ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡಕ್ಕೆ ಮರಳಿದ ಜೋಸ್ ಬಟ್ಲರ್, ಜಾಕ್ ಲೀಚ್!

ಟೀಂ ಇಂಡಿಯಾ ವಿರುದ್ಧದ ಅಂತಿಮ ಹಾಗೂ ಐದನೇ ಟೆಸ್ಟ್ ಪಂದ್ಯಕ್ಕಾಗಿ ವಿಕೆಟ್‌ಕೀಪರ್‌ ಜೋಸ್‌ ಬಟ್ಲರ್‌ ಮತ್ತು ಸ್ಪಿನ್ನರ್‌ ಜಾಕ್‌ ಲೀಚ್‌ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಎರಡನೇ ಮಗುವಿನ ಜನನದ ಕಾರಣದಿಂದ ಬಟ್ಲರ್ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.
ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್
ಇಂಗ್ಲೆಂಡ್ ವಿಕೆಟ್ ಕೀಪರ್ ಜೋಸ್ ಬಟ್ಲರ್

ಮ್ಯಾಂಚೆಸ್ಟರ್: ಟೀಂ ಇಂಡಿಯಾ ವಿರುದ್ಧದ ಅಂತಿಮ ಹಾಗೂ ಐದನೇ ಟೆಸ್ಟ್ ಪಂದ್ಯಕ್ಕಾಗಿ ವಿಕೆಟ್‌ಕೀಪರ್‌ ಜೋಸ್‌ ಬಟ್ಲರ್‌ ಮತ್ತು ಸ್ಪಿನ್ನರ್‌ ಜಾಕ್‌ ಲೀಚ್‌ ಇಂಗ್ಲೆಂಡ್ ತಂಡಕ್ಕೆ ಮರಳಿದ್ದಾರೆ. ಎರಡನೇ ಮಗುವಿನ ಜನನದ ಕಾರಣದಿಂದ ಬಟ್ಲರ್ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು.

ದಿ ಓವಲ್‌ನಲ್ಲಿ ನಡೆದ ಟೆಸ್ಟ್‌ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ದಾಖಲಿಸಿ 2-1 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದೆ. ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದ ಬ್ಯಾಟ್ಸ್‌ಮನ್‌ ಸ್ಯಾಮ್‌ ಬಿಲ್ಲಿಂಗ್ಸ್‌ ಇದೀಗ ಮರಳಿ  ತಂಡ ಸೇರಿಕೊಂಡಿದ್ದಾರೆ  ಎಂದು ಇಂಗ್ಲೆಂಡ್ ಕ್ರಿಕೆಟ್‌ ಮಂಡಳಿ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

 2007ರ ಬಳಿಕ ಇಂಗ್ಲೆಂಡ್‌ ತಂಡ ತವರಿನಲ್ಲಿ  ಭಾರತದ ವಿರುದ್ಧ ಟೆಸ್ಟ್‌ ಕ್ರಿಕೆಟ್‌ ಸರಣಿ ಸೋತಿಲ್ಲ. ಈಗ ಐದು ಟೆಸ್ಟ್‌ಗಳ ಸರಣಿಯಲ್ಲಿ 1-2 ಅಂತರದ ಹಿನ್ನಡೆ ಅನುಭವಿಸಿ ಸರಣಿ ಸೋಲುವ ಒತ್ತಡಕ್ಕೆ ಸಿಲುಕಿದೆ. ಈ ನಡುವೆ ಸತತ ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಆಡಿರುವ ಅನುಭವಿ ವೇಗದ ಬೌಲರ್‌ ಜೇಮ್ಸ್‌ ಆಂಡರ್ಸನ್‌ಗೆ ವಿಶ್ರಾಂತಿ ಸಿಗುವ ಸಾಧ್ಯತೆ ಇದೆ. ಅವರ ಸ್ಥಾನದಲ್ಲಿ ಯುವ ವೇಗದ ಬೌಲರ್‌ ಮಾರ್ಕ್‌ ವುಡ್‌ ಆಡುವ ಹನ್ನೊಂದರ ಬಳಗ ಸೇರುವ ಸಾಧ್ಯತೆ ಇದೆ.

ಮಾರ್ಕ್‌ವುಡ್‌ ಮರಳಿ ಬಂದರೆ ಮಾಡಿದರೆ ತಂಡದ ಬೌಲಿಂಗ್‌ ವಿಭಾಗದಲ್ಲಿ ವೇಗ ಹೆಚ್ಚುತ್ತದೆ. ಓಲ್ಡ್‌ ಟ್ರಾಫರ್ಡ್‌ನಲ್ಲಿ ಪಿಚ್‌ ರಿವರ್ಸ್‌ ಸ್ವಿಂಗ್‌ಗೆ ನೆರವಾಗುತ್ತದೆ  ಎಂದು ಇಂಗ್ಲೆಂಡ್ ಕೋಚ್‌ ಕ್ರಿಸ್‌ ಸಿಲ್ವರ್‌ವುಡ್‌ ಹೇಳಿದ್ದಾರೆ.

ಐದನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಇಂತಿದೆ: ಜೋ ರೂಟ್‌ (ನಾಯಕ), ಮೊಯೀನ್‌ ಅಲಿ, ಜೇಮ್ಸ್‌ ಆಂಡರ್ಸನ್‌, ಜಾನಿ ಬೈರ್‌ಸ್ಟೋವ್, ರೋರಿ ಬರ್ನ್ಸ್‌, ಜೋಸ್‌ ಬಟ್ಲರ್‌, ಸ್ಯಾಮ್‌ ಕರ್ರನ್, ಹಸೀಬ್‌ ಹಮೀದ್‌, ಡ್ಯಾನ್‌ ಲಾರೆನ್ಸ್‌, ಜಾಕ್‌ ಲೀಚ್, ಡಾವಿಡ್‌ ಮಲಾನ್, ಕ್ರೇಗ್‌ ಓವರ್ಟರ್ನ್, ಓಲ್ಲೀ ಪೋಪ್, ಓಲ್ಲೀ ರಾಬಿನ್ಸನ್, ಕ್ರಿಸ್‌ ವೋಕ್ಸ್‌ ಮತ್ತು ಮಾರ್ಕ್‌ವುಡ್‌.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com