ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಟಿ20 ವರ್ಲ್ಡ್ ಕಪ್ ಆಡುವ ಕನಸು: ಅವರ ಕನಸು ನನಸಾಗದು ಎಂದ ಆಸ್ಟ್ರೇಲಿಯ ಟೆಸ್ಟ್ ಕ್ಯಾಪ್ಟನ್

ತಾಲಿಬಾನ್ ಆಫ್ಘನ್ ಮಹಿಳೆಯರಿಗೆ ಕ್ರೀಡಾ ನಿಷೇಧ ಹೇರಿದ ಬೆನ್ನಲ್ಲೇ ಆಫ್ಘನ್ ಕ್ರಿಕೆಟ್ ತಂಡದ ಜೊತೆ ನಡೆಯಬೇಕಿದ್ದ ಒಂದು ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯ ರದ್ದುಗೊಳಿಸಿತ್ತು.
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅಜೀಜುಲ್ಲ ಫಜ್ಲಿ
ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅಜೀಜುಲ್ಲ ಫಜ್ಲಿ

ಕಾಬೂಲ್: ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ತಾಲಿಬಾನ್ ಹೇರಿರುವ ಕಾರಣ ಪುರುಷರ ಕ್ರಿಕೆಟ್ ತಂಡಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಷೇಧಕ್ಕೊಳಗಾಗುವ ಭೀತಿ ಎದುರಾಗಿದೆ. ಅದರ ನಡುವೆಯೇ ತಂಡ ಟಿ೨೦ ವಿಶ್ವಕಪ್ ಟೂರ್ನಮೆಂಟ್ ಪ್ರವೇಶಿಸುವ ವಿಶ್ವಾಸವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅಜೀಜುಲ್ಲ ಫಜ್ಲಿ ವ್ಯಕ್ತಪಡಿಸಿದ್ದಾರೆ.


ತಾಲಿಬಾನ್ ಆಫ್ಘನ್ ಮಹಿಳೆಯರಿಗೆ ಕ್ರೀಡಾ ನಿಷೇಧ ಹೇರಿದ ಬೆನ್ನಲ್ಲೇ ಆಫ್ಘನ್ ಕ್ರಿಕೆಟ್ ತಂಡದ ಜೊತೆ ನಡೆಯಬೇಕಿದ್ದ ಒಂದು ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯ ರದ್ದುಗೊಳಿಸಿತ್ತು. ಆದರೆ ಪಂದ್ಯ ನಡೆಯುವ ಬಗ್ಗೆ ಅಜೀಜುಲ್ಲ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯ ಕ್ರಿಕೆಟ್ ತಂಡದ ಜೊತೆ ಭಿನ್ನಾಭಿಪ್ರಾಯಗಳಿದ್ದು, ಆದಷ್ಟು ಬೇಗನೆ ಮಾತುಕತೆ ಮೂಲಕ ಅದನ್ನು ಪರಿಹರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. 


ಟಿ20 ಆಡುವ ಕನಸನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ನನಸು ಮಾಡಿಕೊಳ್ಳುವುದು ಅಸಾಧ್ಯ ಎಂದು ಆಸ್ಟ್ರೇಲಿಯಾ ಟೆಸ್ಟ್ ತಂಡದ ಕ್ಯಾಪ್ಟನ್ ಟಿಮ್ ಪೇನ್ ಹೇಳಿದ್ದರು. ಹಲವು ದೇಶಗಳು ಅಫ್ಘಾನಿಸ್ತಾನದಲ್ಲಿನ ರಾಜಕೀಯ ಬಿಕ್ಕಟ್ಟನ್ನು ಮುಂದಿರಿಸಿಕೊಂಡು ಅಲ್ಲಿನ ಕ್ರಿಕೆಟ್ ತಂಡದ ಜೊತೆ ಆಟ ಆಡದೇ ಇರುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಅವರು ಈ ಮಾತನ್ನು ಹೇಳಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com