ಬೆನ್ನು ಮೂಳೆ ಇಲ್ಲದವರು.. ಧರ್ಮವನ್ನು ಮಧ್ಯ ಎಳೆದು ತರುತ್ತಾರೆ: ವಿರಾಟ್ ಕೊಹ್ಲಿ ಕಿಡಿ
ಪಾಕಿಸ್ತಾನದ ವಿರುದ್ಧ ಸೋತ ನಂತ್ರ ಮೊಹಮ್ಮದ್ ಶಮಿ ಟ್ರೋಲ್ ಆಗುತ್ತಿರುವುದಕ್ಕೆ ವಿರಾಟ್ ಕೊಹ್ಲಿ ಬೇಸರಗೊಂಡಿದ್ದಾರೆ. ಧರ್ಮದ ಆಧಾರದ ಮೇಲೆ ಒಬ್ಬ ಆಟಗಾರರನ್ನು ಗುರಿ ಮಾಡುವುದು ಅತ್ಯಂತ ಕೆಟ್ಟದ್ದು ಅಂತಾ ಹೇಳಿದ್ದಾರೆ.
Published: 30th October 2021 06:31 PM | Last Updated: 30th October 2021 07:57 PM | A+A A-

ಕೊಹ್ಲಿ-ಶಮಿ
ದುಬೈ: ಪಾಕಿಸ್ತಾನದ ವಿರುದ್ಧ ಸೋತ ನಂತ್ರ ಮೊಹಮ್ಮದ್ ಶಮಿ ಟ್ರೋಲ್ ಆಗುತ್ತಿರುವುದಕ್ಕೆ ವಿರಾಟ್ ಕೊಹ್ಲಿ ಬೇಸರಗೊಂಡಿದ್ದಾರೆ. ಧರ್ಮದ ಆಧಾರದ ಮೇಲೆ ಒಬ್ಬ ಆಟಗಾರರನ್ನು ಗುರಿ ಮಾಡುವುದು ಅತ್ಯಂತ ಕೆಟ್ಟದ್ದು ಅಂತಾ ಹೇಳಿದ್ದಾರೆ.
ವರ್ಚುವಲ್ ಸುದ್ದಿಗೋಷ್ಠಿ ನಡೆಸಿದ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ನಾವು ಸಿದ್ಧವಾಗಿದ್ದೇವೆ. ಪಾಕಿಸ್ತಾನ ವಿರುದ್ಧದ್ಧ ಪಂದ್ಯದಲ್ಲಿ ಏನು ತಪ್ಪು ಮಾಡಿದ್ದೇವೆ ಅನ್ನೋದು ತಮಗೆ ಗೊತ್ತಿದೆ. ಅದನ್ನು ಸುಧಾರಿಸಿಕೊಳ್ಳುಲು ಪ್ರಯತ್ನಿಸುತ್ತೇವೆ ಅಂತಾ ಹೇಳಿದರು.
ಮತ್ತೊಂದೆಡೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಸೋಲಿನ ನಂತರ ಶಮಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಧರ್ಮದ ಆಧಾರದ ಮೇಲೆ ಯಾರನ್ನಾದ್ರೂ ಟಾರ್ಗೆಟ್ ಮಾಡುವುದು ಅತ್ಯಂತ ಕೆಟ್ಟ ವಿಚಾರ ಅಂತಾ ಹೇಳಿದರು.
ನಾಳೆ ನಡೆಯಲಿರುವ ಸೂಪರ್ 12ರ ಘಟ್ಟದ 2ನೇ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಸೆಣಸಲಿವೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ಪಂದ್ಯ ನಡೆಯಲಿದೆ.