ಓಮಿಕ್ರಾನ್ ಎಫೆಕ್ಟ್ ; ಮಹಿಳಾ ವಿಶ್ವಕಪ್ ನ ಅರ್ಹತಾ ಪಂದ್ಯಗಳು ರದ್ದು!

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ಹೊಸ ರೂಪಾಂತರಿಯಿಂದಾಗಿ ಜಿಂಬಾಬ್ವೆಯಲ್ಲಿ ನಡೆಯಬೇಕಿದ್ದ ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಅರ್ಹತಾ ಪಂದ್ಯಗಳನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರದ್ದುಪಡಿಸಿದೆ.
ಐಸಿಸಿ ಸಾಂದರ್ಭಿಕ ಚಿತ್ರ
ಐಸಿಸಿ ಸಾಂದರ್ಭಿಕ ಚಿತ್ರ

ಹರಾರೆ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೋನಾ ಹೊಸ ರೂಪಾಂತರಿಯಿಂದಾಗಿ ಜಿಂಬಾಬ್ವೆಯಲ್ಲಿ ನಡೆಯಬೇಕಿದ್ದ ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಅರ್ಹತಾ ಪಂದ್ಯಗಳನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರದ್ದುಪಡಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಐಸಿಸಿ, ದಕ್ಷಿಣ ಆಫ್ರಿಕಾದಲ್ಲಿನ ಹೊಸ ರೂಪಾಂತರಿ ಓಮಿಕ್ರಾನ್ ತ್ವರಿತವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಅರ್ಹತಾ ಪಂದ್ಯಗಳನ್ನು ರದ್ದುಪಡಿಸುವ ನಿರ್ಧಾರಕ್ಕೆ ಬರಲಾಗಿದೆ ಅಂತಾ ತಿಳಿಸಿದೆ.

ಯುರೋಪಿಯನ್ ದೇಶಗಳು ಸೇರಿದಂತೆ ಪ್ರಪಂಚದ ಹೆಚ್ಚಿನ ಭಾಗವು ಇತ್ತೀಚೆಗೆ ಕೊರೋನಾ ಸೋಂಕಿತರ ಪ್ರಮಾಣದಲ್ಲಿ ಹೆಚ್ಚಳ ಕಂಡುಬಂದಿದೆ. ಮಾರಣಾಂತಿಕ ಕೊರೋನಾ ಹೊಸ ರೂಪಾಂತರ 'ಓಮಿಕ್ರಾನ್' ಅನೇಕ ದೇಶಗಳಲ್ಲಿ ತಬ್ಬಿಬ್ಬುಗೊಳಿಸುತ್ತಿದ್ದು, ವಿಶೇಷವಾಗಿ ದಕ್ಷಿಣ ಆಫ್ರಿಕಾದಲ್ಲಿ, ಈ ರೂಪಾಂತರಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಭಾರತ ಸೇರಿದಂತೆ ವಿಶ್ವದ ಹಲವು ಭಾಗಗಳು ಪ್ರಸ್ತುತ ಕೋವಿಡ್ ನ ಡೆಲ್ಟಾ ರೂಪಾಂತರದ ವಿರುದ್ಧ ಹೋರಾಡುತ್ತಿವೆ.

ಏತನ್ಮಧ್ಯೆ, ಓಮಿಕ್ರಾನ್ ಎಂಬ ಹೊಸ ರೂಪವು ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾದ ಹೊಸ ರೂಪವನ್ನು ಓಮಿಕ್ರಾನ್ ಎಂದು ಹೆಸರಿಸಿದೆ. ಹೊಸ ರೂಪಾಂತರದ ಬಗ್ಗೆ ಇನ್ನೂ ಹಚ್ಚಿನ ಪ್ರಮಾಣದಲ್ಲಿ ಸಂಶೋಧನೆಗಳಾಗಿಲ್ಲ. ಅಲ್ಲದೆ ಇದರ ಲಕ್ಷಣ ಹಾಗೂ ಪರಿಣಾಮದ ಬಗ್ಗೆ ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com