ಟೀಂ ಇಂಡಿಯಾ ಟಿ-20 ತಂಡದ ನೂತನ ನಾಯಕ ಸ್ಥಾನಕ್ಕೆ ಮುಂಚೂಣಿಯಲ್ಲಿ ರೋಹಿತ್ ಶರ್ಮಾ 

ಯುಎಇಯಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಂತರ  ಟಿ-20 ನಾಯಕನ ಸ್ಥಾನ ತ್ಯಜಿಸುವುದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಕಟವಾದ ನಂತರ ಇದೀಗ ಸಹಜವಾಗಿ ಮುಂದಿನ ನಾಯಕರು ಯಾರು ಎಂಬ ಚರ್ಚೆ ಆರಂಭವಾಗಿದೆ. 
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಚೆನ್ನೈ:  ಯುಎಇಯಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಂತರ  ಟಿ-20 ನಾಯಕನ ಸ್ಥಾನ ತ್ಯಜಿಸುವುದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರಕಟವಾದ ನಂತರ ಇದೀಗ ಸಹಜವಾಗಿ ಮುಂದಿನ ನಾಯಕರು ಯಾರು ಎಂಬ ಚರ್ಚೆ ಆರಂಭವಾಗಿದೆ. 

2017 ರಿಂದ ಎಲ್ಲಾ ಮಾದರಿಯ ನಾಯಕನಾಗಿ ಟೀಂ ಇಂಡಿಯಾವನ್ನು ಮುಂದುವರೆಸಿಕೊಂಡು ಬಂದಿದ್ದರಿಂದ ತೀವ್ರ ಕೆಲಸದ ಒತ್ತಡ ಇದ್ದಿದ್ದಾಗಿ ಅವರು ಹೇಳಿದ್ದಾರೆ. ಆದಾಗ್ಯೂ, ಬ್ಯಾಟ್ಸ್ ಮನ್ ಆಗಿ ಮುಂದುವರೆಯುವುದಾಗಿ 32 ವರ್ಷದ ಕೊಹ್ಲಿ ಗುರುವಾರ ಟ್ವೀಟ್ ಮೂಲಕ ತಿಳಿಸಿದ್ದರು. 

ಒಂದು ವೇಳೆ ಟಿ-20 ಪಂದ್ಯದ ನಾಯಕರಾಗಿ ಐದು ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡಿರುವ ರೋಹಿತ್ ಶರ್ಮಾ  ಬಿಟ್ಟು ಬೇರೆ ಯಾರಾದರೂ ಕೊಹ್ಲಿಯಿಂದ ತೆರವಾಗುವ ನಾಯಕನ ಸ್ಥಾನ ಪಡೆದರೆ ಅದು ದೊಡ್ಡ ಆಶ್ಚರ್ಯ ಎನಿಸಲಿದೆ. 

ವಿರಾಟ್ ಕೊಹ್ಲಿ ನಾಯಕತ್ವ ವಹಿಸಿದ 45 ಪಂದ್ಯಗಳಲ್ಲಿ 27 ಪಂದ್ಯಗಳನ್ನು ಗೆದಿದ್ದರೆ,  ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ ತಂಡ ಗೆಲ್ಲುವಲ್ಲಿ  ರೋಹಿತ್ ಶರ್ಮಾ ಅವರ ನಾಯಕತ್ವ ಪ್ರಮುಖ ಪಾತ್ರ ವಹಿಸಿದೆ. ರೋಹಿತ್ ಶರ್ಮಾ ಎಲ್ಲಾ ಮಾದರಿಯ ಆಟಗಾರರಾಗಿದ್ದು, ತಂಡದಲ್ಲಿ ಅವರ ಬೆಳವಣಿಗೆ ಹಾಗೂ ಕೌಶಲ್ಯ ವೃದ್ಧಿಸುವಲ್ಲಿಯೂ ಅವರು ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. 

2023ರಲ್ಲಿ ನಡೆಯಲಿರುವ ಏಕದಿನ ಪಂದ್ಯಗಳ ವಿಶ್ವಕಪ್ ನಲ್ಲಿ ಕ್ಯಾಪ್ಟನ್ ಆಗಲು ಕೊಹ್ಲಿ ಬಯಿಸಿದರೆ, ರೊಹಿತ್ ಕೂಡಾ ನಾಯಕತ್ವ ಸ್ಥಾನದ ಮೇಲೆ ಕಣ್ಣಿಡಬಹುದು, ಆದಾಗ್ಯೂ, ಎರಡು ವಿಶ್ವಕಪ್ ಮುಂದಿರುವಂತೆ ಈ ಸಂದರ್ಭದಲ್ಲಿ ನಿಗದಿತ ಓವರ್ ಗಳ ಪಂದ್ಯದ ಟೀಂ ಇಂಡಿಯಾದ ನಾಯಕತ್ವ ವಹಿಸಲು ರೋಹಿತ್ ಸೂಕ್ತ ಎಂಬಂತಹ ಮಾತುಗಳು ಕೇಳಿಬರುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com