ಐಪಿಎಲ್ 2021: ಸೇಡಿನ ಕಾದಾಟಕ್ಕೆ ಕ್ಷಣಗಣನೆ, ಈ ಐವರು ಆಟಗಾರರ ಮೇಲೆ ಎಲ್ಲರ ಕಣ್ಣು!

ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಐಪಿಎಲ್ ಟೂರ್ನಿಯ ಮುಂದುವರಿದ ಆವೃತ್ತಿ ವಾರಾಂತ್ಯದಲ್ಲಿ ಯುಎಇನಲ್ಲಿ ಆರಂಭವಾಗುತ್ತಿದ್ದು, ಸೇಡಿನ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ.
ಐಪಿಎಲ್
ಐಪಿಎಲ್

ನವದೆಹಲಿ:  ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಐಪಿಎಲ್ ಟೂರ್ನಿಯ ಮುಂದುವರಿದ ಆವೃತ್ತಿ ವಾರಾಂತ್ಯದಲ್ಲಿ ಯುಎಇನಲ್ಲಿ ಆರಂಭವಾಗುತ್ತಿದ್ದು, ಸೇಡಿನ ಕಾದಾಟಕ್ಕೆ ಕ್ಷಣಗಣನೆ ಆರಂಭವಾಗಿದೆ.

ಹೌದು.. ಭಾರತದಲ್ಲಿ ಕರೋನವೈರಸ್ ಸಾಂಕ್ರಾಮಿಕದಿಂದ ಸ್ಥಗಿತಗೊಂಡ ನಾಲ್ಕು ತಿಂಗಳ ನಂತರ ಮತ್ತೆ ಐಪಿಎಲ್ ಟೂರ್ನಿ ಯುನೈಟೆಡ್ ಆರಬ್ ಎಮಿರೇಟ್ಸ್ ನಲ್ಲಿ ಮುಂದುವರೆಯುತ್ತಿದ್ದು, ಟಿ20 ವಿಶ್ವಕಪ್ ಟೂರ್ನಿಯ ಹಿನ್ನಲೆಯಲ್ಲಿ ಹಾಲಿ ಐಪಿಎಲ್ ಟೂರ್ನಿ ಆಟಗಾರರಿಗೆ ತಮ್ಮ ಫಾರ್ಮ್ ಉತ್ತಮಪಡಿಸಿಕೊಳ್ಳಲು ಮಹತ್ವದ ಅವಕಾಶವಾಗಿದೆ. ಇನ್ನು ಹಲವು ಆಟಗಾರರಿಗೆ ಈ ಟೂರ್ನಿ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದು, ಈ ಪೈಕಿ ಪ್ರಮುಖ ಐದು ಆಟಗಾರರನ್ನು ಇಲ್ಲಿ ಹೆಸರಿಸಲಾಗಿದೆ.

ವಿರಾಟ್ ಕೊಹ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಾಕಷ್ಟು ವರ್ಷಗಳಿಂದ ತಮ್ಮ ತಂಡಕ್ಕೆ ಪ್ರಶಸ್ತಿ ತಂದುಕೊಡಲು ಹರಸಾಹಸ ಪಡುತ್ತಿದ್ದಾರೆ. ಆದರೆ ಈ ವರೆಗೂ ಅದರಲ್ಲಿ ಅವರು ಯಶಸ್ವಿಯಾಗಿಲ್ಲ. ಇದರ ನಡುವೆಯೇ ಟಿ20 ವಿಶ್ವಕಪ್ ಆಯೋಜನೆಯಾಗಿದ್ದು, ಈ ಟೂರ್ನಿ ಬಳಿಕ ಕೊಹ್ಲಿ ನಾಯಕತ್ವ ತ್ಯಜಿಸಲು ಮುಂದಾಗಿದ್ದಾರೆ. ಆದರೆ ಕೊಹ್ಲಿಯ ಸಹ ಆಟಗಾರ ರೋಹಿತ್ ಶರ್ಮಾ ಮುಂಬೈಗೆ ಪ್ರಶಸ್ತಿ ತಂದುಕೊಟ್ಟಿದ್ದಾರೆ. ಇದು ಕೊಹ್ಲಿ-ರೋಹಿತ್ ಶರ್ಮಾ ಜೊತೆಗಿನ ಅಘೋಷಿತ ಪೈಪೋಟಿಗೆ ತಿರುವು ನೀಡಿದೆ. ಅಲ್ಲದೆ ಕೊಹ್ಲಿ ಈಗಾಗಲೇ ನಾಯಕತ್ವ ತ್ಯಜಿಸುವ ಮಾತನಾಡಿದ್ದು, ರೋಹಿತ್ ಶರ್ಮಾಅವರು ಕೊಹ್ಲಿಯ ನಂತರ ಭಾರತ ಟ್ವೆಂಟಿ -20 ನಾಯಕನಾಗುವ ನಿರೀಕ್ಷೆಯಿದೆ. ಇದೇ ವೇಳೆ ಭಾರತದ ಟೆಸ್ಟ್ ಮತ್ತು ಏಕದಿನ ಅಂತಾರಾಷ್ಟ್ರೀಯ ತಂಡಗಳ ಉಸ್ತುವಾರಿಯನ್ನು ನಿರ್ವಹಿಸುವ ಕೊಹ್ಲಿಯ ನಾಯಕತ್ವದ ಕೌಶಲ್ಯಗಳ ನಿಕಟ ವಿಶ್ಲೇಷಣೆ ಇರುತ್ತದೆ ಎನ್ನಲಾಗಿದೆ.

