ಟಿ-20 ವಿಶ್ವಕಪ್: ವಿರಾಟ್ ಕೊಹ್ಲಿ ಪಡೆಗೆ ಗುಡ್ ನ್ಯೂಸ್! ನೆಟ್ ನಲ್ಲಿ ಪಾಂಡ್ಯಾ ಬೌಲಿಂಗ್-ಬ್ಯಾಟಿಂಗ್ ಅಭ್ಯಾಸ

ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಎದುರು ನೋಡುತ್ತಿರುವ ಟೀಂ ಇಂಡಿಯಾಗೆ ಶುಭಸುದ್ದಿಯೊಂದು ದೊರೆತಿದ್ದು, ಗಾಯಗೊಂಡಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡಿದ್ದು, ನೆಟ್ ನಲ್ಲಿ ಬ್ಯಾಟಿಂಗ್ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ.
ಹಾರ್ದಿಕ್ ಪಾಂಡ್ಯ ಅಭ್ಯಾಸ
ಹಾರ್ದಿಕ್ ಪಾಂಡ್ಯ ಅಭ್ಯಾಸ

ದುಬೈ: ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೆ ಎದುರು ನೋಡುತ್ತಿರುವ ಟೀಂ ಇಂಡಿಯಾಗೆ ಶುಭಸುದ್ದಿಯೊಂದು ದೊರೆತಿದ್ದು, ಗಾಯಗೊಂಡಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಚೇತರಿಸಿಕೊಂಡಿದ್ದು, ನೆಟ್ ನಲ್ಲಿ ಬ್ಯಾಟಿಂಗ್ ಬೌಲಿಂಗ್ ಅಭ್ಯಾಸ ಮಾಡಿದ್ದಾರೆ.

ಹೌದು.. ಬಹಳ ದಿನಗಳಿಂದ ಬೌಲಿಂಗ್ ಮಾಡದ ಹಾರ್ದಿಕ್ ಪಾಂಡ್ಯ, ಬೌಲಿಂಗ್ ಅಭ್ಯಾಸ ಆರಂಭಿಸಿರುವುದು ಕ್ರಿಕೆಟ್ ಅಭಿಮಾನಿಗಳೆಗೆ ನೆಮ್ಮದಿ ತಂದಿದೆ. ನಿನ್ನೆ ನಡೆಯುತ್ತಿದ್ದ ನಮಿಬಿಯಾ ಹಾಗೂ ಸ್ಕಾಟ್ ಲ್ಯಾಂಡ್ ಪಂದ್ಯದ ವೇಳೆ ಸ್ಟಾರ್ ಸ್ಪೋರ್ಟ್ಸ್, ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುತ್ತಿರುವ ಕೆಲವು ಝಲಕ್ ಗಳನ್ನು ತೋರಿಸಿತು. ಈ ದೃಶ್ಯಗಳಲ್ಲಿ ಹಾರ್ದಿಕ್, ನೆಟ್ಸ್ ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿತು. 20 ನಿಮಿಷಗಳ ಕಾಲ ಅಭ್ಯಾಸ ನಡೆಸಿದ ಹಾರ್ದಿಕ್ ಪಾಂಡ್ಯ, ಶಾರ್ದೂಲ್ ಠಾಕೂರ್ ಹಾಗೂ ಭುವನೇಶ್ವರ್ ಕುಮಾರ್ ಗೆ ಬೌಲಿಂಗ್ ಮಾಡಿದರು. 

ಅಲ್ಲದೆ, ನೆಟ್ ಅಭ್ಯಾಸದ ಬಳಿಕ ಬ್ಯಾಟಿಂಗ್ ಕೋಚ್ ಆಗಿರುವ ವಿಕ್ರಮ್ ರಾಠೋರ್ ಜೊತೆ ಥ್ರೋ ಡೌನ್ ನಲ್ಲಿ ಪಾಲ್ಗೊಂಡರು. ಬೆನ್ನಿನ ಶಸ್ತ್ರ ಚಿಕಿತ್ಸೆ ಬಳಿಕ ಹಾರ್ದಿಕ್ ಪಾಂಡ್ಯ, ಹೆಚ್ಚು ಬೌಲಿಂಗ್ ಮಾಡಿರಲಿಲ್ಲ. ಐಪಿಎಲ್-2ನೇ ಹಂತದಲ್ಲೂ ಅವರು ಬೌಲಿಂಗ್ ನಿಂದ ಹಿಂದೆ ಸರಿದಿದ್ದರು. ಹೀಗಾಗಿ, ಪಾಕಿಸ್ತಾನದ ವಿರುದ್ಧದ ಭಾರತದ ಮೊದಲ ಪಂದ್ಯದಲ್ಲಿ ಪಾಂಡ್ಯ ಬೌಲಿಂಗ್ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಪಂದ್ಯಗಳಲ್ಲಿ ಅವರನ್ನು ಕೈಬಿಡಬೇಕು ಅಂತಾ ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ಇದೀಗ ಅಕ್ಟೋಬರ್ 31ರ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಬೌಲಿಂಗ್ ಅಭ್ಯಾಸ ಮಾಡುತ್ತಿರುವುದು ಕೊಹ್ಲಿ ಪಡೆಗೆ ಶುಭ ಸೂಚಕವಾಗಿದೆ. 
ಇದನ್ನೂ ಓದಿ: ಪಾಕಿಸ್ತಾನದ ವಿರುದ್ಧ ಭಾರತದ ಸೋಲಿಗೆ ಕಾರಣವಾದ ಟಾಪ್ 6 ಅಂಶಗಳು

ಮತ್ತೊಂದು ಟ್ವೀಟ್ ನಲ್ಲಿ ಬಿಸಿಸಿಐ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಮಾಡುತ್ತಿರುವ ಫೋಟೋಗಳನ್ನು ಅಪ್ಲೋಡ್ ಮಾಡಿದೆ. ಈ ಫೋಟದಲ್ಲಿ ಆಟಗಾರರು ಫುಲ್ ಜೋಷ್ ನಲ್ಲಿ ಅಭ್ಯಾಸ ನಡೆಸುತ್ತಿದ್ದು, ಈ ಫೋಟೋಗೆ ಬಿಸಿಸಿಐ ವಿ ಆರ್ ಬ್ಯಾಕ್ ಎಂದು ಟ್ವೀಟ್ ಮಾಡಿದೆ. ಆ ಮೂಲಕ ತಾವು ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಸಿದ್ದ ಎಂಬ ಸಂದೇಶವನ್ನು ಟೀಂ ಇಂಡಿಯಾ ರವಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com