ಯಾದವ್ ತಲಾ 1 ವಿಕೆಟ್ ಪಡೆದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com