ಮೊದಲ ಟೆಸ್ಟ್: 2ನೇ ದಿನದಾಟದಂತ್ಯಕ್ಕೆ ಬಾಂಗ್ಲಾ 133/8; ಕುಲದೀಪ್ ಗೆ 4 ವಿಕೆಟ್, ಭಾರತಕ್ಕೆ 271 ರನ್ ಮುನ್ನಡೆ!

ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 133 ರನ್ ಪೇರಿಸಿದೆ. 
ಟೀಂ ಇಂಡಿಯಾ
ಟೀಂ ಇಂಡಿಯಾ

ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂತ್ಯಕ್ಕೆ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 133 ರನ್ ಪೇರಿಸಿದೆ. 

ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಟೆಸ್ಟ್ ಪಂದ್ಯದ ಎರಡನೇ ದಿನದ ಎರಡನೇ ಸೆಷನ್‌ನಲ್ಲಿ ಟೀಂ ಇಂಡಿಯಾ 404 ರನ್ ಗಳಿಗೆ ಪತನವಾಯಿತು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ ನಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್ ಪೇರಿಸಿದೆ. 

ಬಾಂಗ್ಲಾ ಪರ ಜಾಕೀರ್ ಹಸನ್ 20, ಯಾಸೀರ್ ಅಲಿ 4, ಲಿಟನ್ ದಾಸ್ 24, ಮುಷ್ಪಿಕರ್ ರಹೀಂ 28, ನೂರುಲ್ ಹಸನ್ 16, ಮೆಹಿದಿ ಹಸನ್ 16 ಹಾಗೂ ಎಬಾಡೋಟ್ ಹೊಸೈನ್ ಅಜೇಯ 13 ರನ್ ಗಳಿಸಿದ್ದು ಮೂರನೇ ದಿನದಾಟವನ್ನು ಆರಂಭಿಸಲಿದ್ದಾರೆ. ಭಾರತದ ಪರ ಬೌಲಿಂಗ್ ನಲ್ಲಿ ಕುಲದೀಪ್ ಯಾದವ್ 4, ಮೊಹಮ್ಮದ್ ಸಿರಾಜ್ 3 ಹಾಗೂ ಉಮೇಶ್ ಯಾದವ್ 1 ವಿಕೆಟ್ ಪಡೆದಿದ್ದಾರೆ. 

ಭಾರತದ ಪರ ಕೆಎಲ್ ರಾಹುಲ್ 22, ಶುಭ್ಮನ್ ಗಿಲ್ 20 ಹಾಗೂ ವಿರಾಟ್ ಕೊಹ್ಲಿ ಕೇವಲ 1 ರನ್ ಗೆ ಔಟಾಗಿದ್ದಾರೆ. ರಿಷಬ್ ಪಂತ್ 46 ರನ್ ಪೇರಿಸಿದ್ದರೆ ಚೇತೇಶ್ವರ ಪೂಜಾರ 90 ರನ್ ಗಳಿಗೆ ಔಟಾದರು. ಇನ್ನು ಶ್ರೇಯಸ್ ಅಯ್ಯರ್ 86 ರವಿಚಂದ್ರನ್ ಅಶ್ವಿನ್ 58 ಕುಲದೀಪ್ ಯಾದವ್ 40 ರನ್ ಗಳಿಸಿ ಔಟಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com