T20 WC: ಪಾಕ್ ವಿರುದ್ಧದ ಹೀನಾಯ ಸೋಲಿನ ನಂತರ ಟೀಂ ಇಂಡಿಯಾ ನಡೆಗೆ ಐಸಿಸಿ ಶ್ಲಾಘನೆ, ವಿಡಿಯೋ
ಹೆಚ್ಚಿನ ಜನರು ಈ ದೃಶ್ಯಗಳನ್ನು ನೋಡಬೇಕು, ಭಾರತ- ಪಾಕಿಸ್ತಾನ ಕ್ರಿಕೆಟ್ ಅಸಲಿ ಕಥೆ ಇದು. ಕ್ರಿಕೆಟ್ ಮೈದಾನದ ಹೊರಗಿನ ನಿರೀಕ್ಷೆಗಳು, ಸೃಷ್ಟಿಸಲಾಗಿರುವ ಹೈಪ್ ಗೆ ಇದು ಸಂಪೂರ್ಣ ಭಿನ್ನವಾಗಿದೆ ಎಂಬುದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹಂಚಿಕೊಂಡ ವೀಡಿಯೊದಲ್ಲಿ ಕೇಳಿಬರುವ ಮಾತುಗಳು ನಿಜ.
Published: 25th October 2021 12:05 PM | Last Updated: 25th October 2021 02:05 PM | A+A A-

ಕೊಹ್ಲಿ-ಪಾಕ್ ಆಟಗಾರರು
ದುಬೈ: ಹೆಚ್ಚಿನ ಜನರು ಈ ದೃಶ್ಯಗಳನ್ನು ನೋಡಬೇಕು, ಭಾರತ- ಪಾಕಿಸ್ತಾನ ಕ್ರಿಕೆಟ್ ಅಸಲಿ ಕಥೆ ಇದು. ಕ್ರಿಕೆಟ್ ಮೈದಾನದ ಹೊರಗಿನ ನಿರೀಕ್ಷೆಗಳು, ಸೃಷ್ಟಿಸಲಾಗಿರುವ ಹೈಪ್ ಗೆ ಇದು ಸಂಪೂರ್ಣ ಭಿನ್ನವಾಗಿದೆ ಎಂಬುದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹಂಚಿಕೊಂಡ ವೀಡಿಯೊದಲ್ಲಿ ಕೇಳಿಬರುವ ಮಾತುಗಳು ನಿಜ.
ಭಾರತ-ಪಾಕಿಸ್ತಾನ ಪಂದ್ಯ ಎಂದರೆ ಭಾರೀ ನಿರೀಕ್ಷೆಗಳು. ಭಾವೋದ್ವೇಗಗಳು. ಆದರೆ ಮೈದಾನದಲ್ಲಿರುವ ಎಲ್ಲರೂ ‘ಒಂದೇ’ಎಲ್ಲರೂ ಕ್ರಿಕೆಟಿಗರು. ಎದುರಾಳಿ ತಂಡವನ್ನು ಅಭಿನಂದಿಸಬಲ್ಲ ಕ್ರೀಡಾ ಮನೋಭಾವ ಪ್ರದರ್ಶಿಸುವ ಗುಣ ಇರಬೇಕು. ಆ ಸ್ಪೂರ್ತಿಯನ್ನು ಟೀಂ ಇಂಡಿಯಾ ಪ್ರದರ್ಶಿಸಿದೆ.
ಟಿ20 ವಿಶ್ವಕಪ್ ಪಂದ್ಯಾವಳಿಯ ಭಾಗವಾಗಿ. ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ, ಭಾರತದ ವಿರುದ್ಧ 10 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ ಇತಿಹಾಸ ಬದಲಿಸಿದೆ. ಇದರಿಂದ ಟೀಂ ಇಂಡಿಯಾ ಅಭಿಮಾನಿಗಳು ತೀವ್ರ ನಿರಾಶೆಗೊಂಡರು. ಹಲವರಿಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಆದರೆ... ಪಂದ್ಯದ ನಂತರ ಮೈದಾನದಲ್ಲಿನ ಕೆಲವು ದೃಶ್ಯಗಳು ‘ಕ್ರೀಡಾಭಿಮಾನಿ’ಗಳನ್ನು ಆಕರ್ಷಿಸಿದವು. ಪಾಕ್ ಆಟಗಾರರಾದ ಇಮಾದ್ ವಾಸಿಂ, ಶೋಯೆಬ್ ಮಲಿಕ್ ಸೇರಿದಂತೆ ಹಲವರು ಟೀಮ್ ಇಂಡಿಯಾ ಮಾರ್ಗದರ್ಶಕ ಎಂಎಸ್ ಧೋನಿಯೊಂದಿಗೆ ಸ್ವಲ್ಪ ಸಮಯ ಮಾತುಕತೆ ನಡೆಸಿದರು. ಮಿಸ್ಟರ್ ಕೂಲ್ ಕಡೆಯಿಂದ ಸಲಹೆ, ಸೂಚನೆ ಪಡೆದುಕೊಳ್ಳಲು ಉತ್ಸುಕತೆ ತೋರಿದರು.
ಇನ್ನೂ ಪಾಕ್ ನಾಯಕ ಬಾಬರ್ ಅಜಮ್ ಆಗಮಿಸಿ ಧೋನಿಗೆ ಹಸ್ತಲಾಘವ ನೀಡಿದರು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪಂದ್ಯದ ನಂತರ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಮುಗುಳ್ನಗುತ್ತಾ ಪಾಕಿಸ್ತಾನಿ ಆಟಗಾರರಿಗೆ ಶುಭ ಹಾರೈಸಿದರು. ಈ ನಡವಳಿಕೆ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇಂದು ಕ್ರಿಕೆಟ್ ಕ್ರೀಡೆಯ ನಿಜವಾದ ಗೆಲುವು. ಈ ದೃಶ್ಯಗಳು ಎಷ್ಟು ಸುಂದರವಾಗಿವೆ ಎಂದು ನೇಟಿಜನ್ ಗಳು ಕಾಮೆಂಟ್ ಮಾಡಿದ್ದಾರೆ.
Best Moments of My Lifeeeee!!
— Babar Azam Lovers (@BabarAzam_Lover) October 24, 2021
Babar x Virat x Rizwan #PAKvIND#ICCT20WorldCup2021 pic.twitter.com/YMmgt2lH7m