ಹಾಲಿ ಐಪಿಎಲ್ ಟೂರ್ನಿಯಲ್ಲಿ ಬೆಂಗಳೂರು ತಂಡ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಇಯಾನ್ ಮಾರ್ಗನ್ (ಕೋಲ್ಕತ್ತಾ ನೈಟ್ ರೈಡರ್ಸ್)
ಇಂಗ್ಲೆಂಡ್‌ನ ವಿಶ್ವಕಪ್ ವಿಜೇತ ನಾಯಕ ಇಯಾನ್ ಮಾರ್ಗನ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ನಾಯಕನಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ, ಆದರೆ ಕಷ್ಟದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಐಪಿಎಲ್ ಪ್ಲೇ-ಆಫ್‌ಗೆ ಏರಿಸಲು ವಿಶೇಷ ಪ್ರಯತ್ನದ ಅಗತ್ಯವಿದೆ. ಕೋಲ್ಕತ್ತಾ ಎಂಟು ತಂಡಗಳಲ್ಲಿ ಏಳನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮಿನ್ಸ್ ನೆರವು ಮಾರ್ಗನ್ ಗೆ ಲಭ್ಯವಾಗುತ್ತಿಲ್ಲ.  ಇತ್ತ ತಂಡದಲ್ಲಿ ಕುಲದೀಪ್ ಯಾದವ್ ರಂತಹ ಪ್ರಭಾವಿ ಸ್ಪಿನ್ನರ್ ತಂಡದಲ್ಲಿ ಇದ್ದರೂ ಮಾರ್ಗನ್ ಗೆ ಅವರಿಂದಲೂ ನೆರವು ಸಿಗುತ್ತಿಲ್ಲ. ಇದು ತಂಡ ಗೆಲುವಿನ ಲಯ ಕಂಡುಕೊಳ್ಳಲು ಅಡ್ಡಿಯಾಗುತ್ತಿದೆ. ಹೀಗಾಗಿ ತಂಡಕ್ಕೆ ಗೆಲುವಿನ ರೆಸಿಪಿ ಹುಡುಕುವ ಒತ್ತಡ ಹೆಚ್ಚಾಗಿದೆ.

ಪ್ರಸ್ತುತ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿ ನ್ಯೂಜಿಲೆಂಡ್ ನ ಕೇನ್ ವಿಲಿಯಮ್ಸನ್ ಜೊತೆ ಐಪಿಎಲ್ ನಲ್ಲಿ ಉಳಿದಿರುವ ಇಬ್ಬರು ವಿದೇಶಿ ನಾಯಕರಲ್ಲಿ ಮಾರ್ಗನ್ ಕೂಡ ಒಬ್ಬರು. ಅವರು ಸೆಪ್ಟೆಂಬರ್ 10 ರಂದು 35 ನೇ ವರ್ಷಕ್ಕೆ ಕಾಲಿಟ್ಟರು.

