ಮೊದಲ ಟೆಸ್ಟ್: ಭಾರತಕ್ಕೆ ಆಘಾತ, ಕುತ್ತಿಗೆ ನೋವಿನಿಂದ ಕಣಕ್ಕಿಳಿಯದ ವೃದ್ದಿಮಾನ್ ಸಾಹಾ, ಕೆಎಸ್ ಭರತ್ ವಿಕೆಟ್ ಕೀಪಿಂಗ್
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನ ಭಾರತಕ್ಕೆ ಆಘಾತ ಎದುರಾಗಿದ್ದು, ಕುತ್ತಿಗೆ ನೋವಿನಿಂದಾಗಿ ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾ ಕಣಕ್ಕಿಳಿದಿಲ್ಲ. ಅವರ ಬದಲಿಗೆ ಕೆಎಸ್ ಭರತ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.
Published: 27th November 2021 11:49 AM | Last Updated: 27th November 2021 11:49 AM | A+A A-

ವೃದ್ದಿಮಾನ್ ಸಾಹಾ ಬದಲಿಗೆ ಭರತ್ ವಿಕೆಟ್ ಕೀಪಿಂಗ್
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂರನೇ ದಿನ ಭಾರತಕ್ಕೆ ಆಘಾತ ಎದುರಾಗಿದ್ದು, ಕುತ್ತಿಗೆ ನೋವಿನಿಂದಾಗಿ ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾ ಕಣಕ್ಕಿಳಿದಿಲ್ಲ. ಅವರ ಬದಲಿಗೆ ಕೆಎಸ್ ಭರತ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ.
UPDATE - Wriddhiman Saha has stiffness in his neck. The BCCI medical team is treating him and monitoring his progress. KS Bharat will be keeping wickets in his absence.#INDvNZ @Paytm
— BCCI (@BCCI) November 27, 2021
ಇಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ವಿಕೆಟ್ ಕೀಪರ್ ಆಗಿ ವೃದ್ದಿಮಾನ್ ಸಾಹಾ ಬದಲು ಕೆ.ಎಸ್.ಭರತ್ ಕಣಕ್ಕಿಳಿದರು. ಹೌದು ವೃದ್ದಿಮಾನ್ ಸಾಹಾ ಅವರಿಗೆ ಕುತ್ತಿಗೆಯಲ್ಲಿ ನೋವು ಕಂಡುಬಂದ ಕಾರಣ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಬದಲಿಗೆ ಕೆ.ಎಸ್.ಭರತ್ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತಿದ್ದಾರೆ.
ಇದನ್ನೂ ಓದಿ: ಭಾರತ vs ನ್ಯೂಜಿಲೆಂಡ್ ಮೊದಲ ಟೆಸ್ಟ್: ಕಿವೀಸ್ ಬ್ಯಾಟ್ಸ್ ಮನ್ ಗೆ 3 ಬಾರಿ ಜೀವದಾನ, ದಾಖಲೆ ನಿರ್ಮಾಣ
“ವೃದ್ಧಿಮಾನ್ ಸಹಾ ಅವರ ಕುತ್ತಿಗೆಯಲ್ಲಿ ಬಿಗಿತವಿದೆ. ಬಿಸಿಸಿಐ ವೈದ್ಯಕೀಯ ತಂಡವು ಅವರಿಗೆ ಚಿಕಿತ್ಸೆ ನೀಡುತ್ತಿದೆ ಮತ್ತು ಅವರ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಅವರ ಅನುಪಸ್ಥಿತಿಯಲ್ಲಿ ಕೆಎಸ್ ಭರತ್ ವಿಕೆಟ್ ಕೀಪಿಂಗ್ ಮಾಡುತ್ತಾರೆ” ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಇದನ್ನೂ ಓದಿ: ಕಾನ್ಪುರ ಟೆಸ್ಟ್: ಭಾರತದಲ್ಲಿ ದಾಖಲೆ ಬರೆದ ನ್ಯೂಜಿಲೆಂಡ್ ನ ಲಾಥಮ್-ಯಂಗ್ ಶತಕದ ಜೊತೆಯಾಟ
2010 ರಲ್ಲಿ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ ವೃದ್ದಿಮಾನ್ ಸಾಹ ಈವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಇವರ ಜಾಗಕ್ಕೆ ರಿಷಭ್ ಪಂತ್ ಆಯ್ಕೆಯಾದರು. ಪಂತ್ ಅನೇಕ ಬಾರಿ ಭಾರತಕ್ಕೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ, ಸದ್ಯ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಪಂತ್ ಅವರಿಗೆ ವಿಶ್ರಾಂತಿ ನೀಡಿರುವ ಕಾರಣ ಸಾಹ ಸ್ಥಾನ ಪಡೆದುಕೊಂಡಿದ್ದಾರೆ.