ಐಪಿಎಲ್ 2021: ಮತ್ತೆ ನುಚ್ಚುನೂರಾದ ಟ್ರೋಫಿ ಆಸೆ; ಎಲಿಮಿನೇಟರ್ ಪಂದ್ಯದಲ್ಲಿ ಮುಗ್ಗರಿಸಿದ ಆರ್ ಸಿಬಿ!

ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಟ್ರೋಫಿ ಗೆಲ್ಲುವ ಆಸೆ ನುಚ್ಚುನೂರಾಗಿದೆ. 
ಕೊಹ್ಲಿ
ಕೊಹ್ಲಿ

ಶಾರ್ಜಾ: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) 14ನೇ ಆವೃತ್ತಿಯಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡದ ಟ್ರೋಫಿ ಗೆಲ್ಲುವ ಆಸೆ ನುಚ್ಚುನೂರಾಗಿದೆ. 

ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ತಂಡದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಗಳಿಂದ ಸೋಲು ಅನುಭವಿಸಿದೆ. ಈ ಮೂಲಕ ಟ್ರೋಫಿ ಗೆಲ್ಲುವ ಆಸೆಗೆ ತಿಲಾಂಜಲಿ ಬಿಟ್ಟಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಆರ್ ಸಿಬಿ ನಿಗದಿತ ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 138 ರನ್ ಪೇರಿಸಲಷ್ಟೇ ಸಾಧ್ಯವಾಯಿತು. 139 ರನ್ ಗಳ ಗುರಿ ಬೆನ್ನಟ್ಟಿದ ಕೋಲ್ಕತ್ತಾ ಪಡೆ 6 ವಿಕೆಟ್ ನಷ್ಟಕ್ಕೆ 139 ರನ್ ಸಿಡಿಸುವ ಮೂಲಕ ಗೆಲುವಿನ ನಗೆ ಬೀರಿತು. 

ಬೌಲಿಂಗ್ (4 ವಿಕೆಟ್) ಮತ್ತು ಬ್ಯಾಟಿಂಗ್ (26) ನಲ್ಲಿ ಮಿಂಚಿದ ಸುನಿಲ್ ನರೈನ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. 

ಆರ್ ಸಿಬಿ ಪರ ಆರಂಭಿಕವಾಗಿ ಉತ್ತಮ ಬ್ಯಾಟಿಂಗ್ ಮಾಡಿದ ದೇವದತ್ ಪಡಿಕ್ಕಲ್ 21 ರನ್ ಗಳಿಸಿ ಔಟಾಗಿದ್ದರೆ, ವಿರಾಟ್ ಕೊಹ್ಲಿ 39 ರನ್ ಪೇರಿಸಿದ್ದಾರೆ. ಇನ್ನುಳಿದಂತೆ ಯಾರು ಅಬ್ಬರ ಬ್ಯಾಟಿಂಗ್ ಮಾಡದ ಕಾರಣ ಆರ್ ಸಿಬಿ 138 ರನ್ ಗಳಿಸಷ್ಟೇ ಸಾಧ್ಯವಾಯಿತು. 

ಕೋಲ್ಕತ್ತಾ ಪರ ಬೌಲಿಂಗ್ ನಲ್ಲಿ ಸುನಿಲ್ ನರೈನ್ ಮಿಂಚಿದ್ದು 4 ವಿಕೆಟ್ ಪಡೆದಿದ್ದಾರೆ. ಇನ್ನು ಫರ್ಗ್ಯೂಸನ್ 2 ವಿಕೆಟ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com