ರಶೀದ್ ಖಾನ್ (ಸನ್ ರೈಸರ್ಸ್ ಹೈದರಾಬಾದ್)
ತಾಲಿಬಾನ್ ಕಳೆದ ತಿಂಗಳು ಯುದ್ಧ ಪೀಡಿತ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾಗ, 22 ವರ್ಷದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ಇಂಗ್ಲೆಂಡ್‌ನಲ್ಲಿ ನಡೆದ ಹಂಡ್ರೆಡ್ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಎದುರಿಸುತ್ತಿದ್ದರು.  ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತ್ಯಂತ ರೋಚಕ ಗುಣಲಕ್ಷಣಗಳಿರುವ ಆಟಗಾರರಲ್ಲಿ ಒಂದಾಗಿರುವ ರಶೀದ್ ಖಾನ್, ವಿಶ್ವಕಪ್ ತಂಡದಲ್ಲಿ ಸಮಾಲೋಚಿಸದ ಕಾರಣ ಅಫ್ಘಾನಿಸ್ತಾನದ ನಾಯಕನ ಸ್ಥಾನದಿಂದ ಕೆಳಗಿಳಿದು ತಮ್ಮ ಆಕ್ರಮಣಕಾರಿ ಮನೋಧರ್ಮವನ್ನು ತೋರಿಸಿದ್ದರು. ಟೂರ್ನಿಯಲ್ಲಿ ತಮ್ಮ ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ರಶೀದ್ ಕೀ ಪ್ಲೇಯರ್ ಆಗಿದ್ದಾರೆ.  ತಂಡದಲ್ಲಿ ಮೊಹಮ್ಮದ್ ನಬಿ, ಹೊಸ ಅಫ್ಘಾನ್ ನಾಯಕ, ಈಗ ಹೈದರಾಬಾದ್ ನೊಂದಿಗೆ ನಾಲ್ಕನೇ ಋತು ಸೇರಿದಂತೆ ಮತ್ತು 69 ಐಪಿಎಲ್ ಪಂದ್ಯಗಳಲ್ಲಿ 85 ವಿಕೆಟ್ ಪಡೆದಿದ್ದಾರೆ.

ಇಮ್ರಾನ್ ತಾಹಿರ್ (ಚೆನ್ನೈ ಸೂಪರ್ ಕಿಂಗ್ಸ್)
ದಕ್ಷಿಣ ಆಫ್ರಿಕಾದ ಸ್ಪಿನ್ನರ್ 42 ನೇ ವಯಸ್ಸಿನಲ್ಲಿ ಐಪಿಎಲ್‌ನಲ್ಲಿ ಹಿರಿಯ ಆಟಗಾರನಾಗಿದ್ದರೂ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ನಿಧಾನ ಮತ್ತು ಯುಎಇ ಪಿಚ್‌ಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.  ಮೋಡಿಮಾಡುವ ಗೂಗ್ಲಿ ತಾಹಿರ್ ಹೊಂದಿರುವ ಒಂದು ಚಮತ್ಕಾರಿಕ ಪಾತ್ರ. ದಕ್ಷಿಣ ಆಫ್ರಿಕಾದ ಟಿ 20 ವಿಶ್ವಕಪ್ ತಂಡದಿಂದ ಹೊರಗುಳಿದ ನಂತರ, ತಾಹಿರ್ ಅವರು ತಾವು "ಸ್ವಲ್ಪ ಹೆಚ್ಚು ಗೌರವಕ್ಕೆ" ಅರ್ಹರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಅಸಮಾಧಾನವನ್ನು ಅವರು ಐಪಿಎಲ್ ನಲ್ಲಿ ತೋರ್ಪಡಿಸುವ ಸಾಧ್ಯತೆ ಇದೆ. ಹಾಲಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನ ಭಾಗವಾಗಿ ತಮ್ಮನ್ನು ತಂಡದಿಂದ ದೂರವಿಟ್ಟವರಿಗೆ ಉತ್ತರ ನೀಡುವ ತವಕದಲ್ಲಿ ತಾಹಿರ್ ಇದ್ದಾರೆ ಎನ್ನಲಾಗಿದೆ 

ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್) 
ಭಾರತದ "ಯಾರ್ಕರ್ ಕಿಂಗ್" ಜಸ್‌ಪ್ರೀತ್ ಬುಮ್ರಾ ಐಪಿಎಲ್ ಕರ್ತವ್ಯಕ್ಕೆ ಹಿಂದಿರುಗಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಬುಮ್ರಾ ಇಂಗ್ಲೆಂಡ್‌ನಲ್ಲಿ ತಮ್ಮ ವೇಗದ ಮೂಲಕ ಆಂಗ್ಲ ದಾಂಡಿಗರನ್ನು ಕಟ್ಟಿಹಾಕಿದ್ದರು. 2-1 ಅಂತರದಲ್ಲಿ ಮುಗಿಯದ ಟೆಸ್ಟ್ ಸರಣಿಯಲ್ಲಿ 18 ವಿಕೆಟ್ ಪಡೆದಿದ್ದರು. ಇದೀಗ ತಮ್ಮ ಸೇವೆಯನ್ನು ಐದು ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡಕ್ಕಾಗಿ ಮುಂದುವರೆಸಲಿದ್ದಾರೆ. ಬುಮ್ರಾ 99 ಪಂದ್ಯಗಳಲ್ಲಿ 115 ವಿಕೆಟ್‌ಗಳನ್ನು ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com