ನಾಯಕತ್ವದಿಂದ ಕೆಳಗಿಳಿದ ಕೊಹ್ಲಿ, ಮುಂದಿನ ನಾಯಕನ ಆಯ್ಕೆ ಬಗ್ಗೆ ಗವಾಸ್ಕರ್ ಹೇಳಿದ್ದೇನು?
ಟಿ-20 ವಿಶ್ವಕಪ್ ಬಳಿಕ ಟಿ-20 ನಾಯಕತ್ವವನ್ನು ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ ಬೆನ್ನಲ್ಲೇ ಮುಂದಿನ ನಾಯಕನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಪಟ್ಟಿಗೆ ಇದೀಗ ಕ್ರಿಕೆಟ್ ದಂತಕಥೆ ಗವಾಸ್ಕರ್ ಸೇರ್ಪಡೆಯಾಗಿದ್ದಾರೆ.
Published: 17th September 2021 11:37 AM | Last Updated: 17th September 2021 11:37 AM | A+A A-

ಸುನಿಲ್ ಗವಾಸ್ಕರ್ ಮತ್ತು ಕೆಎಲ್ ರಾಹುಲ್
ನವದೆಹಲಿ: ಟಿ-20 ವಿಶ್ವಕಪ್ ಬಳಿಕ ಟಿ-20 ನಾಯಕತ್ವವನ್ನು ತ್ಯಜಿಸುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ ಬೆನ್ನಲ್ಲೇ ಮುಂದಿನ ನಾಯಕನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಪಟ್ಟಿಗೆ ಇದೀಗ ಕ್ರಿಕೆಟ್ ದಂತಕಥೆ ಗವಾಸ್ಕರ್ ಸೇರ್ಪಡೆಯಾಗಿದ್ದಾರೆ.
ಹೌದು.. ಕೊಹ್ಲಿ ನಾಯಕತ್ವ ತ್ಯಜಿಸಿದ ಬಳಿಕ ರೋಹಿತ್ ಶರ್ಮಾ ತಂಡದ ಸಾರಥ್ಯವಹಿಸಬೇಕು. ರೋಹಿತ್ ಗೆ ಕೆಎಲ್ ರಾಹುಲ್ ಉಪನಾಯಕನಾಗಿ ಸಾಥ್ ನೀಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: 2021 ವಿಶ್ವಕಪ್ ನಂತರ ಟಿ-20 ತಂಡದ ನಾಯಕತ್ವ ತ್ಯಜಿಸಲಿದ್ದಾರೆ ವಿರಾಟ್ ಕೊಹ್ಲಿ!
'ಟಿ-20 ನಾಯಕನನ್ನು ಬದಲಾವಣೆ ಮಾಡುತ್ತಿರುವ ಬಿಸಿಸಿಐನ ಮುಂದಾಲೋಚನೆ ಸರಿಯಾಗಿಯೇ ಇದೆ. ಭಾರತ ತಂಡಕ್ಕೆ ಹೊಸ ನಾಯಕನನ್ನು ರೂಪಿಸಲು ಪ್ರಯತ್ನಿಸುತ್ತಿದ್ದರೆ ಕೆ.ಎಲ್. ರಾಹುಲ್ ಅವರನ್ನು ಪರಿಗಣಿಸಬಹುದು. ಇಲ್ಲಿಯವರೆಗೂ ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇಂಗ್ಲೆಂಡ್‌ನಲ್ಲೂ ಅವರ ಪ್ರದರ್ಶನ ಗಮನ ಸೆಳೆದಿತ್ತು. ಐಪಿಎಲ್ ಮತ್ತು 50 ಓವರ್‌ಗಳ ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಅವರ ಪ್ರದರ್ಶನ ಚೆನ್ನಾಗಿದೆ ಹಾಗಾಗಿ, ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಬಹುದು’ ಎಂದು ಸ್ಫೋರ್ಟ್ಸ್ ಥಕ್ ಕಾರ್ಯಕ್ರಮದಲ್ಲಿ ಗವಾಸ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ಆಟಗಾರರನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರಿಂದಲೇ ಎಂಎಸ್ ಧೋನಿ ಯಶಸ್ವಿ ನಾಯಕ: ಮುರಳೀಧರನ್
ಇದೇ ವೇಳೆ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕರಾಗಿ ತೋರಿದ ನಾಯಕತ್ವದ ಗುಣಕ್ಕಾಗಿ ಕರ್ನಾಟಕದ ಸೊಗಸಾದ ಬ್ಯಾಟ್ಸ್‌ಮನ್ ಕೆ.ಎಲ್. ರಾಹುಲ್ ಅವರನ್ನು ಗವಾಸ್ಕರ್ ಪ್ರಶಂಸಿಸಿದರು. ಐಪಿಎಲ್‌ನಲ್ಲಿ ಅವರು ಉತ್ತಮ ನಾಯಕತ್ವದ ಗುಣಗಳನ್ನು ತೋರಿಸಿದ್ದಾರೆ. ನಾಯಕತ್ವದ ಹೊರೆ ತನ್ನ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಲು ಅವರು ಬಿಡಲಿಲ್ಲ. ನಾಯಕನ ಆಯ್ಕೆ ವಿಷಯ ಬಂದಾಗ ಅವರ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ಗವಾಸ್ಕರ್ ಹೇಳಿದರು.