ಕೊಚ್ಚಿ: ಭಾರತ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಅವರ ಸಂಗ್ರಹದಲ್ಲಿದ್ದ ಐಷಾರಾಮಿ ಕಾರು ಲ್ಯಾಂಬೊರ್ಗಿನಿ ಈಗ ಮಾರಾಟಕ್ಕಿದೆ.
ಕೊಚ್ಚಿಯ ಸೆಕೆಂಡ್ ಹ್ಯಾಂಡ್ ಲಕ್ಷುರಿ ಕಾರು ಮಾರಾಟ ಮಳಿಗೆಯಲ್ಲಿ ಈ ಕಾರನ್ನು ಇಡಲಾಗಿದೆ. ಆಸಕ್ತರು ಅಲ್ಲಿಂದ ಕಾರನ್ನು ಖರೀದಿಸಬಹುದು. ಈ ಕಾರಿನ ಬೆಲೆ 1.35 ಕೋಟಿ ರೂ. ನಿಗದಿಪಡಿಸಲಾಗಿದೆ.
ಈ ಕಾರನ್ನು ವಿರಾಟ್ ಅವರು 2015ರಲ್ಲಿ ಖರೀದಿಸಿದ್ದರು ಎನ್ನಲಾಗಿದೆ. ಈ ಕಾರು 10,000 ಕಿ.ಮೀ ಓಡಿದೆ ಎಂದು ಮಾರಾಟ ಮಳಿಗೆಯ ವ್ಯವಸ್ಥಾಪಕರು ತಿಳಿಸಿದ್ದಾರೆ.
ಪುದುಚೇರಿ ನಂಬರ್ ಪ್ಲೇಟ್ ಹೊಂದಿರುವ ಈ ಕಾರನ್ನು ಕೋಲ್ಕತಾ ಕಾರು ಸಂಗ್ರಹಗಾರನಿಂದ ಕೊಚ್ಚಿ ಸೆಕೆಂಡಖ್ಯಾಂಡ್ ಕಾರು ಮಾರಾಟ ಸಂಸ್ಥೆ ಇತ್ತೀಚಿಗಷ್ಟೆ ಖರೀದಿಸಿದೆ.
ಹೀನಾಯ ದಾಖಲೆ ಬರೆದ ಮುಂಬೈ ಇಂಡಿಯನ್ಸ್: 12 ಪಂದ್ಯಗಳಲ್ಲಿ ಚೇಸಿಂಗ್ ನಲ್ಲಿ ಮೊದಲ ಸೋಲು
ನಾಳೆ ಪಾಕ್ ಗೆ ಹೋಗ್ತಿದ್ದೀನಿ ನನ್ನೊಂದಿಗೆ ಯಾರೆಲ್ಲಾ ಬರ್ತೀರಿ?: ನ್ಯೂಜಿಲ್ಯಾಂಡ್ ಸರಣಿ ರದ್ದು ಬಳಿಕ ಗೇಲ್ ಟ್ವೀಟ್
ಮುಂಬೈ ಪರ ಆಡುವ ಮೂಲಕ ಭಾರತ, ವಿಶ್ವದ ಅನೇಕ ಅಭಿಮಾನಿಗಳನ್ನು ಗಳಿಸಿದ್ದೇನೆ; ಮಾಲಿಂಗ
ಸರಣಿ ರದ್ದುಪಡಿಸುವ ಮೂಲಕ ನ್ಯೂಜಿಲ್ಯಾಂಡ್ ಪಾಕಿಸ್ತಾನದ ಕ್ರಿಕೆಟ್ ಅನ್ನು ಕೊಲೆಗೈದಿದೆ: ಶೋಯಬ್ ಅಖ್ತರ್
Advertisement