ಮೊದಲ ಟೆಸ್ಟ್, 3ನೇ ದಿನದಾಟ ಅಂತ್ಯ: ಭಾರತ ಎರಡನೇ ಇನ್ನಿಂಗ್ಸ್ 14/1, ಕಿವೀಸ್ ವಿರುದ್ಧ 63 ರನ್ ಮುನ್ನಡೆ
ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟ ಅಂತ್ಯವಾಗಿದ್ದು, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ 2ನೇ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 14ರನ್ ಗಳಿಸಿದೆ.
Published: 27th November 2021 05:18 PM | Last Updated: 27th November 2021 05:36 PM | A+A A-

ಶುಭ್ ಮನ್ ಗಿಲ್ ಔಟ್
ಕಾನ್ಪುರ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟ ಅಂತ್ಯವಾಗಿದ್ದು, ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ 2ನೇ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿದೆ.
ಇದನ್ನೂ ಓದಿ: ಮೊದಲ ಟೆಸ್ಟ್: 296ರನ್ ಗಳಿಗೆ ನ್ಯೂಜಿಲೆಂಡ್ ಆಲೌಟ್, ಭಾರತಕ್ಕೆ 49ರನ್ ಗಳ ಮುನ್ನಡೆ
ನ್ಯೂಜಿಲೆಂಡ್ ತಂಡವನ್ನು 296ರನ್ ಗಳಿಗೆ ಆಲೌಟ್ ಮಾಡಿದ ಭಾರತ 49ರನ್ ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿತು. ಆದರೆ ಭಾರತಕ್ಕೆ ಕಿವೀಸ್ ಬೌಲರ್ ಗಳು ಆರಂಭಿಕ ಆಘಾತ ನೀಡಿದ್ದು, 1 ರನ್ ಗಳಿಸಿದ್ದ ಶುಭ್ ಮನ್ ಗಿಲ್ ರನ್ನು ಔಟ್ ಮಾಡಿದ್ದಾರೆ.
India will start Day 4 with a lead of 63 runs in Kanpur. Work to do with the ball ahead. Scorecard | https://t.co/yGSlW6a2d5 #INDvNZ pic.twitter.com/XMZsWRXof0
— BLACKCAPS (@BLACKCAPS) November 27, 2021
ಬಳಿಕ ಚೇತೇಶ್ವರ ಪೂಜಾರ ಕ್ರೀಸ್ ಗೆ ಆಗಮಿಸಿದ್ದು, 4 ರನ್ ಗಳಿಸಿರುವ ಮಯಾಂಕ್ ಅಗರ್ವಾಲ್ ಮತ್ತು 9ರನ್ ಗಳಿಸಿರುವ ಪೂಜಾರಾ 4ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಕಿವೀಸ್ ಪರ ಜೇಮೀಸನ್ 1 ವಿಕೆಟ್ ಪಡೆದಿದ್ದಾರೆ.